ಬ್ರೇಕಿಂಗ್ ನ್ಯೂಸ್
03-12-23 11:12 am HK News Desk ಕರ್ನಾಟಕ
ಮೈಸೂರು, ಡಿ.3: ಡೈರಿ ಬರೆದು ಟಾರ್ಗೆಟ್ ಮಾಡುವವರನ್ನು ಪಕ್ಷದ ಸಂಘಟನೆಯಿಂದ ದೂರವಿಟ್ಟರೆ ರಾಜ್ಯದಲ್ಲಿ ಬಿಜೆಪಿ ಪಕ್ಷ ಉದ್ದಾರವಾಗಲಿದೆ ಎಂದು ಮಾಜಿ ಸಿಎಂ ಡಿ.ವಿ. ಸದಾನಂದಗೌಡ, ಯಾರದ್ದೇ ಹೆಸರೇಳದೆ ಟಾಂಗ್ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಗುಂಪುಗಾರಿಕೆ ರಾಜಕಾರಣ ನಿಲ್ಲಬೇಕಿದೆ, ನಮ್ಮ ಗುಂಪುಗಾರಿಕೆಯಿಂದಲೇ ನಾವು ಚುನಾವಣೆ ಸೋತಿರುವುದು. ಹೀಗಾಗಿ ಡೈರಿ ಬರೆದು ಟಾರ್ಗೆಟ್ ಮಾಡುವವರನ್ನು ಸಂಘಟನೆಯಿಂದ ದೂರವಿಡಿ, ಆಗ ರಾಜ್ಯದಲ್ಲಿ ಪಕ್ಷ ಉದ್ದಾರ ಆಗುತ್ತದೆ. ಈ ಬಗ್ಗೆ ನಾನು ವಿಜಯೇಂದ್ರ ಅವರಿಗೆ ಸಲಹೆ ನೀಡಿದ್ದೇನೆ ಎಂದು ಹೇಳಿದರು. ಮೊದಲು ಅಸಮಾಧಾನ ಇರುವವರನ್ನು ಮನವೊಲಿಸಿ, ಸೋಮಣ್ಣ ಅವರ ಬಳಿ ಹೋಗಿ, ಯತ್ನಾಳ್ ಅವರನ್ನು ಭೇಟಿ ಮಾಡಿದ ಬಳಿಕ ಮಠ, ಮಂದಿರಕ್ಕೆ ಹೋಗಿ ಎಂದು ಸಲಹೆ ಮಾಡಿದರು.
ನನಗೆ ರಾಜ್ಯಾಧ್ಯಕ್ಷರಾಗಿರುವವರ ಕಷ್ಟ ಏನೆಂಬುದು ಗೊತ್ತಿದೆ. ನನ್ನ ಅವಧಿಯಲ್ಲಿಯೂ ಅನಂತ ಕುಮಾರ್, ಯಡಿಯೂರಪ್ಪ ಅವರ ಗುಂಪುಗಳಿದ್ದವು. ನಾನು ಪ್ರತಿ ದಿನ ಎಲ್ಲರ ಮನೆಗೆ ಹೋಗಿ ಬೆಣ್ಣೆ ಹಿಡಿದು ನೈಸ್ ಮಾಡಿದ್ದೆ, ಅದೇ ರೀತಿ ಎಲ್ಲರ ಮನವೊಲಿಸಿ. ನಿಮ್ಮ ತಂದೆಯ ಜತೆಗೆ ಉಳಿದ ಹಿರಿಯರ ಸಲಹೆ ಪಡೆಯಿರಿ ಎಂದ ಅವರು, ಮುಂದಿನ ಲೋಕಸಭೆಯಲ್ಲಿ ಯುವಕರಿಗೆ ಅವಕಾಶ ನೀಡುವ ಮೂಲಕ ಹೊಸ ರಾಜತಂತ್ರ ಜಾರಿಗೆ ತನ್ನಿ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸದಾನಂದ ಗೌಡ, ”ನನ್ನ ರಾಜಕೀಯ ಜೀವನದಲ್ಲಿ ಇಂತಹ ಸರಕಾರ ನೋಡಿಲ್ಲ. ನಾನು ಎಲ್ಲಾ ರೀತಿಯ ಅಧಿಕಾರ ಅನುಭವಿಸಿದ್ದೇನ, ಆದರೆ ಈ ರೀತಿಯ ಸರಕಾರ ನೋಡಿಲ್ಲ. ಇದು ಕರ್ನಾಟಕದ ಜನರ ಪಾಪಕ್ಕೆ ಬಂದ ಸರಕಾರವಾಗಿದ್ದು, ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ಟೀಕಿಸಿದರು. ಇದೇ ವೇಳೆ ಡಿ.ಕೆ. ಶಿವಕುಮಾರ್ ಅವರ ಮೇಲಿನ ಸಿಬಿಐ ತನಿಖೆಯನ್ನು ಹಿಂಪಡೆದ ನಿರ್ಧಾರದ ಬಗ್ಗೆ ಮಾತನಾಡಿ, ”ನಾನೂ ಕಾನೂನು ಮಂತ್ರಿಯಾಗಿದ್ದವನು, ಈ ರೀತಿಯ ಕೆಲಸ ಸರಕಾರ ಮಾಡಬಾರದು. ಈ ವಿಷಯದಲ್ಲಿ ಸಿದ್ದರಾಮಯ್ಯ ಅವರಿಗೂ ತೃಪ್ತಿ ಇಲ್ಲ ಎಂದರು.
D.V. Sadananda Gowda in Mysuru, says stop having group politics slams members and that's the reason we have lost our power in Karnataka he added.
22-05-25 01:09 pm
HK News Desk
Bagalkot, Monkey Visits Animal Hospital: ಬಾಗಲ...
22-05-25 12:41 pm
Ola News, Suicide, Bangalore: ಓಲಾ ಕಂಪನಿಯ ಎಐ ವ...
21-05-25 09:16 pm
CM Siddaramaiah, Rain, Visit: ಮಳೆ ಹಾನಿ ಪ್ರದೇಶ...
21-05-25 05:42 pm
Kumki elephants, Pawan Kalyan, Cm Siddaramaia...
21-05-25 02:35 pm
21-05-25 12:57 pm
HK News Desk
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
Operation Sindhoor, Rahul Gandhi,.Pakistan: ಆ...
20-05-25 01:42 pm
ಆಡಲು ಹೋಗಿದ್ದಾಗ ಮಳೆ ಬಂತೆಂದು ನಿಲ್ಲಿಸಿದ್ದ ಕಾರಿನ...
19-05-25 02:25 pm
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
21-05-25 11:09 pm
HK News Desk
Mangalore Beltangady, Akanksha Suicide, Updat...
21-05-25 10:45 pm
MP Kota Srinivas Poojary, Mangalore: ಇಂದಿರಾ ಗ...
21-05-25 09:30 pm
Dr M A Saleem New DG&IGP: ಡಿಜಿಪಿ ಅಲೋಕ್ ಮೋಹನ್...
21-05-25 07:17 pm
Tiranga Yatra, Mangalore: ಮಂಗಳೂರಿನಲ್ಲಿ ತಿರಂಗಾ...
20-05-25 11:12 pm
22-05-25 02:22 pm
HK News Desk
Mangalore Fraud, Currency trading scam: ಕರೆನ್...
19-05-25 09:38 pm
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm