ಬ್ರೇಕಿಂಗ್ ನ್ಯೂಸ್
04-01-24 11:28 am Mysuru Correspondent ಕರ್ನಾಟಕ
ಮೈಸೂರು, ಜ.4: ಮೈಸೂರು ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡಿಂಗ್ ಮತ್ತು ಟೇಕಾಫ್ ಆಗುವ ಸಂದರ್ಭದಲ್ಲಿ ಪೈಲಟ್ ಕಣ್ಣಿಗೆ ಬೀಳುವಂತೆ ಲೇಸರ್ ಕಿರಣಗಳನ್ನು ಹಾಯಿಸಿ ಕಣ್ಣು ಮಂಜಾಗಿಸುವ ಕಿಡಿಗೇಡಿ ಕೃತ್ಯ ಬೆಳಕಿಗೆ ಬಂದಿದೆ.
ಈ ಬಗ್ಗೆ ಮೈಸೂರು ವಿಮಾನ ನಿಲ್ದಾಣದ ಅಧಿಕಾರಿಗಳು ಪೊಲೀಸ್ ದೂರು ನೀಡಿದ್ದಾರೆ. ಮೈಸೂರು ವಿಮಾನ ನಿಲ್ದಾಣದ ಡೈರೆಕ್ಟರ್ ಜೆ.ಆರ್ ಅನೂಪ್ ಹೇಳುವ ಪ್ರಕಾರ, ಈ ರೀತಿಯ ಘಟನೆ ಹಲವು ತಿಂಗಳಿಂದ ಆಗುತ್ತಿದೆಯಂತೆ. ಲೇಸರ್ ಬೀಮ್ ಕಿರಣಗಳನ್ನು ವಿಮಾನದಲ್ಲಿ ಪೈಲಟ್ ಕುಳಿತುಕೊಳ್ಳುವ ಕಾಕ್ ಪಿಟ್ ಗೆ ಹಾಯಿಸುತ್ತಿದ್ದಾರೆ. ಅಪರಿಚಿತ ವ್ಯಕ್ತಿಗಳು ಉದ್ದೇಶಪೂರ್ವಕ ಈ ಕೃತ್ಯ ಎಸಗುತ್ತಿದ್ದಾರೆ. ಲೇಸರ್ ಟಾಯ್ಸ್ ಮಾರುಕಟ್ಟೆಯಲ್ಲಿ ಸುಲಭವಾಗಿ ಕೈಗೆ ಸಿಗುತ್ತಿದ್ದು, ಯಾರೋ ದುಷ್ಕರ್ಮಿಗಳು ಇದರಲ್ಲಿ ತೊಡಗಿದ್ದಾರೆ ಎಂದು ಹೇಳಿದ್ದಾರೆ.
ಆದರೆ ಈ ರೀತಿಯ ಲೇಸರ್ ಕಿರಣಗಳು ಪವರ್ ಫುಲ್ ಆಗಿದ್ದು ಪೈಲಟ್ ಕಣ್ಣು ತಪ್ಪಿಸುತ್ತವೆ. ಕಾಕ್ ಪಿಟ್ ಎದುರಿನ ಗ್ಲಾಸಿಗೆ ಬಿದ್ದು ಬೆಳಕು ರಿಫ್ಲೆಕ್ಟ್ ಆಗುತ್ತಿದ್ದು, ವಿಮಾನ ಟೇಕಾಫ್ ಅಥವಾ ಲ್ಯಾಂಡ್ ಆಗುವ ನಿರ್ಣಾಯಕ ಕ್ಷಣದಲ್ಲಿ ಪೈಲಟನ್ನು ಗಲಿಬಿಲಿಗೊಳಿಸುತ್ತವೆ. ಇದರಿಂದ ಏರ್ಪೋರ್ಟ್ ಭದ್ರತೆ ಮತ್ತು ಪ್ರಯಾಣಿಕರ ಸುರಕ್ಷತೆ ಬಗ್ಗೆ ಆತಂಕ ಎದುರಾಗಿದೆ. ಹಸಿರು ಬಣ್ಣದ ಕಿರಣಗಳನ್ನು ಬೀರುವ ಲೇಸರ್ ಲೈಟ್ ಗಳನ್ನು ಹಾಕುತ್ತಿದ್ದು, ಫ್ಲಾಶ್ ಲೈಟ್ ಬಿದ್ದ ಕೂಡಲೇ ಕಣ್ಣು ಮಂಜಾಗುತ್ತದೆ. ಕೆಲವು ಸೆಕೆಂಡಿನಿಂದ ನಿಮಿಷಗಳ ವರೆಗೂ ಈ ಕಿರಣಗಳು ಪೈಲಟ್ ಕಣ್ಣಿಗೆ ಬೀಳುತ್ತವೆ. ಏರ್ಪೋರ್ಟ್ ಸುತ್ತ 25 ಕಿಮೀ ಆವರಣದಲ್ಲಿ ಲೇಸರ್ ಕಿರಣ ಹಾಯಿಸುವುದಕ್ಕೆ ನಿಷೇಧ ವಲಯ ಎಂದಿದ್ದರೂ, ಪದೇ ಪದೇ ಈ ರೀತಿಯ ಘಟನೆಗಳು ಆಗುತ್ತಿರುವುದು ಗಂಭೀರ ಅಪರಾಧವಾಗಿದೆ ಎಂದು ಅನೂಪ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
ಪರಿಸರದಲ್ಲಿ ಅಂತಹ ಕಾರ್ಯಕ್ರಮಗಳೇನಾದರೂ ಆಯೋಜನೆ ಆಗಿದ್ದಲ್ಲಿ ತಿಂಗಳ ಮೊದಲೇ ವಿಮಾನ ನಿಲ್ದಾಣಕ್ಕೆ ಮಾಹಿತಿ ನೀಡಬೇಕು ಎಂದಿದೆ. ಆದರೆ, ಇದು ಹಲವು ತಿಂಗಳಿನಿಂದ ಈ ರೀತಿಯ ಘಟನೆಗಳು ಆಗುತ್ತಿರುವುದರಿಂದ ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕ ಕೃತ್ಯ ಎಸಗುತ್ತಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ಏರ್ಪೋರ್ಟ್ ಅಧಿಕಾರಿಗಳ ದೂರಿನಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Pilots landing at Mysuru airport have complained of laser beamed at the cockpit causing disturbance and jeopardizing flight safety. The authorities at the airport have lodged a police complaint regarding this and though the incidents are being investigated, nobody has been identified or held so far.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm