ಬ್ರೇಕಿಂಗ್ ನ್ಯೂಸ್
10-01-24 10:28 pm HK News Desk ಕರ್ನಾಟಕ
Photo credits : Suvarna News
ಹಾವೇರಿ, ಜ.10: ಮುಸ್ಲಿಂ ವಿವಾಹಿತ ಮಹಿಳೆಯೊಂದಿಗೆ ಪರ ಪುರುಷನೊಬ್ಬ ಲಾಡ್ಜ್ ನಲ್ಲಿದ್ದಾಗ ಸಿಕ್ಕಿಬಿದ್ದಿದ್ದು, ಇದರಿಂದ ರೊಚ್ಚಿಗೆದ್ದ ಯುವತಿ ಕಡೆಯ ಯುವಕರು ಇಬ್ಬರ ಮೇಲೂ ಲಾಡ್ಜ್ ಗೆ ನುಗ್ಗಿ ಹಲ್ಲೆಗೈದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ನಲ್ಲಿ ನಡೆದಿದೆ.
ಬುರ್ಖಾ ಧರಿಸಿಕೊಂಡು ಬಂದಿದ್ದ ಮಹಿಳೆಯನ್ನೂ ಥಳಿಸಿದ್ದು ಇದರ ವಿಡಿಯೋ ವೈರಲ್ ಆಗಿದೆ. ಸೋಮವಾರ ಮಧ್ಯಾಹ್ನ ಘಟನೆ ನಡೆದಿದ್ದು ನೈತಿಕ ಗೂಂಡಾಗಿರಿಯ ವಿಡಿಯೋ ಹೊರಬಂದಿದ್ದರಿಂದ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಾನಗಲ್ ಪಟ್ಟಣದ ನಾಲ್ಕರ ಕ್ರಾಸ್ ಬಳಿ ಇರುವ ಖಾಸಗಿ ಲಾಡ್ಜ್ ನಲ್ಲಿ ಘಟನೆ ನಡೆದಿದೆ. ಬುರ್ಖಾ ಹಾಕಿ ಅನ್ಯಕೋಮಿನ ಪುರುಷನ ಜತೆ ಲಾಡ್ಜ್‌ನಲ್ಲಿ ಕಾಣಿಸಿಕೊಂಡಿದ್ದ ಮಹಿಳೆಯನ್ನು ಗಮನಿಸಿದ್ದ ಆಟೋ ಚಾಲಕ, ಮುಸ್ಲಿಂ ಯುವಕರಿಗೆ ಮಾಹಿತಿ ನೀಡಿದ್ದ. ಬಳಿಕ ಅರ್ಧ ಗಂಟೆಯಲ್ಲೇ ಜಮಾಯಿಸಿದ ಅಕ್ಕಿ ಆಲೂರಿನ ನಾಲ್ಕೈದು ಮುಸ್ಲಿಂ ಯುವಕರ ತಂಡ ಲಾಡ್ಜ್‌ನ ಕೊಠಡಿಗೆ ತೆರಳಿದ್ದು ರೂಮ್‌ನಲ್ಲಿ ನೀರಿನ ಸಮಸ್ಯೆ ಇದೆಯೆಂದು ಹೇಳಿ ಬಾಗಿಲು ತೆಗೆಸಿದ್ದಾರೆ. ಒಳಗಿದ್ದವರು ನೀರು ಬರುತ್ತಿದೆ ಎಂದರೂ ಪದೇ ಪದೇ ಬಾಗಿಲು ತಟ್ಟಿದ್ದು ಬಾಗಿಲು ತೆಗೆದ ತಕ್ಷಣ ಇಬ್ಬರನ್ನೂ ಹಿಡಿದು ಥಳಿಸಿದ್ದಾರೆ. ಮಹಿಳೆಯನ್ನು ಎಳದಾಡಿ ಬಟ್ಟೆ ಹರಿದು ಹೊಡೆದಿರುವ ವಿಡಿಯೋ ವೈರಲ್ ಆಗಿದೆ.
ಮಹಿಳೆಯ ಹೇಳಿಕೆಯನ್ನು ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಹಿಳೆಗೆ ಹಾನಗಲ್ ತಾಲೂಕ ಆಸ್ಪತ್ರೆಯಲ್ಲಿ ಪೊಲೀಸರು ವೈದ್ಯಕೀಯ ತಪಾಸಣೆ ಮಾಡಿಸಿದ್ದಾರೆ. ಅಕ್ಕಿಆಲೂರಿನ ಅಪ್ತಾಬ ಚಂದನಕಟ್ಟಿ, ಮದರಸಾಬ ಮಹಮ್ಮದ್ ಇಸಾಕ್ ಮಂಡಕ್ಕಿ, ಸಮೀವುಲ್ಲಾ ಲಾಲನವರ ಸೇರಿ ಐವರ ಮೇಲೆ ಪ್ರಕರಣ ದಾಖಲಾಗಿದೆ, ಇದರಲ್ಲಿ ಅಪ್ತಾಬ ಚಂದನಕಟ್ಟಿ, ಮದರಸಾಬ ಮಂಡಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
An incident took place in Hanagal of Haveri district when a pro man was caught with a Muslim married woman in a lodge, and the youths from the young woman's side stormed into the lodge and assaulted both of them.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm