Bangalore, Cm Ibrahim, H. D. Kumaraswamy: ಹೆಚ್‌ಡಿ ಕುಮಾರಸ್ವಾಮಿ ಬಿಜೆಪಿಯವರ ಬಕೆಟ್ ಹಿಡಿಯಲು ಹೋಗಿದ್ದಾರೆ ; ನೀವು ಕೇಶವ ಕೃಪದಲ್ಲಿ ಬಾಳಲಾರಿರಿ, ಮತ್ತೆ ಇಲ್ಲಿಗೇ ಬರಬೇಕು, ಸಿಎಂ ಇಬ್ರಾಹಿಂ ವಾಗ್ದಾಳಿ

08-12-23 09:55 pm       Bangalore Correspondent   ಕರ್ನಾಟಕ

ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಬಿಜೆಪಿಯವರಿಗೆ ಬಕೆಟ್ ಹಿಡಿಯಲು ಹೋಗಿದ್ದಾರೆ. ಬಿಜೆಪಿ ಮೈತ್ರಿಯಿಂದ ಅಶೋಕ್, ಯಡಿಯೂರಪ್ಪ ಮಗನ ಹಿಂದೆ ನೀವು ಓಡಾಡ್ಬೇಕು ಅಷ್ಟೇ ಎಂದು ಸಿಎಂ ಇಬ್ರಾಹಿಂ ಕುಮಾರಸ್ವಾಮಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು, ಡಿ 08: ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಬಿಜೆಪಿಯವರಿಗೆ ಬಕೆಟ್ ಹಿಡಿಯಲು ಹೋಗಿದ್ದಾರೆ. ಬಿಜೆಪಿ ಮೈತ್ರಿಯಿಂದ ಅಶೋಕ್, ಯಡಿಯೂರಪ್ಪ ಮಗನ ಹಿಂದೆ ನೀವು ಓಡಾಡ್ಬೇಕು ಅಷ್ಟೇ ಎಂದು ಸಿಎಂ ಇಬ್ರಾಹಿಂ ಕುಮಾರಸ್ವಾಮಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ ಕರೆದು ಮಾತನಾಡಿದ ಸಿಎಂ ಇಬ್ರಾಹಿಂ, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿಯವರೇ ಮೊದಲು ನಿಮ್ಮ ಆರೋಗ್ಯ ನೋಡಿಕೊಳ್ಳಿ. ನೀವು ಕೇಶವ ಕೃಪದಲ್ಲಿ ಬಾಳಲಾರಿರಿ. ನೀವು ಏನು, ನಿಮ್ಮ ಮನಸ್ಥಿತಿ ಏನು ಅನ್ನೋದು ನನಗೆ ಗೊತ್ತಿದೆ. ಮತ್ತೆ ನೀವು ಇಲ್ಲಿಗೇ ಬರಬೇಕು, ಬೇರೆ ವಿಧಿಯಿಲ್ಲ ಎಂದು ಕಾಲೆಳೆದಿದ್ದಾರೆ.

Kumaraswamy on an Accusation Spree

ದೇವೇಗೌಡರಿಗೆ ವಯಸ್ಸಾಗಿದೆ, ಸ್ವಯಂ ನಿರ್ಧಾರ ತೆಗೆದುಕೊಳ್ಳಲಾರರು. ಐವರು ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಜನವರಿ ನಂತರ ಒಂದು ಅಂತಿಮ ತೀರ್ಮಾನ ತಿಳಿಸುತ್ತೇವೆ. ದೇವೆಗೌಡರು, ಕುಮಾರಸ್ವಾಮಿಯವರ ಆರೋಗ್ಯದ ದೃಷ್ಠಿಯಿಂದ ನಾನು ಕೆಲಸ ನಿಧಾನಕ್ಕೆ ಮಾಡುತ್ತಿದ್ದೇನೆ. ಅವರಿಗೆ ಟೆನ್ಷನ್ ಕೊಡಬಾರದು ಅಂತ ಕೆಲಸ ನಿಧಾನ ಮಾಡಿದ್ದೇನೆ ಎಂದರು ನನ್ನನ್ನು ಯಾರೂ ಉಚ್ಚಾಟನೆ ಮಾಡಿಲ್ಲ. ನಮ್ಮಪ್ಪ ನನ್ನ ಜೆಡಿಎಸ್ ರಾಜ್ಯಾಧ್ಯಕ್ಷನನ್ನಾಗಿ ಮಾಡಿಲ್ಲ. 9 ಕ್ಕೆ ಅವರು ಮೀಟಿಂಗ್ ಕರೆದಿದ್ದಾರೆ. ಅವರ ಮೀಟಿಂಗ್‌ಗೆ ಯಾರು ಬರ್ತಾರೆ, ನಮ್ಮ ಮೀಟಿಂಗ್‌ಗೆ ಯಾರು ಬರ್ತಾರೆ ಅಂತ ನೋಡಿ. ನಾನು ಯಾವ ಶಾಸಕರನ್ನೂ ಸಭೆಗೆ ಕರೆದಿಲ್ಲ. 5 ಮಂದಿ ಶಾಸಕರು ನಮ್ಮ ಜೊತೆಗೆ ಇದ್ದಾರೆ. ಅದರೆ 12 ಜನ ಆಗಲಿ ಎಂದು ಕಾಯುತ್ತಿದ್ದೇನೆ. 12 ಜನ ಬಂದ ಕೂಡಲೇ ನಾನೇ ಪ್ರೆಸ್‌ಮೀಟ್ ಮಾಡುತ್ತೇನೆ. ನನ್ನನ್ನು ಕುಮಾರಸ್ವಾಮಿ ಯಾವ ಮೀಟಿಂಗ್‌ಗೂ ಕರೆದಿಲ್ಲ ಎಂದು ತಿಳಿಸಿದರು.

ನಾನು ಅಮಿತ್ ಶಾಗೆ ಕೇಳ್ತಿದ್ದೆ. ನಮ್ಮ ಜಾತ್ಯತೀತ ತತ್ವ ಒಪ್ತೀರ ಅಂತ. ಕುಮಾರಸ್ವಾಮಿಯವರೇ ನೀವು ಅಶೋಕ್, ಯಡಿಯೂರಪ್ಪ ಮಗನ ಹಿಂದೆ ಓಡಾಡ್ಬೇಕು. ಬಿಜೆಪಿಯವರೇ ಅವರ ಹಿಂದೆ ನಿಲ್ಲೋಕೆ ರೆಡಿ ಇಲ್ಲ. ಅದರೆ ನೀವು ಅವರ ಹಿಂದೆ ನಿಲ್ಲೋಕೆ ರೆಡಿಯಾಗಿದ್ದೀರಿ. ಎಲ್ಲರಿಗೂ ಬಕೆಟ್ ಹಿಡಿಯಲು ಕುಮಾರಸ್ವಾಮಿ ಹೋಗಿದ್ದಾರೆ. ಕುಮಾರಸ್ವಾಮಿ ನನ್ನ ಬ್ರದರ್, ಅವರ ಮೇಲೆ ಕೋಪ ಇಲ್ಲ. ಅವರಿಗೆ ಗೊತ್ತಾಗುತ್ತದೆ ಅವರ ಜೊತೆ ಹೋಗಿದ್ದು ತಪ್ಪು ಅಂತ ಎಂದರು.

ಕುಮಾರಸ್ವಾಮಿ ದತ್ತಮಾಲೆ ಹಾಕ್ತೀನಿ ಅಂದಿದ್ದಾರೆ. ಸಂತೋಷ, ಹಾಕಿ. 15 ದಿನ ಅಲ್ಲ, ವರ್ಷಪೂರ್ತಿ ಹಾಕಿ. ಅಯ್ಯಪ್ಪ ಮಾಲೆಯನ್ನೂ ಹಾಕಿ. ಮಾಲೆ ಹಾಕಿದಾಗ ಯಾರೂ ಸುಳ್ಳು ಹೇಳೋಹಾಗಿಲ್ಲ ಎಂದು ಸಿಎಂ ಇಬ್ರಾಹಿಂ ಕುಮಾರಸ್ವಾಮಿಗೆ ಟಾಂಗ್ ನೀಡಿದರು.

Cm Ibrahim slams at H. D. Kumaraswamy, says hes a Bucket of Bjp.