ಬ್ರೇಕಿಂಗ್ ನ್ಯೂಸ್
18-11-20 05:59 pm Bangalore Correspondent ಕರ್ನಾಟಕ
ಬೆಂಗಳೂರು, ನವೆಂಬರ್ 18: ಸಿಎಂ ಯಡಿಯೂರಪ್ಪ ಸದ್ಯದಲ್ಲೇ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡೋದು ಪಕ್ಕಾ ಆಗಿದೆ. ಈ ವೇಳೆ, ಕೆಲವು ಹಿರಿಯ ಸಚಿವರಿಗೆ ಕೊಕ್ ನೀಡುವುದಕ್ಕೂ ಸಿಎಂ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಹಾಗೊಂದ್ವೇಳೆ ನಡೆದರೆ, ಮೊದಲ ವಿಕೆಟ್ ಪತನವಾಗೋದು ಕರಾವಳಿಯ ಏಕೈಕ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರದ್ದು.
ಅತ್ತ ಸಿಎಂ ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆಯುವುದಕ್ಕೆ ದೆಹಲಿಗೆ ತೆರಳಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಜೊತೆ ಮಾತನಾಡಿ, ವಿಸ್ತರಣೆಯೋ, ಪುನಾರಚನೆಯೋ ಏನಾದ್ರೂ ಒಂದನ್ನು ಮಾಡಿಕೊಂಡು ಬರ್ತೀನಿ ಎಂದಿದ್ದಾರೆ. ಇದೇ ವೇಳೆ, ರಾಜ್ಯ ರಾಜಕೀಯದಲ್ಲಿ ಹಲವರು ಸಂಪುಟ ಸೇರಲು ಲಾಬಿ ಆರಂಭಿಸಿದ್ದಾರೆ. ಈ ಪೈಕಿ ಹೊಸತಾಗಿ ಶಾಸಕರಾಗಿರುವ ಎಂಟಿಬಿ ನಾಗರಾಜ್, ಮುನಿರತ್ನ ಸಚಿವರಾಗುವುದು ಖಚಿತ ಎನ್ನಲಾಗುತ್ತಿದೆ. ಇವರ ಜೊತೆ ಸಂಪುಟ ಸೇರುವ ಇತರರು ಯಾರು ಎನ್ನುವ ಬಗ್ಗೆ ಕುತೂಹಲ ಎದ್ದಿದೆ.

ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ
ಕರಾವಳಿಯ ಏಕೈಕ ಸಚಿವ ಮತ್ತು ದಕ್ಷಿಣ ಕನ್ನಡ ಉಸ್ತುವಾರಿ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್ ಸದಸ್ಯರು. ಅಲ್ಲದೆ, ಪರಿಷತ್ತಿನಲ್ಲಿ ಅತ್ಯಂತ ಅನುಭವೀ ಸದಸ್ಯರೂ ಹೌದು. ಸದ್ಯಕ್ಕೆ ವಿಧಾನ ಪರಿಷತ್ ಸಭಾಪತಿಯಾಗಿ ಕಾಂಗ್ರೆಸಿನ ಪ್ರತಾಪಚಂದ್ರ ಶೆಟ್ಟಿ ಇದ್ದಾರೆ. ಪ್ರತಾಪಚಂದ್ರ ಶೆಟ್ಟಿಯವರು ಕೂಡ ಉಡುಪಿ ಮೂಲದವರು. ಇತ್ತೀಚೆಗೆ ನಡೆದ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ನಾಲ್ಕು ಮಂದಿ ಗೆದ್ದು ಪರಿಷತ್ ಸೇರಿದ್ದಾರೆ. ಇದರಿಂದ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಬಲ 31ಕ್ಕೇರಿದ್ದರೆ, ಕಾಂಗ್ರೆಸ್ ಬಲ 29ಕ್ಕೆ ಕುಸಿದಿದೆ. ಜೆಡಿಎಸ್ ಸದಸ್ಯರು 14 ಮಂದಿ ಇದ್ದಾರೆ.
