Parliament attack, Prathap simha pass, kharge: ಸಂಸತ್​​ ದಾಳಿ ; ವಿಧಾನಸಭೆಯಲ್ಲಿ ಬಿಜೆಪಿ - ಕಾಂಗ್ರೆಸ್ ಮಧ್ಯೆ ವಾಕ್ಸಮರ, ಕಾಂಗ್ರೆಸ್ ಸಂಸದರು ಪಾಸ್ ಕೊಟ್ಟಿದ್ರೆ ಏನಾಗುತ್ತಿತ್ತು ಸ್ವಾಮಿ? ಅಶೋಕ್, ಬಿಜೆಪಿಯವರು ಸುಮ್ನಿರ್ತಿದ್ರಾ? ಖರ್ಗೆ ಗರಂ

13-12-23 08:48 pm       HK News Desk   ಕರ್ನಾಟಕ

ಸಂಸತ್​​ನಲ್ಲಿ ನಡೆದ ಭದ್ರತಾ ಲೋಪ ಘಟನೆ ವಿಧಾನಸಭೆಯಲ್ಲೂ ಪ್ರತಿಧ್ವನಿಸಿತು. ಸಂಸತ್ ಘಟನೆ ವಿಧಾನಸಭೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ವಾಕ್ಸಮರಕ್ಕೆ ಕಾರಣವಾಯಿತು. ಈ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಂಸತ್ ದಾಳಿ ಘಟನೆಯನ್ನು ಎಲ್ಲರೂ ಖಂಡಿಸಬೇಕಾಗುತ್ತದೆ. ಸಂಸತ್​ಗೆ ಹೋಗಿ ಯಾರಿಂದಲೋ ಪಾಸ್ ಪಡೆದು ಹೋಗಿದ್ದಾರೆ.

ಬೆಳಗಾವಿ, ಡಿ 13: ಸಂಸತ್​​ನಲ್ಲಿ ನಡೆದ ಭದ್ರತಾ ಲೋಪ ಘಟನೆ ವಿಧಾನಸಭೆಯಲ್ಲೂ ಪ್ರತಿಧ್ವನಿಸಿತು. ಸಂಸತ್ ಘಟನೆ ವಿಧಾನಸಭೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ವಾಕ್ಸಮರಕ್ಕೆ ಕಾರಣವಾಯಿತು. ಈ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಂಸತ್ ದಾಳಿ ಘಟನೆಯನ್ನು ಎಲ್ಲರೂ ಖಂಡಿಸಬೇಕಾಗುತ್ತದೆ. ಸಂಸತ್​ಗೆ ಹೋಗಿ ಯಾರಿಂದಲೋ ಪಾಸ್ ಪಡೆದು ಹೋಗಿದ್ದಾರೆ. ಸಂಸತ್ ಸದಸ್ಯರೊಬ್ಬರಿಂದ ಪಾಸ್ ಪಡೆದಿದ್ದಾರೆ ಎನ್ನಲಾಗಿದೆ.‌ ಪಾಸ್​ಗಳನ್ನು ಕೊಡುವಾಗ ಗೊತ್ತಿರುವವರಿಗೆ ಮಾತ್ರ ಕೊಡಬೇಕು. ಗೊತ್ತಿಲ್ಲದವರಿಗೆ ಪಾಸ್ ಕೊಡಬಾರದು. ಈ ಘಟನೆ ಮೇಲ್ನೋಟಕ್ಕೆ ಭದ್ರತಾ ಲೋಪವಾಗಿದೆ ಎಂದರು.

ಭದ್ರತಾ ಸಿಬ್ಬಂದಿ ಅವರನ್ನು ಸರಿಯಾಗಿ ತಪಾಸಣೆ ಮಾಡಿಲ್ಲ ಅನ್ಸುತ್ತೆ. ಸಚಿವರಿಗೆ ಸೇರಿ ಎಲ್ಲರಿಗೂ ತಪಾಸಣೆ ಮಾಡ್ತಾರೆ. ತಪಾಸಣೆ ಮಾಡಿದರೂ ಹೇಗೆ ಸ್ಮೋಕ್ ಸ್ಪ್ರೇ‌ ಮಾಡಿದ್ರು?. ನಾನು ಅನುಮಾನ ವ್ಯಕ್ತಪಡಿಸ್ತಿಲ್ಲ.‌ ಇಲ್ಲೂ ಕೂಡಾ ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕು.‌ ಪಾಸ್ ಪಡೆದು ಒಳ್ಳೆಯವ್ರೂ ಬರಬಹುದು, ಕೆಟ್ಟವರೂ ಬರಬಹುದು, ಉಗ್ರರೂ ಬರಬಹುದು. ಹಿಂದೆ ಸಂಸತ್​ಗೆ ಉಗ್ರರು‌ ನುಗ್ಗಿದ್ರು. ಗೃಹ ಸಚಿವರ ಬಳಿ ಅಧಿವೇಶನಕ್ಕೆ ಭಾರೀ ಪೊಲೀಸ್ ಬಂದೋಬಸ್ತ್ ಕೊಡಲು ಹೇಳ್ತೀನಿ. ಸ್ಪೀಕರ್​ ಅವರು ಕೂಡಾ ನಿಮ್ಮ ಸಿಬ್ಬಂದಿಗೆ ಹೇಳಿ ಭದ್ರತಾ ಲೋಪ ಆಗದಂತೆ‌ ನೋಡಿಕೊಳ್ಳಬೇಕು ಎಂದು ಹೇಳಿದರು.

ಪಾಸ್ ಕೊಡುವಾಗಲೂ ಎಚ್ಚರಿಕೆ ವಹಿಸಬೇಕು.‌ ಈ ಘಟನೆಯನ್ನು ನಾನು ತೀವ್ರವಾಗಿ ಖಂಡಿಸ್ತೇನೆ. ಅದೃಷ್ಟವಶಾತ್​ ಸಂಸತ್​ನಲ್ಲಿ ಏನೂ ಆಗಿಲ್ಲ. ತಕ್ಷಣ ಸ್ಪೀಕರ್ ಕಲಾಪ ಮುಂದೂಡಿ ಎಲ್ಲರೂ ಹೊರಗೆ ಹೋಗಲು ಅವಕಾಶ ಮಾಡಿದ್ರು. ಈ ಕುರಿತು ಬಹಳ ಎಚ್ಚರಿಕೆ ವಹಿಸೋದು ಒಳ್ಳೆಯದು. ಇಂತಹ ಘಟನೆ ಮರುಕಳಿಸಬಾರದು ಎಂದರು.

Priyank Kharge male or female? asks MP Pratap Simha

ಪ್ರತಾಪ್ ಸಿಂಹ ಇಂಥವರಿಗೆ ಏಕೆ ಪಾಸ್ ಕೊಟ್ರು?:

ಇದೇ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಸಂಸದ ಪ್ರತಾಪ್ ಸಿಂಹ ಬಹಳ ಬುದ್ಧಿವಂತ. ಅವರ್ಯಾಕೆ ಇಂಥವರಿಗೆ ಪಾಸ್ ಕೊಟ್ರೋ. ಅವರ ಹೆಸರು ಹೇಳಲು ಇಲ್ಲಿ ನನಗೆ ಇಷ್ಟ ಇಲ್ಲ.‌ ಎಲ್ರೂ ಫೋನ್ ಮಾಡ್ತಿದ್ದಾರೆ, ಏನು, ಯಾಕೆ ಅಂತ. ನಾನು ಟಿವಿಯಲ್ಲಿ ನೋಡಿದೆ. ಮೇಲಿಂದಲೇ ಅವರು ಜಂಪ್ ಮಾಡಿದಾರೆ. ಸಂಸದರೆಲ್ಲ ಇಲಿಗಳಂತೆ ಬಚ್ಚಿಕೊಳ್ತಿದ್ದಾರೆ. ಈ ಬಗ್ಗೆ ನಮ್ಮ ಪ್ರತಿಪಕ್ಷದಲ್ಲಿರುವವರೇ ಹೊಣೆ ಹೊರಬೇಕು. ಅವರು ಏನು ಬುದ್ಧಿವಾದ ಹೇಳ್ತಾರೋ ಹೇಳಲಿ ಎಂದರು.

