ಬ್ರೇಕಿಂಗ್ ನ್ಯೂಸ್
04-12-23 10:29 pm HK News Desk ಕರ್ನಾಟಕ
ಬೆಳಗಾವಿ, ಡಿ.4: ಡಿಸೆಂಬರ್ 23ರಂದು ನಡೆಸಲು ನಿಗದಿಪಡಿಸಿದ್ದ 545 ಪಿಎಸ್‌ಐ ನೇಮಕಾತಿ ಮರು ಪರೀಕ್ಷೆಯನ್ನು ಒಂದು ತಿಂಗಳು ಮುಂದೂಡಿಕೆ ಮಾಡಲಾಗಿದೆ. ಇದೀಗ ಜನವರಿ 23ಕ್ಕೆ ಮರು ಪರೀಕ್ಷೆಯನ್ನು ಮುಂದೂಡಲಾಗಿದೆ.
ಬೆಳಗಾವಿಯ ಸುವರ್ಣ ಸೌಧದ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಜೊತೆಗೆ ಚರ್ಚೆ ನಡೆಸಿದ ಗೃಹ ಸಚಿವ ಡಾ.ಜಿ ಪರಮೇಶ್ವರ್ ಈ ಕುರಿತು ಮಾಹಿತಿ ನೀಡಿದ್ದಾರೆ. ಪಿಎಸ್ಐ ಮರು ಪರೀಕ್ಷೆಯನ್ನು ಜನವರಿ 23ಕ್ಕೆ ಮುಂದೂಡಲಾಗಿದೆ. ಇನ್ನೇನು ಅಧಿಕೃತ ಆದೇಶ ಹೊರಬೀಳೋದು ಬಾಕಿ ಇದೆ.
ಪರೀಕ್ಷೆ ಮುಂದೂಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ರಾಹುಲ್ ಗಾಂಧಿ, ಪ್ರಿಯಾಂಕ್ ಗಾಂಧಿ ಸೇರಿದಂತೆ ಹಲವರಿಗೆ ಶಾಸಕರಾದ ಎಸ್. ಶರಣಗೌಡ ಪಾಟೀಲ್, ಬಸನಗೌಡ ತುರುವಿಹಾಳ ಪತ್ರ ಬರೆದಿದ್ದರು. ಪತ್ರದಲ್ಲಿ ಡಿ.23ರಂದು 545 ಪಿಎಸ್‌ಐ ನೇಮಕಾತಿಗಾಗಿ ಮರು ಪರೀಕ್ಷೆ ನಿಗದಿ ಪಡಿಸಲಾಗಿದೆ. ಹೀಗೆ ನಿಗದಿ ಪಡಿಸಿರುವಂತ ಪರೀಕ್ಷೆಗೆ ತಯಾರಿ ಆಗೋದಕ್ಕೆ ಕೇವಲ 20 ದಿನಗಳಿವೆ. ತುಂಬಾ ಕಡಿಮೆ ಅವಧಿಯಲ್ಲಿ ಪರೀಕ್ಷೆ ನಿಗದಿ ಪಡಿಸಲಾಗಿದೆ.
ಕೇವಲ 20 ದಿನಗಳಲ್ಲಿ ಓದಿ ಪಿಎಸ್‌ಐ ಪರೀಕ್ಷೆ ಎದುರಿಸೋದು ಅಭ್ಯರ್ಥಿಗಳಿಗೆ ಕಷ್ಟವಾಗಲಿದೆ. ಕನಿಷ್ಠ ಮೂರು ತಿಂಗಳು ಪರೀಕ್ಷೆ ಮುಂದೂಡುವಂತೆ ಶಾಸಕರು ಸಿಎಂ ಸಿದ್ಧರಾಮಯ್ಯ, ರಾಹುಲ್ ಗಾಂಧಿ, ಪ್ರಿಯಾಂಕ್ ಗಾಂಧಿಯಲ್ಲಿ ಮನವಿ ಮಾಡಿದ್ದರು.
ಅಂದಹಾಗೇ ಡಿ.23ರಂದು 545 ಪಿಎಸ್‌ಐ ನೇಮಕಾತಿಗೆ ಮರು ಪರೀಕ್ಷೆ ನಿಗದಿ ಪಡಿಸಲಾಗಿದೆ. ಬೆಂಗಳೂರು ಕೇಂದ್ರದಲ್ಲಿ ಮಾತ್ರವೇ ಈ ಬಾರಿ ಪಿಎಸ್‌ಐ ಮರು ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿ ಆದೇಶಿಸಿತ್ತು. ಈ ಮರು ಪರೀಕ್ಷೆಯಲ್ಲಿ ಈಗ ಒಂದು ತಿಂಗಳು ಅಂದರೆ ಜನವರಿ 23ಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.
The 545 PSI recruitment re-examination scheduled to be held on December 23 has been postponed by one month. Now the re-examination has been postponed to January 23. Home Minister Dr. G Parameshwar held a discussion on this with Chief Minister Siddaramaiah in the session of Suvarna Soudha in Belagavi today.
22-05-25 01:09 pm
HK News Desk
Bagalkot, Monkey Visits Animal Hospital: ಬಾಗಲ...
22-05-25 12:41 pm
Ola News, Suicide, Bangalore: ಓಲಾ ಕಂಪನಿಯ ಎಐ ವ...
21-05-25 09:16 pm
CM Siddaramaiah, Rain, Visit: ಮಳೆ ಹಾನಿ ಪ್ರದೇಶ...
21-05-25 05:42 pm
Kumki elephants, Pawan Kalyan, Cm Siddaramaia...
21-05-25 02:35 pm
21-05-25 12:57 pm
HK News Desk
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
Operation Sindhoor, Rahul Gandhi,.Pakistan: ಆ...
20-05-25 01:42 pm
ಆಡಲು ಹೋಗಿದ್ದಾಗ ಮಳೆ ಬಂತೆಂದು ನಿಲ್ಲಿಸಿದ್ದ ಕಾರಿನ...
19-05-25 02:25 pm
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
21-05-25 11:09 pm
HK News Desk
Mangalore Beltangady, Akanksha Suicide, Updat...
21-05-25 10:45 pm
MP Kota Srinivas Poojary, Mangalore: ಇಂದಿರಾ ಗ...
21-05-25 09:30 pm
Dr M A Saleem New DG&IGP: ಡಿಜಿಪಿ ಅಲೋಕ್ ಮೋಹನ್...
21-05-25 07:17 pm
Tiranga Yatra, Mangalore: ಮಂಗಳೂರಿನಲ್ಲಿ ತಿರಂಗಾ...
20-05-25 11:12 pm
22-05-25 02:22 pm
HK News Desk
Mangalore Fraud, Currency trading scam: ಕರೆನ್...
19-05-25 09:38 pm
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm