Shivamogga, K.S. Eshwarappa: ಮಸೀದಿ ಒಡೆದು ರಾಮಮಂದಿರ ಕಟ್ಟಿದ್ದೇವೆ ; ಕಾಶಿಯಲ್ಲೂ ಮಸೀದಿ‌ ಒಡೆದು ಶ್ರೀ ಕೃಷ್ಣನ ದೇವಸ್ಥಾನ ಕಟ್ಟಿಯೇ ಕಟ್ತೀವಿ ಎಂದ ಈಶ್ವರಪ್ಪ

02-01-24 05:11 pm       HK News Desk   ಕರ್ನಾಟಕ

ಅಯೋಧ್ಯೆಯಲ್ಲಿ ರಾಮ ಮಂದಿರ ಆಗಬೇಕೆಂಬ ತೀರ್ಮಾನವಾಗುತ್ತಿದ್ದಂತೆ ಕಾಶಿ ಮಥುರಾದಲ್ಲಿ ಸರ್ವೇಗೆ ಆದೇಶವಾಗಿದೆ. ನಮ್ಮ ಪರವಾಗಿ ತೀರ್ಪು ಬರುತ್ತದೆ. ಕಾಶಿಯಲ್ಲೂ ಮಸೀದಿ‌ ಒಡೆದು ಹಾಕಿ ಕಾಶಿ ಮಂದಿರ ಕಟ್ಟುತ್ತೇವೆ.

ಶಿವಮೊಗ್ಗ, ಜ 02: ಅಯೋಧ್ಯೆಯಲ್ಲಿ ರಾಮ ಮಂದಿರ ಆಗಬೇಕೆಂಬ ತೀರ್ಮಾನವಾಗುತ್ತಿದ್ದಂತೆ ಕಾಶಿ ಮಥುರಾದಲ್ಲಿ ಸರ್ವೇಗೆ ಆದೇಶವಾಗಿದೆ. ನಮ್ಮ ಪರವಾಗಿ ತೀರ್ಪು ಬರುತ್ತದೆ. ಕಾಶಿಯಲ್ಲೂ ಮಸೀದಿ‌ ಒಡೆದು ಹಾಕಿ ಕಾಶಿ ಮಂದಿರ ಕಟ್ಟುತ್ತೇವೆ. ಮಥುರಾದಲ್ಲು ಶ್ರೀ ಕೃಷ್ಣನ ದೇವಸ್ಥಾನ ಕಟ್ಟಿಯೇ ಕಟ್ಟುತ್ತೇವೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, 496 ವರ್ಷದ ಕೆಳಗೆ ಅಯೋಧ್ಯೆಯಲ್ಲಿ ರಾಮ ಮಂದಿರ ಧ್ವಂಸ ಮಾಡಿದ್ದರು. ಮಸೀದಿ ಕಟ್ಟಿ ಬಾಬರ್ ಮಸೀದಿ ಕಟ್ಟಿದ್ದರು. ಗುಲಾಮಗಿರಿ ಮಸೀದಿ ಒಡೆದು ರಾಮ ಮಂದಿರ ಕಟ್ಟಿದ್ದೇವೆ. ನಮ್ಮೆಲ್ಲರ ಸೌಭಾಗ್ಯ ನಾವು ಬದುಕಿರುವ ದಿನದಲ್ಲೇ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆಯಾಗುತ್ತಿದೆ. ಗುಲಾಮಗಿರಿ ಸಂಕೇತ ಹೋಗಿ ಸ್ವಾಭಿಮಾನ ಸಂಕೇತ ನಿರ್ಮಾಣವಾಗಿದೆ ಎಂದರು.

ಮನೆ ಮನೆಗೆ ಮಂತ್ರಾಕ್ಷತೆ ಕೊಡುತ್ತಿದ್ದೇವೆ. ಜ22 ರಂದು ದೇವರ ಮನೆಯಲ್ಲಿಟ್ಟು ಪೂಜೆ ಮಾಡಿ ಸಿಹಿ ಮಾಡಿ ಊಟ ಮಾಡಿ ದೀಪಾವಳಿ ಹಬ್ಬದ ರೀತಿ ಆಚರಣೆ ಮಾಡಿ ಎಂದರು.

ಸಿಎಂ ಸಿದ್ದರಾಮಯ್ಯನವರಿಗೆ ಅಯೋಧ್ಯೆಗೆ ಆಹ್ವಾನ ಬಂದಿಲ್ಲ ಎಂಬ ವಿಚಾರಕ್ಕೆ ಮಾತನಾಡಿದ ಈಶ್ವರಪ್ಪ, ಪವಿತ್ರವಾದ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ರಾಜಕಾರಣ ಮಾತನಾಡಲ್ಲ. ಪ್ರಭು ಶ್ರೀರಾಮ ಚಂದ್ರನ ಭಕ್ತರಿಗೆ ಆಹ್ವಾನ ಕೊಟ್ಟಿದ್ದೇವೆ. ಬಿಜೆಪಿಯ ರಾಮ ಎನ್ನುವವರಿಗೆ ಕೇಂದ್ರದ ನಾಯಕರು ಆಹ್ವಾನ ಕೊಟ್ಟಿಲ್ಲ. ರಾಮನ ಬಗ್ಗೆ ಗೌರವ, ಅಭಿಮಾನ ಇರುವವರು ಎಲ್ಲರೂ ಬರಬಹುದು ಎಂದರು.

The construction of the Ram Mandir at Ayodhya is the beginning of a new era in the country’s history, the former Deputy Chief Minister K.S. Eshwarappa has said. He was speaking at a Vote for Modi and Save India programme organised by the local BJP unit in Chikkodi.