G S Umapathy, RSS News: ಆರೆಸ್ಸೆಸ್ ದಕ್ಷಿಣ ಪ್ರಾಂತ ಸಂಘ ಚಾಲಕರಾಗಿ ಜಿ.ಎಸ್ ಉಮಾಪತಿ ;  ಮಂಗಳೂರು ವಿಭಾಗಕ್ಕೆ ಡಾ.ನಾರಾಯಣ ಶೆಣೈ ನೇಮಕ

17-12-23 10:20 pm       Bangalore Correspondent   ಕರ್ನಾಟಕ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ನೂತನ ಪ್ರಾಂತ ಸಂಘಚಾಲಕರಾಗಿ ಜಿ.ಎಸ್. ಉಮಾಪತಿ ಅವರಿಗೆ ಜವಾಬ್ದಾರಿ ನೀಡಲಾಗಿದೆ. 

ಬೆಂಗಳೂರು, ಡಿ.17: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ನೂತನ ಪ್ರಾಂತ ಸಂಘಚಾಲಕರಾಗಿ ಜಿ.ಎಸ್. ಉಮಾಪತಿ ಅವರಿಗೆ ಜವಾಬ್ದಾರಿ ನೀಡಲಾಗಿದೆ. 

ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಆಡನೂರು ಗ್ರಾಮದವರಾದ ಉಮಾಪತಿ, ದಾವಣಗೆರೆಯಲ್ಲಿ ಬಿ.ಇ. ಇಂಜಿನಿಯರಿಂಗ್ ವಿದ್ಯಾಭ್ಯಾಸ ಪೂರೈಸಿದ್ದರು. ಬಳಿಕ ಮಂಗಳೂರಿನ ಎನ್‌ಐಟಿಕೆಯಲ್ಲಿ ಎಂ.ಇ. ಇನ್ ಸ್ಟ್ರಕ್ಚರ್ಸ್ ಹಾಗೂ ಕೋಲ್ಕತಾದಲ್ಲಿ ಎಂ.ಇ. ಇನ್ ಪಬ್ಲಿಕ್ ಹೆಲ್ತ್ ವ್ಯಾಸಂಗ ಮಾಡಿದ್ದಾರೆ. ಕರ್ನಾಟಕ ಸರ್ಕಾರದ ಪಿಡಬ್ಲ್ಯುಡಿ ಇಲಾಖೆಯಲ್ಲಿ ಅಧೀಕ್ಷಕ ಇಂಜಿನಿಯರ್ ಆಗಿದ್ದ ಅವರು 2018ರಲ್ಲಿ ನಿವೃತ್ತಿ ಹೊಂದಿದ್ದರು. 

ವಿದ್ಯಾರ್ಥಿ ದೆಸೆಯಿಂದಲೇ ಸಂಘದ ಸ್ವಯಂ ಸೇವಕರಾಗಿ ನಂತರ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿರುವ ಉಮಾಪತಿ, ಬಳ್ಳಾರಿ ಜಿಲ್ಲೆಯ ಕಾರ್ಯವಾಹರಾಗಿ, ದಾವಣಗೆರೆ ಜಿಲ್ಲೆಯ ವ್ಯವಸ್ಥಾ ಪ್ರಮುಖರಾಗಿ, ದಾವಣಗೆರೆ ಜಿಲ್ಲಾ ಸಂಘ ಚಾಲಕರಾಗಿ, ಶಿವಮೊಗ್ಗ ವಿಭಾಗದ ವಿಭಾಗದ ಸಂಘ ಚಾಲಕರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಪ್ರಸ್ತುತ ಕರ್ನಾಟಕ ದಕ್ಷಿಣ ಪ್ರಾಂತ ಪ್ರಾಂತ ಸಂಘಚಾಲಕರಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ. 

ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಂಗಳೂರು ಮಹಾನಗರ ಸಂಘಚಾಲಕರಾಗಿ ಮಿಲಿಂದ್ ಗೋಖಲೆ ಹಾಗೂ ಮಂಗಳೂರು ವಿಭಾಗ ಸಂಘ ಚಾಲಕರಾಗಿ ಡಾ. ನಾರಾಯಣ ಶೆಣೈ ಅವರಿಗೆ ಜವಾಬ್ದಾರಿ ನೀಡಲಾಗಿದೆ.

G S Umapathy appointed as RSS south India head. Native of Chitradurga but he has roots of studying in Mangalore at NITK. Dr Narayan Shenoy given incharge for Mangalore