Kannada Actress Leelavathi death: ಕನ್ನಡ ಚಿತ್ರರಂಗದ ‘ಬಿಂಕದ ಸಿಂಗಾರಿ’ ನೆನಪು ಮಾತ್ರ ! ‘ವಿಧಿ ವಿಲಾಸ’ಕ್ಕೆ ಓಗೊಟ್ಟು ಮರೆಯಾದ ಅಮರ ನಟಿ ಲೀಲಾವತಿ

08-12-23 06:53 pm       Bangalore Correspondent   ಕರ್ನಾಟಕ

ಹಲವು ಸಮಯಗಳಿಂದ ಅನಾರೋಗ್ಯದಲ್ಲಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ(87) ನಿಧನರಾಗಿದ್ದಾರೆ. ಇಂದು ಮಧ್ಯಾಹ್ನ ಅವರಿಗೆ ಲೋ ಬಿಪಿಯಾಗಿದ್ದು ನೆಲಮಂಗಲದ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ.

ಬೆಂಗಳೂರು, ಡಿ.8: ಹಲವು ಸಮಯಗಳಿಂದ ಅನಾರೋಗ್ಯದಲ್ಲಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ(87) ನಿಧನರಾಗಿದ್ದಾರೆ. ಇಂದು ಮಧ್ಯಾಹ್ನ ಅವರಿಗೆ ಲೋ ಬಿಪಿಯಾಗಿದ್ದು ನೆಲಮಂಗಲದ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ.

ತನ್ನ 11ನೇ ವಯಸ್ಸಿನಲ್ಲಿಯೇ ರಂಗಭೂಮಿಯಲ್ಲಿ ತೊಡಗಿಸಿದ್ದ ಲೀಲಾವತಿ ಸುದೀರ್ಘ ಕಾಲ ರಂಗಭೂಮಿ ಮತ್ತು ಸಿನಿಮಾದಲ್ಲಿ ನಟನಾ ವೃತ್ತಿಯಲ್ಲಿದ್ದರು. 400ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ ಹಿರಿಮೆ ಅವರದ್ದು. ರಾಜಕುಮಾರ್ ಕಾಲದಲ್ಲಿ ಲೀಲಾವತಿ ಜೊತೆಗೆ ಅತಿ ಹೆಚ್ಚು ಪಾತ್ರಗಳನ್ನು ಮಾಡಿದ್ದರು.

Dr. Rajkumar And Leelavathi

ಲೀಲಾವತಿಯವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರು. ಅಲ್ಲಿಯೇ ಹುಟ್ಟಿ ಬೆಳೆದಿದ್ದ ಅವರು ಬಳಿಕ ಮೈಸೂರಿನಲ್ಲಿ ಹೆತ್ತವರ ಜೊತೆಗೆ ನೆಲೆಸಿದ್ದರು. ಅಲ್ಲಿರುವಾಗಲೇ ನಟನೆಯಲ್ಲಿ ತೊಡಗಿಸ್ಕೊಂಡು ವೃತ್ತಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಸುಬ್ಬಯ್ಯ ನಾಯ್ಡು ಅವರ ತಂಡದಲ್ಲಿ ರಂಗಭೂಮಿ ಕಲಾವಿದೆಯಾಗಿ ಹೆಸರು ಮಾಡಿದ್ದರು. 1949ರಲ್ಲಿ ಶಂಕರ್ ಸಿಂಗ್ ಅವರು ನಿರ್ಮಿಸಿದ್ದ ನಾಗಕನ್ನಿಕ ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ನಾಯಕಿಯಾಗಿ ಅಭಿನಯಿಸಿದ ಮೊದಲ ಚಿತ್ರ ಮಾಂಗಲ್ಯ ಯೋಗ. ಡಾ.ರಾಜಕುಮಾರ್ ಅವರೊಂದಿಗೆ ರಣಧೀರ ಕಂಠೀರವ ಚಿತ್ರದಲ್ಲಿ ಮೊದಲಿಗೆ ಅಭಿನಯಿಸಿದ್ದರು.

