ಬ್ರೇಕಿಂಗ್ ನ್ಯೂಸ್
16-01-24 05:25 pm Bangalore Correspondent ಕರ್ನಾಟಕ
ಬೆಂಗಳೂರು, ಜ 16: ಕರ್ನಾಟಕ ಏಕೀಕರಣದ ಸುವರ್ಣ ಮಹೋತ್ಸವದ ಅಂಗವಾಗಿ ಪೊಲೀಸ್ ಇಲಾಖೆಗೆ ಮುಖ್ಯಮಂತ್ರಿಗಳು ಮಹತ್ವದ ಘೋಷಣೆ ಮಾಡಿದ್ದಾರೆ. ರಾಜ್ಯದ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಬೆಳ್ಳಿ ಪದಕ, ರಾಜ್ಯದ ಎಲ್ಲಾ ಪೊಲೀಸರ ವೈದ್ಯಕೀಯ ವೆಚ್ಚ 1000 ದಿಂದ 1500 ಕ್ಕೆ ಹೆಚ್ಚಿಸಲಾಗುವುದು ಎಂದು ಸಿಎಂ ಘೋಷಣೆ ಮಾಡಿದ್ದಾರೆ. ಇದೇ ತಿಂಗಳ 20ಕ್ಕೆ ರಾಜ್ಯ ಸರ್ಕಾರಕ್ಕೆ 8 ತಿಂಗಳು ತುಂಬಲಿದೆ
ರಾಜ್ಯ ಪೊಲೀಸ್ ಮಹಾನಿರ್ದಶಕರ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಂಡು ಮಾತನಾಡಿದರು. ಪ್ರತಿ ವರ್ಷ ಹೊಸ ವರ್ಷದಲ್ಲಿ ಪೊಲೀಸ್ ಇಲಾಖೆ ಜೊತೆ ಸಭೆ ಮಾಡ್ತಾರೆ. ನಾನು ಹಾಗೂ ಗೃಹಸಚಿವರು ಗೃಹ ಇಲಾಖೆಯ ಕಾರ್ಯದರ್ಶಿ ಸೇರಿ ಸಭೆ ಮಾಡಿದ್ದೀವಿ. ನಾವು ಅಧಿಕಾರಕ್ಕೆ ಬಂದು ಇದೇ ತಿಂಗಳ 20ಕ್ಕೆ 8 ತಿಂಗಳು ತುಂಬುತ್ತೆ, ಅಧಿಕಾರಿಗಳಿಗೆ ಸರ್ಕಾರ ಪೊಲೀಸರಿಂದ ಏನು ನಿರೀಕ್ಷೆ ಮಾಡ್ತೀವಿ ಅಂತ ಹೇಳಲಾಗಿದೆ. ಕಾನೂನು ಸುವ್ಯವಸ್ಥೆ ಚೆನ್ನಾಗಿ ಇರಬೇಕು ಅಂತ ಹೇಳಲಾಗಿದೆ. ಅದನ್ನ ಸರ್ಕಾರ ಪೊಲೀಸ್ ಇಲಾಖೆಯಿಂದ ನಿರೀಕ್ಷೆ ಮಾಡ್ತೀವಿ. ಸಮಾಜದಲ್ಲಿ ಇರೋ ದುರ್ಬಲ ವರ್ಗದವರಿಗೆ ರಕ್ಷಣೆಯನ್ನು ಕೊಡಬೇಕು. ಮನೆಯಲ್ಲಿ ಒಂಟಿಯಾಗಿ ಇರೋರಿಗೆ ರಕ್ಷಣೆ ಕೊಡಬೇಕು ಅಂತ ಹೇಳಲಾಗಿದೆ ಎಂದು ತಿಳಿಸಿದರು.
ಸೈಬರ್ ಕ್ರೈಂ ತಡೆಯಲು ಆಧುನಿಕ ತಂತ್ರಜ್ಞಾನ ಬಳಕೆ
ಅಲ್ಲದೇ, ಎಸ್ ಪಿ, ಡಿಸಿಪಿ, ಡಿಐಜಿ ಎಲ್ಲರೂ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲು ಹೇಳಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದರಲ್ಲಿ ನಮ್ಮ ಪೊಲೀಸರು ಪ್ರಯತ್ನ ಹೆಚ್ಚು ಮಾಡಿದ್ದಾರೆ. ನಮ್ಮಲ್ಲಿ ಇಲ್ಲಿವರೆಗೂ ಯಾವುದೇ ಕೋಮು ಗಲಭೆ ನಡೆದಿಲ್ಲ, ಸಣ್ಣಪುಟ್ಟದ್ದು ಆಗಿದೆ ಬಿಟ್ಟರೇ ದೊಡ್ಡಮಟ್ಟದಲ್ಲಿ ಏನು ಆಗಿಲ್ಲ. ಸೈಬರ್ ಕ್ರೈಂಗಳು ಹೆಚ್ಚಾಗ್ತಾ ಇವೆ, ಹೀಗಾಗಿ ಅದಕ್ಕೆ ಹೆಚ್ಚು ಗಮನ ಕೊಡಲು ಹೇಳಲಾಗಿದೆ. ಆಧುನಿಕ ತಂತ್ರಜ್ಞಾನ ಇರೋ ಉಪಕರಣಗಳನ್ನು ಬಳಸೋಕು ಹೇಳಲಾಗಿದೆ.
ಠಾಣೆಗೆ ಬಂದ ದೂರು ಕೊಟ್ಟರೇ FIR ಗಳನ್ನು ಆದಷ್ಟು ಮಾಡಬೇಕು, ಠಾಣೆಗೆ ಬಂದೋರಿಗೆ ಸ್ಪಂದಿಸಬೇಕು. FIR ಬಳಿಕ ಗುಣಮಟ್ಟದ ತನಿಖೆ ಆಗಬೇಕು. ಗುಣಮಟ್ಟದ ತನಿಖೆ ಆದ್ರೆ ಶಿಕ್ಷೆಯ ಪ್ರಮಾಣ ಜಾಸ್ತಿ ಆಗಿತ್ತೆ, ಇಲ್ಲ ಅಂದ್ರೆ ಶಿಕ್ಷೆ ಪ್ರಮಾಣ ಕಡಿಮೆ ಆಗುತ್ತೆ. ತನಿಖಾಧಿಕಾರಿಗಳಿಗೆ ಹಿರಿಯ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಬೇಕು. ಚಾರ್ಜ್ ಶೀಟ್ ವಿಳಂಬ ಆಗದಂತೆಯೂ ಸೂಚನೆ ನೀಡಲಾಗಿದೆ. ದೌರ್ಜನ್ಯ ಪ್ರಕರಣಗಳಲ್ಲಿ 60 ದಿನಗಳ ಒಳಗೆ ಕೋರ್ಟ್ ಗೆ ಜಾರ್ಜ್ ಶೀಟ್ ಸಲ್ಲಿಕೆ ಮಾಡಬೇಕು ಎಂದು ಹೇಳಿದರು.
ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಪರಿಣಾಮಕಾರಿ ಕ್ರಮ
ವಿಶೇಷ ಎಂದರೇ, CEN ಠಾಣಾಧಿಕಾರಿಗಳ ಹುದ್ದೆಯನ್ನು ACP ಮತ್ತು DCP ಮಟ್ಟಕ್ಕೆ ಉನ್ನತೀಕರಣ ಮಾಡುವುದು. ಬೆಂಗಳೂರು ನಗರದಲ್ಲಿ 8 ಅಡಿಷನಲ್ DCP ಹುದ್ದೆಗಳನ್ನು ಹೆಚ್ಚುವರಿಯಾಗಿ ಸೃಜಿಸಲಾಗುವುದು. ರಾಜ್ಯವನ್ನು ಡ್ರಗ್ ಮುಕ್ತ ಗೊಳಿಸುವ ದಿಕ್ಕಿನಲ್ಲಿ ಪರಿಣಾಮಕಾರಿ ಕ್ರಮ ಕೈಗೊಳ್ಳುವ ಹಾಗೂ ಕಳೆದ ಆರು ತಿಂಗಳಲ್ಲಿ ಪೊಲೀಸರು 27 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಸೀಜ್ ಮಾಡಿದ್ದಾರೆ. ಈ ಡ್ರಗ್ಸ್ ನ ಫೆಬ್ರವರಿ ಯಲ್ಲಿ ನಾಶ ಮಾಡಲು ಸೂಚನೆ ನೀಡಲಾಗಿದೆ ಎಂದರು.
ಎಲ್ಲಾ ಕಡೆ ಬೀಟ್ ವ್ಯವಸ್ಥೆಯನ್ನು ಹೆಚ್ಚು ಮಾಡಬೇಕು, ಬೀಟ್ ನ ವರದಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ಪಾರ್ಲಿಮೆಂಟ್ ಎಲೆಕ್ಷನ್ ಬರ್ತಾ ಇದೆ, ಯಾರು ಯಾರು ರೌಡಿಗಳು ಇದ್ದಾರೆ ಅವರ ಮೇಲೆ ನಿಗಾ ಇಡಬೇಕು. ಕರ್ನಾಟಕ ಅಂತ ನಾಮಕರಣ ಆಗಿ 50 ವರ್ಷ ತುಂಬಿದೆ, ಕರ್ನಾಟಕ ಪೊಲೀಸ್ ಅಂತಾನೂ 50 ವರ್ಷ ಆಗಿದೆ ಎಂದರು. ಇನ್ನು, ಸುವರ್ಣ ಮಹೋತ್ಸವ ಭವನ ಕಟ್ಟುವಂತೆ ಸಿಎಂಗೆ ಪೊಲೀಸರು ಬೇಡಿಕೆ ಸಲ್ಲಿಕೆ ಮಾಡಿದ್ದಾರೆ
Cm Siddaramaiah police meeting, orders for increase police beat, to avoid Cyber crime. 26 crore worth drugs has been seized just in 6 months time he added.
27-08-25 03:17 pm
HK News Desk
Kannada Anchor Anushree, Marriage, Mangalore:...
27-08-25 02:51 pm
ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು, ಮುಸ್ಲಿಮರ...
27-08-25 12:33 pm
Dk Shivakumar, Chamundi Hill: ಚಾಮುಂಡಿ ಬೆಟ್ಟ ಹ...
27-08-25 11:48 am
R Ashok, Dharmasthala: ಬುರುಡೆ ಕಥೆ ಹೊರಗಡೆ ಬಂದ...
26-08-25 10:47 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm