ಬ್ರೇಕಿಂಗ್ ನ್ಯೂಸ್
23-12-23 09:45 pm HK News Desk ಕರ್ನಾಟಕ
ಹಾಸನ, ಡಿ.24: ಹಿಜಾಬ್ ನಿಷೇಧ ಮಾಡಿದವರು ಯಾರು? ಬಿಜೆಪಿ ಸರ್ಕಾರ ಹಿಜಾಬ್ ನಿಷೇಧ ಮಾಡಿರಲಿಲ್ಲ. ಉಡುಪಿಯಲ್ಲಿ ಒಂದಿಬ್ಬರು ಮುಸ್ಲಿಂ ವಿದ್ಯಾರ್ಥಿನಿಯರು ಪ್ರತಿಭಟನೆ ಮಾಡಿದ್ದಕ್ಕೆ ತರಗತಿಯಲ್ಲಿ ನಿಷೇಧ ಮಾಡುವಂತಾಗಿತ್ತು. ಆನಂತರ ಕೋರ್ಟಿನಲ್ಲೂ ಅದನ್ನು ಎತ್ತಿ ಹಿಡಿಯಲಾಗಿದೆ. ಸಿದ್ದರಾಮಯ್ಯ ಈಗ ಓಟಿಗಾಗಿ, ಓಲೈಕೆಗಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಹಿಜಾಬ್ ಉಡುಪಿಯಿಂದ ಪ್ರಾರಂಭವಾಯಿತು. ಕೂಡಲೇ ನಮ್ಮ ಬಿಜೆಪಿ ಸರ್ಕಾರ, ಅದು ಸ್ಕೂಲ್ ಮೇನೇಜ್‌ಮೆಂಟ್‌ಗೆ ಬಿಟ್ಟ ವಿಷಯ ಎಂದಿತ್ತು. ನಾವು ಕೈಬಿಟ್ಟ ತಕ್ಷಣ ಕೋರ್ಟ್‌ಗೆ ಹೋದವರು ಯಾರು, ಅವರೇ ಕೋರ್ಟ್‌ಗೆ ಹೋಗಿದ್ದರು. ಸರ್ಕಾರ ಹೇಳಿರುವುದು ಸರಿಯಿದೆ, ಆಯಾ ಶಾಲಾ-ಕಾಲೇಜುಗಳಿಗೆ ಬಿಟ್ಟ ವಿಷಯ ಎಂದಿತ್ತು ಕೋರ್ಟ್. ಹಿಜಾಬ್ ಧರಿಸಬೇಕು ಎಂಬ ಪದ್ದತಿಯಿಲ್ಲ, ಅದನ್ನು ನೀವೇ ಮಾಡ್ಕಂಡಿರೋದು ಅಂತ ಆದೇಶ ಕೊಟ್ಟಿದ್ದಾರೆ.
ಈಗ ಸುಪ್ರೀಂಕೋರ್ಟ್‌ನಲ್ಲಿ ಕೇಸ್ ನಡೀತಿದೆ. ಸರ್ಕಾರ ಇವತ್ತು ವಾಪಾಸ್ ತಗೊಂಡಿದ್ದೀವಿ, ಇನ್ಮೇಲೆ ನೀವು ಹಿಜಾಬ್ ಹಾಕಂಡು ಹೋಗಬಹುದು ಅಂತ ಹೇಳಿದ್ರೆ ಇದು ಕಾನೂನು ಉಲ್ಲಂಘನೆ ಮಾಡಿದಂತೆ, ಕಾನೂನಿನ ವಿರುದ್ಧ. ಕೋರ್ಟ್ ಆದೇಶದ ವಿರುದ್ಧ ಈ ಸರ್ಕಾರ ನಡೆದುಕೊಳ್ಳುತ್ತಿದೆ. ಸಂಘರ್ಷ ಮಾಡಬೇಕೆನ್ನುವುದೇ ಕಾಂಗ್ರೆಸ್‌ನ ಉದ್ದೇಶವಾಗಿದೆ.
