ಹಾನಗಲ್ ನಲ್ಲಿ ಸೂಫಿ ಫೋರಮ್ ಸಕ್ರಿಯ, ಇದೊಂದು ಸಂಘಟಿತ ಅಪರಾಧ, ಗ್ಯಾಂಗ್ ರೇಪ್ ಕೇಸ್ ಮುಚ್ಚಿ ಹಾಕ್ತಿರುವ ಕಾಂಗ್ರೆಸ್ ಸರ್ಕಾರ ; ಮಾಳವಿಕ ಅವಿನಾಶ್ 

14-01-24 08:39 pm       HK News Desk   ಕರ್ನಾಟಕ

ಹಾನಗಲ್ ನೈತಿಕ ಪೊಲೀಸ್ ಗಿರಿ, ಸಾಮೂಹಿಕ ಅತ್ಯಾಚಾರ ಕೃತ್ಯದ ಹಿಂದೆ ಸೂಫಿ ಫೋರಂ ಎಂಬ ಪುಂಡರ ಸಂಘಟನೆಯ ಕೈವಾಡ ಇದೆ. ಈ ಬಗ್ಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದು ಒಟ್ಟು ಪ್ರಕರಣ ಮುಚ್ಚಿ ಹಾಕಲು ನೋಡುತ್ತಿದೆ.

ಹಾವೇರಿ, ಜ.14: ಹಾನಗಲ್ ನೈತಿಕ ಪೊಲೀಸ್ ಗಿರಿ, ಸಾಮೂಹಿಕ ಅತ್ಯಾಚಾರ ಕೃತ್ಯದ ಹಿಂದೆ ಸೂಫಿ ಫೋರಂ ಎಂಬ ಪುಂಡರ ಸಂಘಟನೆಯ ಕೈವಾಡ ಇದೆ. ಈ ಬಗ್ಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದು ಒಟ್ಟು ಪ್ರಕರಣ ಮುಚ್ಚಿ ಹಾಕಲು ನೋಡುತ್ತಿದೆ. ಇದೊ‌ಂದು ಸಂಘಟನಾತ್ಮಕ ಅಪರಾಧ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ ಹೇಳಿದ್ದಾರೆ. 

ಜನವರಿ 8ರಂದು ನಡೆದ ಘಟನೆ ಬಗ್ಗೆ ನಾಲ್ಕು ದಿನ ಕಳೆದರೂ ಪ್ರಕರಣ ಆಗುವುದಿಲ್ಲ. ಸಂತ್ರಸ್ತ ಮಹಿಳೆ ಭಯಬೀತಳಾಗಿದ್ದಾಳೆ. ಇದು ಕೇವಲ ಒಂದು ಕೇಸ್ ಅಲ್ಲ, ಬೆಳಕಿಗೆ ಬಾರದ ಹಲವು ಪ್ರಕರಣಗಳು ನಡೆದುಹೋಗಿವೆ ಎಂದು ಹೇಳಿದ ಅವರು, ಸೂಫಿ ಫೋರಂ ಎಂಬ ಹುಡುಗರ ತಂಡ ಅಲ್ಲಿ ಇದೆಯಂತೆ.‌ ಇವರು ಯಾವುದೇ ಸಮಾಜ ಸೇವೆ ಮಾಡುತ್ತಿಲ್ಲ. ಪುಂಡಾಟ ಮಾಡುತ್ತಿದ್ದಾರೆ. ನೈತಿಕ ಪೊಲೀಸ್ ಗಿರಿ ಮಾಡುವ ಇವರ ಬಗ್ಗೆ ಸಿಎಂ ಏನು ಹೇಳುತ್ತಾರೆ. ಹೊಟೇಲ್ ಗೆ ನುಗ್ಗಿ ಸಂತ್ರಸ್ತೆಗೆ ಥಳಿಸಿದ್ದಾರೆ. ನಂತರ ಆಕೆಯನ್ನು ಬೇರೆಡೆ ಕರೆದೊಯ್ದು ಗ್ಯಾಂಗ್ ರೇಪ್ ಮಾಡಿದ್ದಾರೆ. 

ಇಂತಹ ಕೃತ್ಯ ನಡೆದಾಗ ಎಸ್ ಐಟಿ ತಂಡ ಬರಬೇಕಿತ್ತು, ಬಂದಿದೆಯಾ.?ನಾವು ಭೇಟಿ ಬರುತ್ತೇವೆ ಎಂದು ಗೊತ್ತಾದ ಕೂಡಲೇ ಆಕೆಯನ್ನು ಇಲ್ಲಿಂದ ಬೇರೆಡೆ ಶಿಫ್ಟ್ ಮಾಡಿದ್ದಾರೆ. ಸಂತ್ರಸ್ತೆ ಈಗ ಎಲ್ಲಿದ್ದಾಳೆ ಎಂಬುದೇ ಗೊತ್ತಿಲ್ಲ.‌ ಆಕೆಯ ಆರೋಗ್ಯ ಸುಧಾರಿಸಿಲ್ಲ. ಇಂತಹ ಸಂದರ್ಭದಲ್ಲಿ ಆಕೆಯನ್ನು ತನಿಖೆಗೆ ಕರೆದುಕೊಂಡು ಹೋಗುವುದು ಎಷ್ಟು ಸರಿ.? ಅಪರಾಧ ನಡೆದ ಸ್ಥಳದಲ್ಲಿ ಸಾಕ್ಷ್ಯಾಧಾರಗಳು ಸಿಕ್ಕಿವೆ.‌

ಅಕ್ಕಿಆಲೂರಲ್ಲಿ ಸೂಫಿ ಫೋರಂ ಯಾರು ಅಂದರೆ ಗೊತ್ತಾಗುತ್ತದೆ ಅಂತ ಅಲ್ಲಿನವರು ಹೇಳುತ್ತಾರೆ. ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರಕಾರ ಓಲೈಕೆ ರಾಜಕಾರಣ ಮಾಡುವುದು ಒಂದು ಜನಾಂಗದ ಬಗ್ಗೆ. ಬೇರೆ ಜನಾಂಗದವರು ನೈತಿಕ ಪೊಲೀಸ್ ಗಿರಿ ಮಾಡಿದರೆ ಇವರು ಸುಮ್ಮನೆ ಇರುತ್ತಾರಾ.? ಹೆಣ್ಣು ಮಗಳು ಅಲ್ಪಸಂಖ್ಯಾತ ಜನಾಂಗಕ್ಕೆ ಸೇರಿದವಳು. ಈಗ ಯಾಕೆ ಇವರು ಸುಮ್ಮನಿದ್ದಾರೆ. 

ರೂಮ್ ಬಾಯ್ ಕೊಟ್ಟ ದೂರಿನಂತೆ ಮೊದಲು ಪ್ರಕರಣ ದಾಖಲು ಮಾಡಿದ್ದರು. ಆಕೆಗೆ ತುಂಬ ಭಯ ಹುಟ್ಟಿಸಿ, ರಾಜಿ ಮಾಡಿ ಪ್ರಕರಣ ಮುಗಿಸಲು ಮುಂದಾಗಿದ್ದರು. ಇದೊಂದು ಆರ್ಗನೈಸ್ ಕ್ರೈಮ್, ಸಂತ್ರಸ್ತೆಯ ದೈರ್ಯ ದೃತಿಗೇಡಿಸುತ್ತಿದ್ದಾರೆ.‌ ಹಾನಗಲ್ ನಲ್ಲಿ ನಾಲ್ಕು ಯುವತಿಯರ ಕಿಡ್ನಾಪ್ ಪ್ರಕರಣ ದಾಖಲಾಗಿದೆ. ಈಗ ಎಲ್ಲಿದ್ದಾರೆ ಮಹಿಳಾ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್. ಸೂಫಿ ಪೋರಮ್ ಸಂಘಟನೆಯ ಅಲ್ಲಿ ಆ್ಯಕ್ಟೀವ್ ಆಗಿದೆ. ಇದಕ್ಕಾಗಿ ಸರಕಾರ ಪೊಲೀಸರ ಮೂಲಕ‌ ಆಕೆಯನ್ನ ಭಯದಲ್ಲಿ ಇರಿಸಿದೆಯಾ ಅನ್ನುವ ಬಗ್ಗೆ ತನಿಖೆ ಆಗಬೇಕು. 

ನೈತಿಕ ಪೊಲೀಸ್ ಗಿರಿ ಮಾಡಲು ಬಿಡಲ್ಲ ಅಂತಾರೆ ಸಿದ್ದರಾಮಯ್ಯ. ಕದ್ದು ಮುಚ್ಚಿ ಅವರನ್ನ ಕರೆದೊಯ್ದಿದ್ದಾರೆ. ಇದುವರೆಗೆ ಯಾಕೆ ಜಿಲ್ಲಾ ಉಸ್ತುವಾರಿ ಮಂತ್ರಿ ಭೇಟಿ ಮಾಡಿಲ್ಲ. ಆರೋಪಿಗಳ ಬಂಧನಕ್ಕೆ ಯಾಕೆ ಇಷ್ಟು ತಡವಾಗಿದೆ ಎಂದು ಮಾಳವಿಕ ಪ್ರಶ್ನೆ ಮಾಡಿದ್ದಾರೆ.

Sufi Forum is behind the moral policing and gangrape of Hanagal. The Congress government in the state has been negligent in this regard and is trying to cover up the entire case. Bjp Mahila Morcha state vice-president Malavika Avinash said it was an organised crime.