ರಾಣಿ ಹೊನ್ನಮ್ಮ ಚಿತ್ರದ ಯಶಸ್ಸಿನ ನಂತರ ರಾಜಕುಮಾರ್- ಲೀಲಾವತಿ ಜೋಡಿ ಕನ್ನಡ ಚಿತ್ರರಂಗದಳಲ್ಲಿ ಯಶಸ್ಸಿನ ಉತ್ತುಂಗಕ್ಕೇರಿತ್ತು. 1949ರಿಂದ 2009ರ ವರೆಗೂ ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದು ನಾಯಕ ನಟಿ, ಆನಂತರ ಪೋಷಕ ನಟಿ, ತಾಯಿ, ಅತ್ತೆ ಹೀಗೆ ಎಲ್ಲ ಬಗೆಯ ಪಾತ್ರಗಳನ್ನೂ ಮಾಡಿದ್ದರು. ನಟನೆಯಿಂದ ನಿವೃತ್ತಿಯಾದ ಬಳಿಕ ಮಗ ವಿನೋದ್ ರಾಜ್ ಜೊತೆಗೆ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿದ್ದರು. ಪಶು ಆಸ್ಪತ್ರೆಯನ್ನು ಕಟ್ಟಿಸಿ ಅದನ್ನು ಸಮಾಜಕ್ಕೆ ಅರ್ಪಣೆ ಮಾಡಿದ್ದು ದೊಡ್ಡ ಕೊಡುಗೆಯಾಗಿತ್ತು. ಜೊತೆಗೆ, ಕೃಷಿ ಕಾರ್ಯದಲ್ಲಿಯೂ ತೊಡಗಿದ್ದರು. ಲೀಲಾವತಿ ಅವರಿಗೆ ಮದುವೆಯಾಗಿರಲಿಲ್ಲ. ಆದರೆ ವಿನೋದ್ ರಾಜ್ ಎಂಬ ಮಗನಿದ್ದು, ಅದು ಯಾರ ಮಗ ಎನ್ನುವುದನ್ನು ಅವರೆಂದಿಗೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ವಿನೋದ್ ರಾಜ್ ಕೆಲವು ಕನ್ನಡ ಚಿತ್ರಗಳಲ್ಲಿ ನಟಿಸಿದ್ದರೂ, ಹೆಚ್ಚು ಪ್ರಸಿದ್ಧಿಗೆ ಬಂದಿರಲಿಲ್ಲ.

Leelavathi: ತಮ್ಮ ಕಾಲದ ಅತ್ಯಂತ ಸುಂದರಿ ನಟಿಯಾಗಿದ್ರು ಲೀಲಾವತಿ! ಅವರ ಅಪರೂಪದ ಫೋಟೋಸ್  ಇಲ್ಲಿವೆ | Actress leelavathi passes away old throwback photos viral

Disheartening! 85-year-old veteran south Indian actress Leelavathi is  seriously unwell, Scroll down to know more

ಸಾವಿನ ಬಳಿಕ ಪ್ರತಿಕ್ರಿಯೆ ನೀಡಿರುವ ವಿನೋದರಾಜ್, ನನ್ನ ಜೊತೆಗೆ ಇನ್ನು ಯಾರೂ ಇಲ್ಲ, ತಾಯಿ ಅಗಲಿರುವುದನ್ನು ಸತ್ಯ ಎಂದು ನಂಬಲಾಗುತ್ತಿಲ್ಲ. ಆದರೆ ಅದೇ ಸತ್ಯವಾಗಿದೆ, ಏನು ಹೇಳಬೇಕೆಂದು ತಿಳಿಯುತ್ತಿಲ್ಲ, ಭಗವಂತ ನನ್ನನ್ನು ಒಂಟಿಯಾಗಿ ಮಾಡಿಬಿಟ್ಟ. ತಾಯಿ ಅಂತ್ಯಕ್ರಿಯೆಯನ್ನು ಗೌರವಯುತವಾಗಿ ಅವರೇ ಪ್ರೀತಿಯಲ್ಲಿ ಮಾಡಿದ್ದ ಸೋಲದೇವನಹಳ್ಳಿಯ ತೋಟದಲ್ಲಿ ನೆರವೇರಿಸಲಾಗುವುದು ಎಂದು ತಿಳಿಸಿದ್ದಾರೆ.

Veteran Kannada Actress Leelavathi passed away on Friday at the age of 85. She had been battling age-related illness and was hospitalized in recent days. The actress' final rites are set to take place at her estate in Nelamangala, according to reports. Today evening, her mortal remains will be placed for public viewing at her farmhouse.