ಟೆಂಟ್ ನಲ್ಲಿ ಗೊಂಬೆ ಇಟ್ಟು ಶ್ರೀರಾಮ ಎನ್ನುತ್ತಿದ್ದರು, ಟೂರಿಂಗ್‌ ಟಾಕೀಸ್‌ನಲ್ಲಿ ಗೊಂಬೆ ಇಟ್ಟಂಗಿತ್ತು ; ಅಯೋಧ್ಯೆ ರಾಮನ ಬಗ್ಗೆ ಸಚಿವ ರಾಜಣ್ಣ ವ್ಯಂಗ್ಯ 

17-01-24 03:50 pm       HK News Desk   ಕರ್ನಾಟಕ

92 ರಲ್ಲಿ ಬಾಬ್ರಿ ಮಸೀದಿ ಬೀಳಿಸಿದ್ದಾಗ ಅಲ್ಲಿಗೆ ಹೋಗಿದ್ದೆ. ಒಂದು ಟೆಂಟ್‌ನಲ್ಲಿ ಎರಡು ಗೊಂಬೆ ಇಟ್ಟು ಇದೇ ಶ್ರೀರಾಮ ಎನ್ನುತ್ತಿದ್ದರು. ನಮ್ಮೂರಿನ ದೇವಸ್ಥಾನಕ್ಕೆ ಹೋದರೆ ಅಲ್ಲೊಂದು ವೈಬ್ರೇಶನ್‌ ಇರುತ್ತದೆ. ಭಕ್ತಿ ತುಂಬಿ ಬರುತ್ತದೆ.

ತುಮಕೂರು, ಜ.17: 92 ರಲ್ಲಿ ಬಾಬ್ರಿ ಮಸೀದಿ ಬೀಳಿಸಿದ್ದಾಗ ಅಲ್ಲಿಗೆ ಹೋಗಿದ್ದೆ. ಒಂದು ಟೆಂಟ್‌ನಲ್ಲಿ ಎರಡು ಗೊಂಬೆ ಇಟ್ಟು ಇದೇ ಶ್ರೀರಾಮ ಎನ್ನುತ್ತಿದ್ದರು. ನಮ್ಮೂರಿನ ದೇವಸ್ಥಾನಕ್ಕೆ ಹೋದರೆ ಅಲ್ಲೊಂದು ವೈಬ್ರೇಶನ್‌ ಇರುತ್ತದೆ. ಭಕ್ತಿ ತುಂಬಿ ಬರುತ್ತದೆ. ಆದರೆ ಆವತ್ತು ನನಗೇನೂ ಅನಿಸಲೇ ಇಲ್ಲ. ಟೂರಿಂಗ್‌ ಟಾಕೀಸ್‌ನಲ್ಲಿ ಗೊಂಬೆ ಇಟ್ಟಂಗಿತ್ತು ಎಂದು ಸಹಕಾರಿ ಸಚಿವ ಕೆ.ಎನ್‌.ರಾಜಣ್ಣ ಅಯೋಧ್ಯೆ ರಾಮಲಲ್ಲಾನ ಬಗ್ಗೆ ವ್ಯಂಗ್ಯವಾಗಿ ಹೇಳಿಕೆ ನೀಡಿದ್ದಾರೆ. 

ಹಿಂದುಳಿದ ವರ್ಗಗಳ ಒಕ್ಕೂಟದ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಸಚಿವ ರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಹೊತ್ತಲ್ಲೇ ರಾಮ ಜನ್ಮಭೂಮಿ ಬಗ್ಗೆ ಅವಹೇಳನ ಮಾಡುವ ರೀತಿ ಮಾತನಾಡಿದ್ದಾರೆ. 

ಸಿಎಂ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ನಿಂದಿಸಿದ ಸಂಸದ ಅನಂತಕುಮಾರ ಹೆಗಡೆ ಬಗ್ಗೆಯೂ ವಾಗ್ದಾಳಿ ನಡೆಸಿದ ಅವರು, ನಾಲ್ಕೂವರೆ ವರ್ಷ ಮಲಗಿರುತ್ತಾನೆ, ಅದೆಲ್ಲಿ ಇರುತ್ತಾನೋ? ಚುನಾವಣೆಗೆ ಆರು ತಿಂಗಳು ಇರುವಾಗ ಬಂದು ಏನೆಲ್ಲ ಮಾತನಾಡುತ್ತಾನೆ. ಹಿಂದುತ್ವ ಹಿಂದುತ್ವ ಅಂತಾನೆ. ಚುನಾವಣೆ ಮುಗಿದ ಮೇಲೆ ಹೊರಟೋದರೆ ಪತ್ತೇನೆ ಇರಲ್ಲ. ಜನರ ಭಾವನೆಗಳನ್ನು ಕೆರಳಿಸೋನು ಜನಪ್ರತಿನಿಧಿ ಆಗಲು ನಾಲಾಯಕ್‌ ಎಂದು ಟೀಕಿಸಿದರು. 

ಸಿದ್ದರಾಮಯ್ಯ ಅವರ ಬಗ್ಗೆ ಅವನ್ಯಾವನೋ ದುರಹಂಕಾರಿನೋ, ಅಹಂಕಾರಿನೋ, ಮನುಷ್ಯನೋ, ಮೃಗನೋ ಗೊತ್ತಿಲ್ಲ... ಮಗನೇ ಅಂತ ಕರೀತಾನಲ್ಲ, ಅವನಿಗೆ ಎಷ್ಟು ಧೈರ್ಯ ಇರಬೇಕು ಎಂದು ರಾಜಣ್ಣ ಹರಿಹಾಯ್ದರು. ಬ್ರಾಹ್ಮಣ ಸಮುದಾಯದವರು ಬೇರೆಯವರಿಗೆ ತೊಂದರೆ ಕೊಡುವುದು, ಹೀಯಾಳಿಸುವುದನ್ನು ಮಾಡುವುದಿಲ್ಲ. ಇವನು ಬ್ರಾಹ್ಮಣನೆಂದು ಹೇಳಿಕೊಳ್ಳುತ್ತಾನೆ. ಆದರೆ ಸಮಾಜದ ನಿಕೃಷ್ಟ ಮನುಷ್ಯನೂ ಮಾಡದಂತಹ ನಡವಳಿಕೆ ತೋರಿಸುತ್ತಾನೆ ಎಂದರು.

Karnataka minister and Congress leader KN Rajanna triggered a controversy when he claimed that the BJP was cheating people in the name of Lord Ram and compared the deity to "two dolls kept in a tent". "There are Ram temples with a history dating back thousands of years. These are holy places.