ಬ್ರೇಕಿಂಗ್ ನ್ಯೂಸ್
27-12-23 06:32 pm Bangalore Correspondent ಕರ್ನಾಟಕ
ಬೆಂಗಳೂರು, ಡಿ 27: ರಾಜ್ಯದ ಎಲ್ಲಾ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯವಾಗಿ ಇರಬೇಕೆಂದು ಆಗ್ರಹಿಸಿ ನಾರಾಯಣ ಗೌಡ ಅವರ ಕರ್ನಾಟಕ ರಕ್ಷಣ ವೇದಿಕೆ ಬಣ ಬುಧವಾರ ಬೆಂಗಳೂರಿನಲ್ಲಿ ಬೀದಿಗಿಳಿದು ಆಕ್ರೋಶ ಹೊರ ಹಾಕಿ ಭಾರೀ ಪ್ರತಿಭಟನೆ ನಡೆಸಿದೆ.
ಯಲಹಂಕದ ಏರ್ ಪೋರ್ಟ್ ರಸ್ತೆ ಬಳಿ ಇರುವ ಮಾಲ್ ಆಫ್ ಏಷ್ಯ ಎದುರು ಕರವೇ ಕಾರ್ಯಕರ್ತರು ಭಾರೀ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು. ಏರ್ ಪೋರ್ಟ್ ರಸ್ತೆಯ ವಿವಿಧ ಮಳಿಗೆಗಳಲ್ಲಿರುವ ಇಂಗ್ಲಿಷ್ ಫ್ಲೆಕ್ಸ್ ಬೋರ್ಡ್ ಗಳನ್ನೂ ಹರಿದು ಹಾಕಿ ಕಿಡಿ ಕಾರಿದರು. ಪ್ರತಿಭಟನೆ ವೇಳೆ ಹಲವೆಡೆ ಕಲ್ಲು ತೂರಾಟ ನಡೆಸಿದ್ದು, ಬಡಿಗೆಗಳನ್ನು ಹಿಡಿದು ಗಾಜುಗಳನ್ನು ಧ್ವಂಸ ಮಾಡಿರುವ ಬಗ್ಗೆ ವರದಿಯಾಗಿದೆ.
ಮಹಿಳಾ ಕಾರ್ಯಕರತೆಯರೂ ಸೇರಿ ಪ್ರತಿಭಟನಾ ನಿರತರನ್ನು ಭಾರೀ ಸಂಖ್ಯೆಯ ಪೊಲೀಸರು ತಡೆದಿದ್ದು, ಕಾನೂನು ಕೈಗೆತ್ತಿಕೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ. ಎಚ್ಚರಿಕೆಯನ್ನೂ ಮೀರಿ ಮುಂದುವರಿದ ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಮಫಲಕದಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ನೀಡಲೇ ಬೇಕು ಎನ್ನುವುದು ಕರವೇ ಆಗ್ರಹವಾಗಿದೆ.
ಈಗಾಗಲೇ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಶೇಕಡಾ 60ರಷ್ಟು ಕನ್ನಡವಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆದೇಶ ಹೊರಡಿಸಿದ್ದರು
ಎಂಜಿ ರೋಡ್, ಬ್ರಿಗೇಡ್ ರೋಡ್, ಯುಬಿ ಸಿಟಿಯತ್ತ ಬೈಕ್ ಗಳಲ್ಲಿ ಆಗಮಿಸಿರುವ ಅಂಗಡಿಗಳ ಮುಂದೆ ಮತ್ತು ರಸ್ತೆ ಬದಿಗಳಲ್ಲಿ ಇಂಗ್ಲಿಷ್ ಫಲಕಗಳನ್ನು ಕಿತ್ತೆಸೆಯುವ ಮೂಲಕ ಆಕ್ರೋಶ ಹೊರ ಹಾಕಿದರು.
ಈ ವೇಳೆ ಪೊಲೀಸರು ಮತ್ತು ಕರವೇ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತು. ಪ್ರತಿಭಟನಾಕಾರರ ನಿಯಂತ್ರಣಕ್ಕಾಗಿ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು
ನಗರದಲ್ಲಿ ಟ್ರಾಫಿಕ್ ಜಾಮ್ ;
ಕೆಲವು ಕಡೆಗಳಲ್ಲಿ ಕರವೇ ಕಾರ್ಯಕರ್ತರನ್ನ ವಶಕ್ಕೆ ಪಡೆಯುವ ಮೂಲಕ ಪರಿಸ್ಥಿತಿ ತಿಳಿಗೊಳಿಸಲಾಗಿದೆ. ಇತ್ತ ಪ್ರತಿಭಟನೆಯಿಂದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಕರವೇ ಅಧ್ಯಕ್ಷ ನಾರಾಯಣಗೌಡ, ನನ್ನನ್ನ ಅರೆಸ್ಟ್ ಮಾಡಿದ್ರೆ ನೆಟ್ಟಗಿರಲ್ಲ. ನಮಗೆ ಪ್ರತಿಭಟನೆ ಮಾಡಲು ಅವಕಾಶ ಕೊಡಿ.. ಇಲ್ಲದಿದ್ರೆ ದಾರಿಯುದ್ದಕ್ಕೂ ಗಲಭೆ ಆಗುತ್ತೆ ಅಂತಾ ಎಚ್ಚರಿಕೆ ನೀಡಿದ್ರು.
ಪ್ರತಿಭಟನೆ ವೇಳೆ ಉಪಸ್ಥಿತರಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ ಅವರು ಮಾತನಾಡಿ, ಮಾಲ್ ಆಫ್ ಏಷ್ಯಾ ಮಾಲೀಕರು ಮತ್ತು ಇತರ ಮಾಲ್ ಮಾಲೀಕರು ಶೇ. 60 ಕನ್ನಡ ನಾಮಫಲಕ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಇವರು ಪೊಲೀಸರ ರಕ್ಷಣೆ ತೆಗೆದುಕೊಂಡಿರಬಹುದು. ಆದರೆ, ನಿಯಮಗಳನ್ನು ಪಾಲಿಸದಿದ್ದರೆ, ಕನ್ನಡಕ್ಕೆ ಆದ್ಯತೆ ನೀಡದಿದ್ದರೆ, ಕ.ರಾ.ವೇ ಕಾರ್ಯಕರ್ತರು ಆಸ್ತಿಪಾಸ್ತಿಗಳನ್ನು ನಾಶಪಡಿಸುತ್ತಾರೆಂದು ಎಚ್ಚರಿಸಿದರು.
ನಿನ್ನೆಯಷ್ಟೇ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸಭೆ ನಡೆಸಿ, 15 ದಿನಗಳಲ್ಲಿ ಕನ್ನಡ ನಾಮಫಲಕಗಳ ಹಾಕುವಂತೆ ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ಸೂಚನೆ ನೀಡಿದ್ದರು.
Karave Protest : ಅಯ್ಯಯ್ಯೋ ಅನ್ಯಾಯ.. ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮವಾಗಲಿ.. ಎಂದು ಬೆಂಗಳೂರಿನಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ, ಈ ವೇಳೆ ಆಂಗ್ಲ ಪದ ಬಳಕೆ ಮಾಡಿ ಹಾಕಲಾಗಿದ್ದ ಜಾಹಿರಾತುಗಳನ್ನ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.#KaraveProtest #Bengaluru #NewsFirstLive #NewsFirstKannada pic.twitter.com/J5rU0sQiGW
— NewsFirst Kannada (@NewsFirstKan) December 27, 2023
@Lamborghini Service sign board written in English being demolished by the Karnataka Rakshana Vedika (KRV) protestors in Bangalore. This protest is getting ugly and violent. @RahulGandhi @INCIndia @DKShivakumar @siddaramaiah @kharge @INCKarnataka pic.twitter.com/K5c1OCihVn
— Punyodaya Kumar (@Punyodayakumar) December 27, 2023
Protests demanding the implementation of 60 per cent Kannada in all signboards in Bengaluru city turned to vandalism in many parts of the city on Wednesday. Several boards were defaced during a procession by Karnataka Rakshna Vedike (KRV) from Sadahalli toll gate towards the city. Simultaneous protests also took place in different parts of the city, where protesters removed boards that did not have Kannada.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm