Ananth Kumar Hegde, CM Siddaramaiah: ಭಟ್ಕಳದ ಚಿನ್ನದ ಪಳ್ಳಿ ಒಡೆದಾಕ್ತೇವೆ ಎನ್ನುತ್ತಲೇ ಮುಖ್ಯಮಂತ್ರಿಗೆ ಅವಹೇಳನ ; ನಿದ್ದೆಯಿಂದೆದ್ದ ಅನಂತ ಹೆಗಡೆ ವಿವಾದಾತ್ಮಕ ಹೇಳಿಕೆ 

13-01-24 07:02 pm       HK News Desk   ಕರ್ನಾಟಕ

ಬಾಬ್ರಿ ಮಸೀದಿ ನಿರ್ನಾಮ ಆದಂತೆ ಭಟ್ಕಳದ ಚಿನ್ನದ ಪಳ್ಳಿಯೂ ಅದರ ಸಾಲಿಗೆ ಸೇರಲಿದೆ. ಇದನ್ನು ಬೇಕಾದರೆ ಬೆದರಿಕೆ ಅಂತ ತಿಳಿಯಿರಿ. ಬಾಬ್ರಿ ಮಸೀದಿ ನಿರ್ನಾಮದಂತೆ ಮಾಡುವುದು ಗ್ಯಾರಂಟಿಯೇ.

ಕಾರವಾರ, ಜ.13: ಬಾಬ್ರಿ ಮಸೀದಿ ನಿರ್ನಾಮ ಆದಂತೆ ಭಟ್ಕಳದ ಚಿನ್ನದ ಪಳ್ಳಿಯೂ ಅದರ ಸಾಲಿಗೆ ಸೇರಲಿದೆ. ಇದನ್ನು ಬೇಕಾದರೆ ಬೆದರಿಕೆ ಅಂತ ತಿಳಿಯಿರಿ. ಬಾಬ್ರಿ ಮಸೀದಿ ನಿರ್ನಾಮದಂತೆ ಮಾಡುವುದು ಗ್ಯಾರಂಟಿಯೇ. ಇದು ಹಿಂದೂ ಸಮಾಜದ ತೀರ್ಮಾನ ಎಂದು ಸಂಸದ ಅನಂತ ಕುಮಾರ್ ಹೆಗಡೆ ವೀರಾವೇಶದ ಮಾತುಗಳನ್ನಾಡಿದ್ದಾರೆ. 

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ನಿದ್ದೆಯಿಂದ ಎದ್ದು ಕುಳಿತಂತೆ ವರ್ತಿಸುತ್ತಿರುವ ಅನಂತ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡತೊಡಗಿದ್ದಾರೆ. ಕುಮಟಾದಲ್ಲಿ ರಾಮಮಂದಿರ ಆಮಂತ್ರಣ ಕುರಿತ ಕಾರ್ಯಕ್ರಮದಲ್ಲಿ ಅನಂತ ಹೆಗಡೆ ಭಾಷಣ ಮಾಡಿದ್ದು ಶಿರಸಿಯ ಸಿಪಿ ಬಜಾರ್‍ದಲ್ಲಿರುವ ಮಸೀದಿ ಇರುವುದು ಅದು ವಿಜಯ ವಿಠ್ಠಲ ದೇವಸ್ಥಾನ. ಶ್ರೀರಂಗ ಪಟ್ಟಣದಲ್ಲಿರುವ ದೊಡ್ಡ ಮಸೀದಿ ಅದು ಮಾರುತಿ ದೇವಸ್ಥಾನ. ದೇಶದ ಹಳ್ಳಿಯ ಮೂಲೆ ಮೂಲೆಗಳಲ್ಲಿ ಅಪಮಾನಗೊಂಡಿರುವ ಅನೇಕ ಸಂಕೇತಗಳಿವೆ. ಅದನ್ನು ಕಿತ್ತುಹಾಕೋ ತನಕ ಈ ಹಿಂದು ಸಮಾಜ ಮತ್ತೆ ವಾಪಾಸ್ ಕೂತುಕೊಳ್ಳೋದಿಲ್ಲ. ಈಗ ರಣಭೈರವ ಎದ್ದಾಗಿದೆ, ಮತ್ತೆ ಕೂರುವ ಪ್ರಶ್ನೆಯೇ ಇಲ್ಲ. 

High Court To Hear Petition To Disqualify Karnataka Chief Minister  Siddaramaiah On July 28

ಸಾವಿರ ವರ್ಷಗಳ ಸೇಡನ್ನು ತೀರಿಸಿಕೊಳ್ಳದೇ ಇದ್ರೆ ಇದು ಹಿಂದೂ ರಕ್ತವೇ ಅಲ್ಲ ಎಂದು ಹೇಳಿದ ಅವರು, ನಮ್ಮ ವಿರೋಧಿ ಕಾಂಗ್ರೆಸ್ ಅಲ್ಲ. ಅಲ್ಲಿರುವ ಕೆಲವರ ಮಾನಸೀಕತೆ ಅಷ್ಟೇ. ಮುರುಕುರಾಮಯ್ಯನಂತಹ ಮಾನಸಿಕತೆಯೇ ನಮ್ಮ ವಿರೋಧಿ. ಗತಿಕೆಟ್ಟ ಹರಾಜಾಗಿ ಹೋದಂತಹ, ಅಲ್ಪಸಂಖ್ಯಾತ ಓಟಿಗಾಗಿ ಓಲೈಸುವ ಮಾನಸಿಕತೆಗೆ ನಮ್ಮ ವಿರೋಧ. ರಾಮಜನ್ಮಭೂಮಿ ಆಮಂತ್ರಣ ಬಂದಿಲ್ಲ ಎನ್ನುವ ಸಿದ್ದರಾಮಯ್ಯ ಹೇಳಿಕೆಯನ್ನೇ ಅಣಕಿಸಿ ಮುಖ್ಯಮಂತ್ರಿಯ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ.

As the Babri Masjid is destroyed, bhatkal's golden palli will also join its ranks. Think of this as a threat. Is it a guarantee that the Babri Masjid will be demolished? Mp Anant Kumar Hegde said that this is the decision of the Hindu society.