ಡಿ.ಕೆ. ಶಿವಕುಮಾರ್‌ ಅವರಿಗೆ ಮತ್ತೆ ಸಂಕಷ್ಟ ; ಸಿಬಿಐನಿಂದ ಮತ್ತೆ ಸಮನ್ಸ್ ಜಾರಿ

21-11-20 02:40 pm       Bangalore Correspondent   ಕರ್ನಾಟಕ

ಡಿ.ಕೆ.ಶಿ ಮತ್ತು ಅವರ ಸಹೋದರ ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಆಪ್ತರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಇದಕ್ಕೆ ಸಂಬಂಧಿಸಿ ಸಿಬಿಐ ಸಮನ್ಸ್ ನೀಡಿದೆ.

ಬೆಂಗಳೂರು, ನ.21: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸಿಬಿಐ ಮತ್ತೆ ಶಾಕ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.

ಪುತ್ರಿಯ ನಿಶ್ಚಿತಾರ್ಥದ ದಿನವೇ ಅಂದರೆ ನವೆಂಬರ್ 19 ರಂದು ಸಿಬಿಐ ಅಧಿಕಾರಿಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಅಧಿಕಾರಿಗಳು ಸಮನ್ಸ್‌ ಕೊಟ್ಟಿದ್ದಾರೆ. ಈ ಬಗ್ಗೆ ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಖಚಿತಪಡಿಸಿದ್ದು, ಅವರಿಗೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ. ನಾಡಿದ್ದು ನವೆಂಬರ್ 23 ಸಿಬಿಐ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ನಲ್ಲಿ ಸಿಬಿಐ ಅಧಿಕಾರಿಗಳು ಸೂಚಿಸಿದ್ದಾರೆ.

ಸಿಬಿಐನಿಂದ ಸಮನ್ಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರು, ನವೆಂಬರ್ 19 ರಂದು ನನಗೆ ಸಮನ್ಸ್ ಬಂದಿರುವುದು ನಿಜ. ಬೆಂಗಳೂರಿನ ಸಿಬಿಐ ಕಚೇರಿಯಿಂದ ನೊಟೀಸ್ ಬಂದಿದೆ. ನವೆಂಬರ್ 23 ರಂದು ವಿಚಾರಣೆಗೆ ಬರಲು ಆಗುವುದಿಲ್ಲ ಎಂದು ಮನವಿ ಮಾಡಿದ್ದೇನೆ. ಹೀಗಾಗಿ ನವೆಂಬರ್ 25 ರಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಸದಾಶಿವನಗರದ ನಿವಾಸದಲ್ಲಿ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಅಕ್ಟೋಬರ್ 5ರಂದು ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಆಪ್ತರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಇದಕ್ಕೆ ಸಂಬಂಧಿಸಿ ವಿಚಾರಣೆ ನಡೆಸುವುದಕ್ಕಾಗಿ ಸಿಬಿಐ ಸಮನ್ಸ್ ನೀಡಿದೆ.

The Central Bureau of Investigation (CBI) has issued summons to Karnataka Pradesh Congress Committee President DK Shivakumar to appear before the investigators for questioning on November 23.