ಬ್ರೇಕಿಂಗ್ ನ್ಯೂಸ್
03-12-23 10:18 am Bangalore Correspondent ಕರ್ನಾಟಕ
ಬೆಂಗಳೂರು, ಡಿ.3: ಪಂಚ ರಾಜ್ಯಗಳ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಬಹುತೇಕ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರ ಹಿಡಿಯುವತ್ತ ಮುನ್ನುಗ್ಗಿದೆ. ರಾಜಸ್ಥಾನದಲ್ಲಿ 199 ಕ್ಷೇತ್ರಗಳ ಪೈಕಿ ಬಿಜೆಪಿ 110, ಕಾಂಗ್ರೆಸ್ 79 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆಮೂಲಕ ಆಡಳಿತಾರೂಢ ಗೆಹ್ಲೋಟ್ ಸರಕಾರವನ್ನು ಉರುಳಿಸಿ ಬಿಜೆಪಿ ಅಧಿಕಾರ ಹಿಡಿಯುವತ್ತ ಸಾಗಿದೆ.
ಮಧ್ಯಪ್ರದೇಶದಲ್ಲಿ ಬಿಜೆಪಿ ಮತ್ತೆ ಕಮಾಲ್ ಮಾಡಿರುವುದು ಸ್ಪಷ್ಟವಾಗಿದೆ. 230 ಕ್ಷೇತ್ರಗಳ ಪೈಕಿ ಬಿಜೆಪಿ 130ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಗಳಿಸಿದ್ದರೆ, ಕಾಂಗ್ರೆಸ್ 95 ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿದೆ. ಶಿವರಾಜ್ ಸಿಂಗ್ ಚೌಹಾಣ್ ಸರಕಾರಕ್ಕೆ 20 ವರ್ಷಗಳ ಬಳಿಕವೂ ಮತದಾರ ಮತ ನೀಡಿರುವುದು ಸ್ಪಷ್ಟವಾಗಿದೆ. ಕಾಂಗ್ರೆಸ್ ನಾಯಕ ಕಮಲನಾಥ್ ಛಿಂದ್ವಾರ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಕಾಂಗ್ರೆಸಿನಲ್ಲಿ ಪ್ರಬಲ ನಾಯಕ ಇಲ್ಲದಿರುವುದರಿಂದಲೇ ಇಲ್ಲಿ ಪಕ್ಷ ಸೋಲು ಕಂಡಿರುವುದು ಸ್ಪಷ್ಟವಾಗಿದೆ.
ತೆಲಂಗಾಣದಲ್ಲಿ ಅಚ್ಚರಿ ಎನ್ನುವಂತೆ ಕಾಂಗ್ರೆಸ್ ಪೂರ್ಣ ಬಹುಮತ ಪಡೆಯುವತ್ತ ಮುನ್ನುಗ್ಗಿದೆ. 119 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 62 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದ್ದು, ಅಧಿಕಾರ ಹಿಡಿಯುವುದು ಖಾತ್ರಿಯಾಗಿದೆ. ಆಡಳಿತಾರೂಢ ಚಂದ್ರಶೇಖರ ರಾವ್ ನೇತೃತ್ವದ ಬಿಆರ್ ಎಸ್ ಪಕ್ಷವು 43 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ. ಉಳಿದಂತೆ ಬಿಜೆಪಿ 5 ಮತ್ತು ಎಐಎಂಐಎಂ 6 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ. ಬಿಜೆಪಿ ಇಲ್ಲಿ ಯಾವುದೇ ಸಾಧನೆ ಮಾಡದೇ ಇರುವುದು ಕಾಂಗ್ರೆಸಿಗೆ ವರವಾಗಿದೆ. ಹತ್ತು ವರ್ಷಗಳ ಬಳಿಕ ಕಾಂಗ್ರೆಸ್ ಇಲ್ಲಿ ಮತ್ತೆ ಅಧಿಕಾರ ಹಿಡಿಯಲು ಹೊರಟಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿ ಸ್ಪರ್ಧಿಸಿದ ಎರಡು ಕಡೆಯೂ ಮುನ್ನಡೆ ಸಾಧಿಸಿದ್ದಾರೆ.
ಛತ್ತೀಸ್ಗಢದಲ್ಲಿ ರೋಚಕ ಫಲಿತಾಂಶದತ್ತ ಸಾಗಿದೆ. 90 ಕ್ಷೇತ್ರಗಳ ಪೈಕಿ ಆಡಳಿತಾರೂಢ ಕಾಂಗ್ರೆಸ್ 45 ಮತ್ತು ಬಿಜೆಪಿ 43 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ. ಇಲ್ಲಿ ಮ್ಯಾಜಿಕ್ ನಂಬರ್ 45 ಆಗಿರುವುದರಿಂದ ಫಲಿತಾಂಶ ಕುತೂಹಲದತ್ತ ಸಾಗಿದೆ. ಬಹುತೇಕ ಸಮೀಕ್ಷೆಗಳು ಛತ್ತೀಸ್ಗಢದಲ್ಲಿ ಮತ್ತೆ ಕಾಂಗ್ರೆಸ್ ಗೆಲುವು ಪಡೆಯುತ್ತೆ ಎನ್ನಲಾಗಿತ್ತು. ಆದರೆ ಬಿಜೆಪಿಯೂ ಒಂದೇ ರೀತಿಯ ಪೈಪೋಟಿ ನೀಡಿರುವುದು ನೋಡಿದರೆ, ಅಲ್ಲಿ ಅಧಿಕಾರ ಕೈತಪ್ಪುವ ಸಾಧ್ಯತೆ ಕಂಡುಬಂದಿದೆ.
Election Results Live Updates Kannada, Rajasthan, Telangana, Madhya Pradesh, Chhattisgarh, BJP, Congress In Close Fight. Early trends have started coming in as postal ballots are counted. As per the latest trends, BJP is ahead in Madhya Pradesh and Rajasthan while Congress is leading in Chhattisgarh and Telangana.
26-08-25 04:48 pm
Bangalore Correspondent
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
SIT Issues Notice, Sujatha Bhat: ಸುಳ್ಳಜ್ಜಿ ಸು...
25-08-25 10:55 pm
K N Rajanna, Dk Shivakumar: ಅವ್ರು ಆರೆಸ್ಸೆಸ್ ಗ...
25-08-25 06:07 pm
DK Shivakumar, BK Hariprasad: ಕೆಪಿಸಿಸಿ ಅಧ್ಯಕ್...
25-08-25 03:02 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
26-08-25 10:36 am
Mangalore Correspondent
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
Sameer MD, Latest News: ಬುರುಡೆ ರಹಸ್ಯ ; ಬೆಳ್ತಂ...
25-08-25 10:28 pm
Elevate Brand Mangalore 2025: 'ಎಲಿವೇಟ್ ಬ್ರ್ಯಾ...
25-08-25 05:24 pm
26-08-25 05:24 pm
HK News Desk
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm