ನಗರಸಭೆ, ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷ ಮೀಸಲು ನಿಗದಿಗೆ ಹೈಕೋರ್ಟ್ ತಡೆ !!

19-11-20 11:18 pm       Bengaluru Correspondent   ಕರ್ನಾಟಕ

ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಗಳ ಅಧ್ಯಕ್ಷ - ಉಪಾಧ್ಯಕ್ಷರ ಮೀಸಲು ನಿಗದಿಗೊಳಿಸಿ ಸರಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. 

ಬೆಂಗಳೂರು, ನವೆಂಬರ್ 19: ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಗಳ ಅಧ್ಯಕ್ಷ - ಉಪಾಧ್ಯಕ್ಷರ ಮೀಸಲು ನಿಗದಿಗೊಳಿಸಿ ಸರಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. 

ಕಳೆದ ಅಕ್ಟೋಬರ್ 8ರಂದು ಸರಕಾರ ರಾಜ್ಯದ 277 ಸ್ಥಳೀಯ ಸಂಸ್ಥೆಗಳ ಮೀಸಲು ನಿಗದಿ ಮಾಡಿ ಆದೇಶ ಹೊರಡಿಸಿತ್ತು. ಇದರಂತೆ, ರಾಜ್ಯದ ಬಹುತೇಕ ನಗರಸಭೆ, ಪುರಸಭೆಗಳಲ್ಲಿ ಅಧ್ಯಕ್ಷ - ಉಪಾಧ್ಯಕ್ಷರ ಹುದ್ದೆಗೆ ಚುನಾವಣೆ ನಡೆದು ಆಯ್ಕೆ ಪ್ರಕ್ರಿಯೆ ನಡೆದಿತ್ತು. 

ಆದರೆ, ಈ ನಡುವೆ ಪ್ರತಿಪಕ್ಷಗಳು ಮೀಸಲು ನಿಗದಿ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದು ಏಕಸದಸ್ಯ ಪೀಠ ಸರಕಾರದ ಆದೇಶಕ್ಕೆ ತಡೆ ಹಾಕಿದೆ. ಅಲ್ಲದೆ, ಈ ಬಗ್ಗೆ ಮೇಲ್ಮನವಿ ಸಲ್ಲಿಸಲು ಹತ್ತು ದಿನಗಳ ಕಾಲಾವಕಾಶ ನೀಡಿದೆ. ಆದರೆ, ಈ ವೇಳೆ ಹೊಸದಾಗಿ ಅಧಿಕಾರಕ್ಕೆ ಬಂದ ಅಧಿಕಾರಕ್ಕೇರಿದ ಅಧ್ಯಕ್ಷ - ಉಪಾಧ್ಯಕ್ಷರು ಅಧಿಕಾರ ಇಲ್ಲದೆ ಕಾಲ ತಳ್ಳಬೇಕಾಗಿದೆ.