ಈಗಿನ ಸನ್ನಿವೇಶದಲ್ಲಿ ಜೆಡಿಎಸ್, ಪರೋಕ್ಷವಾಗಿ ಬಿಜೆಪಿ ಬೆಂಬಲಕ್ಕೆ ನಿಂತಿದೆ. ಹೀಗಾಗಿ ಡಿಸೆಂಬರ್ ನಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಪರಿಷತ್ತಿನ ಹಾಲಿ ಅಧ್ಯಕ್ಷರನ್ನು ಬದಲಾಯಿಸಲು ಬಿಜೆಪಿ ನಿಶ್ಚಯಿಸಿದ್ದು ಅವಿಶ್ವಾಸ ನಿರ್ಣಯ ಮಂಡಿಸಲು ತಯಾರಾಗಿದೆ. ಪ್ರತಾಪಚಂದ್ರ ಶೆಟ್ಟರ ಬದಲಿಗೆ, ಉಡುಪಿಯವರೇ ಆಗಿರುವ ಹಿರಿಯ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರನ್ನು ಪರಿಷತ್ ಸಭಾಪತಿಯಾಗಿಸಲು ಬಿಜೆಪಿ ಚಿಂತನೆ ನಡೆಸಿದೆ. ಕೋಟ ತೆರವು ಮಾಡುವ ಸಚಿವ ಸ್ಥಾನಕ್ಕೆ ಹೊಸಬರನ್ನು ತರುವ ಚಿಂತನೆ ಬಿಜೆಪಿಗಿದೆ. ಇಂಥ ಬದಲಾವಣೆ ನಡೆದರೆ, ದಕ್ಷಿಣ ಕನ್ನಡ ಅಥವಾ ಉಡುಪಿಯಿಂದ ಯಾರಾದ್ರೂ ಒಬ್ಬರನ್ನು ಸಚಿವ ಸ್ಥಾನಕ್ಕೇರಿಸುವ ಸಾಧ್ಯತೆ ಇದೆ.
ಸಚಿವ ಸ್ಥಾನಕ್ಕೆ ಯಾರು ?
ಕೋಟ ಶ್ರೀನಿವಾಸ ಪೂಜಾರಿಯಿಂದ ತೆರವಾಗುವ ಸಚಿವ ಸ್ಥಾನಕ್ಕೆ ಹೊಸಬರನ್ನು ತರಲು ಬಿಜೆಪಿ ರೆಡಿಯಾಗಿದೆ. ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಬಿಜೆಪಿ ಶಾಸಕರಿದ್ದಾರೆ. ಇದರಲ್ಲಿ ಅನುಭವ, ಹಿರಿತನದಲ್ಲಿ ನೋಡಿದರೆ ಸುಳ್ಯ ಶಾಸಕ ಎಸ್.ಅಂಗಾರ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕಾರ್ಕಳ ಶಾಸಕ ಸುನಿಲ್ ಕುಮಾರ್, ಉಡುಪಿಯ ರಘುಪತಿ ಭಟ್ ಇದ್ದಾರೆ. ಈ ನಾಲ್ವರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು. ಮಂಗಳೂರಿನ ಭಾಗದವರನ್ನೇ ಸಚಿವ ಸ್ಥಾನಕ್ಕೆ ತರಬೇಕೆಂಬ ನಿರ್ಧಾರಕ್ಕೆ ಬಂದರೆ, ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್ ಅದೃಷ್ಟ ಖುಲಾಯಿಸಿದರೆ ಅಚ್ಚರಿ ಇಲ್ಲ.
District Incharge minister of Dakshina Kannada Kota Srinivas Pooajry has got high chances of becoming the Chairman of Karnataka Legislative council says sources.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
12-10-26 10:01 pm
HK News Staffer
St Agnes College: ದಸರಾ ಸಂಭ್ರಮಕ್ಕೆ ಪರೀಕ್ಷೆ ಅಡ್...
12-10-26 11:30 am
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm