Chitradurga, Accident: ಚಿತ್ರದುರ್ಗದಲ್ಲಿ ಕಾರು- ಟ್ಯಾಂಕರ್ ನಡುವೆ ಭೀಕರ ಅಪಘಾತ ; ಇಬ್ಬರ ಸಾವು, ಮತ್ತಿಬ್ಬರು ಗಂಭೀರ 

19-01-24 11:59 am       HK News Desk   ಕರ್ನಾಟಕ

ಇಲ್ಲಿನ ಮದಕರಿಪುರ ಸೇತುವೆ ಬಳಿ ಕಾರು- ಟ್ಯಾಂಕರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿ, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ

ಚಿತ್ರದುರ್ಗ, ಜ 19: ಇಲ್ಲಿನ ಮದಕರಿಪುರ ಸೇತುವೆ ಬಳಿ ಕಾರು- ಟ್ಯಾಂಕರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿ, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ

ಬೆಂಗಳೂರು ಮೂಲದ ನಿರ್ಮಲ (55), ವಿನುತ (40) ಮೃತರು. ಗಾಯಾಳುಗಳಾದ ಯಶಸ್ (2), ಫಣಿರಾಜ (36) ರಶ್ಮಿ (32) ರನ್ನು ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಚಿತ್ರದುರ್ಗದ ಮದಕರಿಪುರ ಹೊಸ ಹೈವೆ ಬ್ರಿಡ್ಜ್ ಬಳಿ ಘಟನೆ ನಡೆದಿದೆ. ಕಾರಿನಲ್ಲಿದ್ದವರು ಬೆಂಗಳೂರು ಕಡೆಯಿಂದ ಹೊಸಪೇಟೆ ಕಡೆ ಹೋಗುತ್ತಿದ್ದರು ಎನ್ನಲಾಗಿದೆ.

Two persons were killed on the spot and two others seriously injured in a car-tanker collision near Madakaripura bridge here on Friday