ಬ್ರೇಕಿಂಗ್ ನ್ಯೂಸ್
19-11-20 04:26 pm Headline Karnataka News Network ಕರ್ನಾಟಕ
ಬೆಂಗಳೂರು, ನವೆಂಬರ್ 19: ಬೆಂಗಳೂರು ಮೂಲದ ಉದ್ಯಮಿಯೊಬ್ಬರು ಕೇರಳದ ದೇವಸ್ಥಾನ ಒಂದಕ್ಕೆ 500 ಕೋಟಿ ರೂಪಾಯಿ ದೇಣಿಗೆ ನೀಡಲು ಮುಂದೆ ಬಂದಿದ್ದಾರೆ. ಆದರೆ, ಈ ಬೃಹತ್ ಮೊತ್ತದ ದೇಣಿಗೆ ಪ್ರಸ್ತಾಪ ಕೇಳಿ ಅಚ್ಚರಿಗೊಂಡ ದೇವಸ್ಥಾನದ ಆಡಳಿತ, ಅದನ್ನು ಪಡೆಯಲು ಹೈಕೋರ್ಟ್ ಮೊರೆ ಹೋಗಿದೆ.
ಎರ್ನಾಕುಲಂ ಜಿಲ್ಲೆಯ ಚೋಟ್ಟಾನಿಕ್ಕರ ಭಗವತಿ ದೇವಸ್ಥಾನಕ್ಕೆ ಈ ಬೃಹತ್ ದೇಣಿಗೆ ಪ್ರಸ್ತಾಪ ಬಂದಿರುವುದು. ಕೊಚ್ಚಿನ್ ದೇವಸ್ವಂ ಬೋರ್ಡ್ ಅಡಿ ದೇವಸ್ಥಾನ ಬರುತ್ತಿದ್ದು, ದೇಣಿಗೆ ಪಡೆಯುವುದಕ್ಕಾಗಿ ಹೈಕೋರ್ಟ್ ಅನುಮತಿ ಕೇಳಲು ಮುಂದಾಗಿದೆ. ಬೆಂಗಳೂರಿನಲ್ಲಿ ವಜ್ರದ ವ್ಯಾಪಾರಿಯಾಗಿರುವ ಚಿಕ್ಕಬಳ್ಳಾಪುರ ಮೂಲದ ಗಣ ಶ್ರವಣ್ ಎಂಬವರು, ದೇವಸ್ಥಾನದ ಅಭಿವೃದ್ಧಿಗಾಗಿ ಬೃಹತ್ ಮೊತ್ತದ ದೇಣಿಗೆ ನೀಡಲು ಮುಂದೆ ಬಂದಿದ್ದಾರೆ.
ಗಣ ಶ್ರವಣ್ ಮೂಲತಃ ಮ್ಯೂಸಿಕ್ ಫೀಲ್ಡಲ್ಲಿದ್ದವರು. 20 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿದ್ದರೂ, ಯಾವುದೇ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ. ನಾಲ್ಕು ವರ್ಷಗಳ ಹಿಂದೆ ಆಧ್ಯಾತ್ಮಿಕ ಗುರುವಿನ ಸಲಹೆಯಂತೆ ಕೇರಳದ ಚೋಟಾನಿಕ್ಕರ ಭಗವತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆನಂತರ ಪ್ರತಿ ಬಾರಿ ದೇವಸ್ಥಾನಕ್ಕೆ ಬರತೊಡಗಿದ್ದರು. ಇದೇ ವೇಳೆ, ಗಣ ಶ್ರವಣ್ ಸಂಪತ್ತು ಹೆಚ್ಚತೊಡಗಿದೆ. ಮುಂಬೈ ಮೂಲದ ಸಂಸ್ಥೆಯೊಂದರ ಪಾಲುದಾರಿಕೆಯಲ್ಲಿ ಬೆಂಗಳೂರಿನಲ್ಲಿ ವಜ್ರದ ಜುವೆಲ್ಲರಿ ವ್ಯಾಪಾರದಲ್ಲಿ ತೊಡಗಿದ್ದಾರೆ. ಅದಲ್ಲದೆ, ಕಟ್ಟಡ ನಿರ್ಮಾಣ ಮತ್ತು ಇಂಟೀರಿಯರ್ ಡಿಸೈನ್ ಕ್ಷೇತ್ರದಲ್ಲಿಯೂ ಬೆಂಗಳೂರಿನಲ್ಲಿ ತೊಡಗಿಸಿಕೊಂಡಿದ್ದಾರೆ.
ಭಾರೀ ಲಾಭ ಬಂದಿದ್ದರಿಂದ ಗಣ ಶ್ರವಣ್, ಲಾಭದ ಅಂಶವನ್ನು ದೇವಿಗೆ ಅರ್ಪಿಸಲು ಯೋಚನೆ ಮಾಡಿದ್ದಾರೆ. ಅದರಂತೆ, ಕಳೆದ ವರ್ಷವೇ 500 ಕೋಟಿ ದೇಣಿಗೆಯ ಪ್ರಸ್ತಾಪವನ್ನು ದೇವಸ್ಥಾನದ ಆಡಳಿತದ ಮುಂದಿಟ್ಟಿದ್ದರು. ಆದರೆ, ಕೊರೊನಾ ಕಾರಣದಿಂದಾಗಿ ಅದನ್ನು ಸ್ವೀಕರಿಸುವ ಪ್ರಕ್ರಿಯೆ ಸಾಧ್ಯವಾಗಿರಲಿಲ್ಲ.
ಚೋಟಾನಿಕ್ಕರ ಭಗವತಿ ದೇವಸ್ಥಾನದಲ್ಲಿ 20 ಲಕ್ಷಕ್ಕಿಂತ ಹೆಚ್ಚು ಮೊತ್ತದ ಯಾವುದೇ ಕಾಮಗಾರಿ, ದೇಣಿಗೆ ಸ್ವೀಕರಿಸುವುದಿದ್ದರೂ ದೇವಸ್ವಂ ಬೋರ್ಡ್ ಅನುಮತಿ ಬೇಕು. ಇದೀಗ ಭಾರೀ ಮೊತ್ತದ ದೇಣಿಗೆ ಪ್ರಸ್ತಾಪ ಬಂದಿದ್ದರಿಂದ ದೇವಸ್ವಂ ಬೋರ್ಡ್ ಹೈಕೋರ್ಟ್ ನಲ್ಲಿ ಪ್ರಸ್ತಾಪ ಇಟ್ಟಿದೆ. ಚೋಟಾನಿಕ್ಕರ ಭಗವತಿ ದೇವಸ್ಥಾನ ಕೇರಳದ ಪ್ರಸಿದ್ಧ ಮತ್ತು ಹಳೆಯ ದೇವಸ್ಥಾನಗಳಲ್ಲಿ ಒಂದಾಗಿದ್ದು, ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿತ್ತು. ಈ ವಿಚಾರ ತಿಳಿದ ಉದ್ಯಮಿ ತನ್ನ ದೇಣಿಗೆ ನೀಡಲು ಮುಂದೆ ಬಂದಿದ್ದಾರೆ.
Gana Shravan, a Bangalore-based businessman who heads Gana Shravan Companies a devotee has offered to donate a whopping Rs.500 crore to the famed Chottanikkara Bhagavathy temple in Kerala. The offering is for the development of facilities in the temple and in the temple town.
23-02-25 06:38 pm
Bangalore Correspondent
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
Bidar accident, Prayagraj, five killed; ಬೀದರ್...
21-02-25 02:00 pm
23-02-25 11:22 pm
HK News Desk
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
Kerala school teacher suicide, catholic Churc...
22-02-25 03:53 pm
23-02-25 03:20 pm
Mangalore Correspondent
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
Thumbay Group, Fergana College, Uzbekistan: ಉ...
21-02-25 07:54 pm
23-02-25 03:42 pm
HK News Desk
Visa fraud, Bangalore crime, Arrest: ವಿದೇಶಿ ವ...
22-02-25 10:36 pm
Ankola Car Robbery, Rajendra Pawar, Gold Smug...
20-02-25 01:22 pm
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm