Kalladka Prabhakar Bhat, Minister Shivraj Thangadagi: ಲ್ಲಡ್ಕ ಪ್ರಭಾಕರ ಏನು ಮೇಲಿಂದ ಇಳಿದು ಬಂದಿಲ್ಲ ಕಣ್ರೀ, ಯಾರನ್ನೂ ಪೋಷಣೆ, ರಕ್ಷಣೆ ಮಾಡುವ ಮಾತೇ ಇಲ್ಲ, ನಾಲ್ಕು ದಿನ ಲೇಟ್ ಆದ್ರೂ ಆತನ ಮೇಲೆ ಕ್ರಮ ಆಗುತ್ತೆ ಎಂದ ಸಚಿವ ಶಿವರಾಜ್

02-01-24 09:33 pm       HK News Desk   ಕರ್ನಾಟಕ

ಕಲ್ಲಡ್ಕ ಪ್ರಭಾಕರ ಭಟ್ ಮೇಲಿಂದ ಇಳಿದು ಬಂದಿಲ್ಲ, ಅವರ ಮೇಲೂ ಕ್ರಮ ತೆಗೆದುಕೊಳ್ಳುವ ಕೆಲಸ ಆಗ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು

ಮೈಸೂರು, ಜ 02: ಕಲ್ಲಡ್ಕ ಪ್ರಭಾಕರ ಭಟ್ ಮೇಲಿಂದ ಇಳಿದು ಬಂದಿಲ್ಲ, ಅವರ ಮೇಲೂ ಕ್ರಮ ತೆಗೆದುಕೊಳ್ಳುವ ಕೆಲಸ ಆಗ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.

ಕಲ್ಲಡ್ಕ ಪ್ರಭಾಕರ್ ಭಟ್ ಮುಸ್ಲಿಂ ಸಮುದಾಯದ ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ಬಗ್ಗೆ ಪ್ರಕರಣ ದಾಖಲಾಗಿದ್ದರೂ ಅವರನ್ನು ಬಂಧಿಸಲು ಸರ್ಕಾರ ವಿಫಲವಾಯಿತೇ ಎಂಬ ಮಾಧ್ಯಮಗಳ ಪ್ರಶ್ನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಯಾರನ್ನೂ ಪೋಷಣೆ, ರಕ್ಷಣೆ ಮಾಡುವ ಮಾತೇ ಇಲ್ಲ ಎಂದರು.

ಆತನ ಹೇಳಿಕೆ ಬಗ್ಗೆ ಈಗಾಗಲೇ ಸರ್ಕಾರದಲ್ಲಿ ಚರ್ಚೆ ನಡೆದಿದೆ. ಈ ವಿಚಾರದಲ್ಲಿ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ. ನಾಲ್ಕು ದಿನ ತಡವಾದರೂ ಆತನ ಮೇಲೆ ಕ್ರಮ ಆಗೇ ಆಗುತ್ತದೆ ಎಂದು ಹೇಳಿದರು.

No question of sparing Kalladka Prabhakar Bhat, says Minister Shivraj Thangadagi in Mysuru. Kalladka Prabhakar Bhat will not be spared and suitable action will be taken against him for his controversial remarks.