ಸಿದ್ಧರಾಮಯ್ಯ ಅವರು ದುರಹಂಕಾರದ ನಡೆ ನಡೆಯಲು ಹೊರಟಿದ್ದಾರೆ. ಐದು ವರ್ಷ ನಮಗೆ ಅಧಿಕಾರ ಕೊಟ್ಟಿದ್ದಾರೆ ನಾವು ಏನು ಬೇಕಾದರೂ ಮಾಡಿದರೆ ನಡೆಯುತ್ತೆ ಎನ್ನುವ ದುರಂಹಕಾರ. ಬರ ಪರಿಸ್ಥಿತಿ ಜನರನ್ನು ಕಿತ್ತು ತಿನ್ನುತ್ತಿದೆ. ನಾಲ್ಕು ತಿಂಗಳಿನಿಂದ ಬರ ಇದೆ ಎನ್ನುತ್ತಲೇ ಇದ್ದಾರೆ. ರೈತರಿಗೆ ನೀವು, ಒಂದು ರೂಪಾಯಿ ನೀಡಿಲ್ಲ. ಮತ್ತೆ ಏನಕ್ಕೆ ಇದ್ದೀರಾ ನೀವು. ಮೊನ್ನೆ ಪ್ರಧಾನಿ ನೋಡಲು ಹೋಗಿದ್ದೀರಿ, ಅವರಿಂದ ಸಹಕಾರ ಕೋರಲು ಹೋಗಿದ್ರಿ. ದೆಹಲಿಗೆ ಹೋಗಲು ನಿಮಗೆ ಐಷಾರಾಮಿ ವಿಮಾನ ಬೇಕಾಗಿತ್ತಾ.. ಸಿನಿಮಾದಲ್ಲೂ ಆ ರೀತಿ ಫೋಸ್ ಕೊಡಲ್ಲ. ಬರ ಬಂದಿರುವುದು ರೈತರಿಗೆ, ಕರ್ನಾಟಕ ರಾಜ್ಯದ ಜನರಿಗೆ ಹೊರತು ಕಾಂಗ್ರೆಸ್ ಲೀಡರ್‌ಗಳಿಗಲ್ಲ. ನಮ್ಮ ಟ್ಯಾಕ್ಸ್ ಹಣ ತುಂಬುತ್ತಿದ್ದೇವೆ.
ಮೋಜು, ಮಸ್ತಿ ಮಾಡುವುದನ್ನು ಮೊದಲಿನಿಂದ ಅಭ್ಯಾಸ ಮಾಡಿಕೊಂಡಿದ್ದಾರೆ. ಆ ಕೆಲಸವನ್ನು ಇವತ್ತೂ ಕೂಡ ಮಾಡ್ತಿದ್ದಾರೆ. ಜನ ಸಿದ್ದರಾಮಯ್ಯನಿಂದ ಹಿಡಿದು, ಆ ಮಂತ್ರಿ ಜಮೀರ್ ಅಹ್ಮದ್ ಸೇರಿ ಎಲ್ಲರಿಗೂ ಛೀಮಾರಿ ಹಾಕಬೇಕು. ಇಂತಹ ಪರಿಸ್ಥಿತಿ ಇದ್ದರೂ ಹೈಬ್ರೀಡ್ ಕಾರು, ವಿಮಾನಗಳು ಬೇಕು ಇವರಿಗೆ. ಬೇರೆ ವಿಮಾನಗಳಿಲ್ಲವಾ, ಜನ ಓಡಾಡುವುದಿಲ್ಲವಾ ಅದರಲ್ಲಿ, ನಿಮಗೆ ಅಪಮಾನವಾ.. ನಿಮಗೆ ಹ್ಯೂಬ್ಲಾಯ್ಡ್ ವಾಚ್ ಬೇಕು. ಒಂದು ಲಕ್ಷದ ಶೂ ಬೇಕು, ಒಂದು ಕೋಟಿ ರೂಪಾಯಿ ವಾಚ್ ಬೇಕು.
ಬರ ಮುಚ್ಚಿಡಲು ಹೋದರೆ ನಿಮ್ಮ ಬಟ್ಟೆ ಹರೀತಾರೆ..!