Karnataka Assembly Elections 2023: Congress Chief DK Shivakumar Breaks  Down, Gives Credit To Gandhi Family

ಡಿಕೆಶಿ ರಾಜಕೀಯ ಬೆರೆಸುತ್ತಿದ್ದಾರೆ:

ಈ ಬಗ್ಗೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಇದು ಖಂಡನೆ ಮಾಡುವ ವಿಚಾರ. ಸಿಎಂ, ಗೃಹ ಸಚಿವರು ಚೆನ್ನಾಗಿಯೇ ಮಾತಾಡಿದ್ರು. ಆದರೆ ಡಿಕೆಶಿ ಅವರು ಈ ವಿಚಾರ ರಾಜಕೀಯಕ್ಕೆ ಬಳಸಿಕೊಂಡ್ರು. ಅವರ ತಮ್ಮನೂ ಸಂಸದ, ಅವರೇ ಪಾಸ್ ಕೊಟ್ಟಿದ್ದಿದ್ರೆ ಏನ್ ಮಾಡ್ತಿದ್ರಿ. ಡಿಕೆಶಿಗೆ ಅಶೋಕ್ ಟಾಂಗ್ ನೀಡಿದರು. ಈ ವೇಳೆ ಗದ್ದಲ ಏರ್ಪಟ್ಟಿತು.

ಕಾಂಗ್ರೆಸ್ ಸಂಸದರು ಪಾಸ್ ಕೊಟ್ಟಿದ್ರೆ ಏನಾಗುತ್ತಿತ್ತು?:

ಈ ಬಗ್ಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಇದೇ ಪಾಸ್ ಕಾಂಗ್ರೆಸ್ ಸಂಸದರು ಕೊಟ್ಟಿದ್ದಿದ್ರೆ ಏನಾಗ್ತಿತ್ತು?. ಆಗ ಅಶೋಕ್, ಬಿಜೆಪಿಯವರು ಸುಮ್ನಿರ್ತಿದ್ರಾ?. ಆಗ‌ ನಮಗೆಲ್ಲ ದೇಶದ್ರೋಹದ ಪಟ್ಟ ಕಟ್ಟುತ್ತಿದ್ದರು. ಈಗ ಪ್ರತಾಪ್ ಸಿಂಹ ಬಗ್ಗೆ ಇವರ ನಿಲುವೇನು? ಎಂದು ಪ್ರಶ್ನಿಸಿದರು.

ಇಂತಹ ಘಟನೆಯನ್ನು ನಾವು ಖಂಡಿಸುತ್ತೇವೆ. ಕಾಂಗ್ರೆಸ್ ಸಂಸದರು ಕೊಟ್ಟಿದ್ದರೆ ಭಯೋತ್ಪಾದಕರ ಹಣೆ ಪಟ್ಟಿ ಕಟ್ತಿದ್ರು. ಇವರದು ಮಾತ್ರ ದೇಶಪ್ರೇಮ. ನಮ್ಮದು ಮಾತ್ರ ದೇಶ ದ್ರೋಹನಾ?.ಕಾಂಗ್ರೆಸ್ ಸಂಸದರಾಗಿದ್ದರೆ ಸುಮ್ಮನಿರ್ತಿದ್ರಾ? ಎಂದು ಆರ್.ಅಶೋಕ್​ಗೆ ನೇರ ಪ್ರಶ್ನೆ ಹಾಕಿದರು.

Karnataka BJP leader R Ashoka talks about 'plan B' and 'operation' post  results

ಕಾಂಗ್ರೆಸ್-ಬಿಜೆಪಿ ಮಧ್ಯೆ ವಾಕ್ಸಮರ:

ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ಮಧ್ಯೆ ತೀವ್ರ ಗದ್ದಲ ಏರ್ಪಟ್ಟಿತು. ಈ ಗದ್ದಲಕ್ಕೆ ಡಿಸಿಎಂ ಕಾರಣ ಎಂದು ಸುರೇಶ್ ಕುಮಾರ್ ಆಕ್ಷೇಪಿಸಿದರು. ಈ ವೇಳೆ ಸುರೇಶ್ ಕುಮಾರ್ ವಿರುದ್ಧ ತಿರುಗಿಬಿದ್ದ ಡಿಕೆಶಿ, ಕಾಂಗ್ರೆಸ್ ನವರು ಮಾಡಿದ್ರೆ ಸುಮ್ಮನಿರ್ತಿದ್ರಾ?. ಇಷ್ಟೊತ್ತಿಗೆ ನೀವು ಅಲ್ಲೋಲಕಲ್ಲೋಲ ಮಾಡಿಬಿಡ್ತಿದ್ರಿ ಎಂದು ತಿರುಗೇಟು ನೀಡಿದರು.

Parliament attack, BJP Congres fight over prathap simha pass, kharge turns angry. Says what if Congress leaders had issued pass.