ಬರ ಪರಿಸ್ಥಿತಿಯನ್ನು ಮುಚ್ಚಿಡಲು, ಡೈವರ್ಟ್ ಮಾಡಲು ಹೋದರೆ ಜನ ನಿಮ್ಮ ಬಟ್ಟೆ ಹರೀತಾರೆ. ಮುಖ್ಯಮಂತ್ರಿಯಿಂದ ಹಿಡಿದು ಎಲ್ಲಾ ಮಂತ್ರಿಗಳ ಬಟ್ಟೆಯನ್ನು ರೈತರು, ದಲಿತರು, ಬಡ ಜನರು ಸೇರಿ ಹರಿತಾರೆ. ಪರಿಸ್ಥಿತಿ ಬಹಳ ಹದಗೆಟ್ಟಿದೆ, ಇದರ ಬಗ್ಗೆ ಎಚ್ಚರಿಕೆ ಇರಬೇಕಾಗಿತ್ತು, ಅವರಿಗೆ ಇಲ್ಲ. ಹಿಜಾಬ್ ಇಶ್ಯೂನೇ ಅಲ್ಲ ಈಗ, ಅದು ಮುಗಿದು ಹೋಗಿದೆ. ಮುಸ್ಲಿಂ ಕಂಟ್ರಿಗಳಲ್ಲೇ ಹಿಜಾಬ್‌ನ್ನು ಯಾರು ಹಾಕಲ್ಲ. ಈಜಿಪ್ಟ್‌ನಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಬೆತ್ತಲೆ ಮೆರವಣಿಗೆ ಮಾಡಿಬಿಟ್ಟರು ನಮಗೆ ಹಿಜಾಬ್ ಬೇಕಾಗಿಲ್ಲ ಎಂದು. ಅಂತಹ ದೇಶಗಳಲ್ಲೇ ಆ ರೀತಿ ಆದರೆ ಇದು ಎಂತಹದ್ದು.
ಈಗ ಕಾಂಗ್ರೆಸ್‌ನವರಿಗೆ ಹಿಜಾಬ್ ಬೇಕಾಗಿದೆ. ಓಟ್ ಬ್ಯಾಂಕ್‌ಗಾಗಿ ಹಿಜಾಬ್, ಟಿಪ್ಪುಸುಲ್ತಾನ್ ಬೇಕಾಗಿದೆ. ಇದು ಸರಿಯಾದ ಕ್ರಮವಲ್ಲ, ಸರ್ಕಾರ ಜನರಿಗೆ ದ್ರೋಹ, ವಂಚನೆ, ಮೋಸ ಮಾಡುತ್ತಿದೆ. ಜನ ಹಿಂದೆ ಬಿದ್ದಿದ್ದಾರೆ, ಅವರಿಗೆ ತಕ್ಕನಾದ ಉತ್ತರವನ್ನು ಸದ್ಯದಲ್ಲೇ ಕೊಡ್ತಾರೆ. ಅವರು ಯಾವುದೇ ತಪ್ಪು ಮಾಡಿದರೂ ನಾವು ಸುಮ್ಮನೇ ಕುಳಿತುಕೊಳ್ಳುವವರಲ್ಲ ಎಂದರು.
Who banned the hijab? The BJP government did not ban the hijab. In Udupi, a couple of Muslim students protested and the class was banned. It was later upheld in court. Bjp SC Morcha state president Chalavadi Narayanaswamy said Siddaramaiah is now making such statements for votes and appeasement.
18-07-25 10:59 pm
Bangalore Correspondent
ರಾಜ್ಯದಲ್ಲಿ ಪರಮಾಣು ಸ್ಥಾವರಕ್ಕೆ ಒಪ್ಪಿಗೆ ; ಮತ್ತೆ...
18-07-25 10:31 pm
Accident in Chitradurga: ಟಾಟಾ ಏಸ್ ಗಾಡಿ ಹರಿದು...
18-07-25 08:01 pm
ಸಿಎಂ ಸಿದ್ದರಾಮಯ್ಯ ನಿಧನ ; ಫೇಸ್ಬುಕ್ ಅವಾಂತರಕ್ಕೆ...
18-07-25 07:11 pm
Dharmasthala Case, SIT, CM Siddaramaiah: ಧರ್ಮ...
18-07-25 04:48 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
18-07-25 10:11 pm
Mangalore Correspondent
Mangalore, Floodwater, Kumpala death: ಎಡೆಬಿಡದ...
18-07-25 03:19 pm
Mangalore Rain, Thokottu: ಧಾರಕಾರ ಮಳೆ ; ತೊಕ್ಕೊ...
18-07-25 02:36 pm
"Celebrating Excellence: 37 Achievers Felicit...
17-07-25 06:30 pm
Wild Elephant Attack, Dharmasthala: ಧರ್ಮಸ್ಥಳ...
17-07-25 04:14 pm
18-07-25 12:40 pm
Mangalore Correspondent
Mangalore Fraud, WhatsApp, crime: ಕಂಪನಿಯ ಎಂಡಿ...
18-07-25 12:01 pm
Mangalore Kadri Police, Crime, Snake; ಹೆಬ್ಬಾವ...
18-07-25 11:36 am
Crore Fraud, Roshan Saldanha Arrest, Mangalor...
17-07-25 10:42 pm
Uppinangady Murder: ಕೌಟುಂಬಿಕ ಕಲಹ ; ಮಾತಿಗೆ ಮಾತ...
17-07-25 02:30 pm