ಬ್ರೇಕಿಂಗ್ ನ್ಯೂಸ್
19-01-24 05:35 pm HK News Desk ಕರ್ನಾಟಕ
ಶಿವಮೊಗ್ಗ, ಜ 19: ನಾವು ಹಿಂದೂಗಳು. ನನ್ನ ಎದೆ ಸೀಳಿದರೂ ಶ್ರೀರಾಮನಿದ್ದಾನೆ, ಸಿದ್ದರಾಮನೂ ಇದ್ದಾನೆ. ನಮ್ಮನ್ನು ಬಿಜೆಪಿಯವರು ಹಿಂದೂ ವಿರೋಧಿಗಳೆಂದು ಬಿಂಬಿಸುತ್ತಿದ್ದಾರೆ. ರಾಮ ಮಂದಿರ ಮೊದಲು ಓಪನ್ ಮಾಡಿಸಿದ್ದೆ ರಾಜೀವ್ ಗಾಂಧಿಯವರು. ನಾನು ಅಯೋಧ್ಯೆಗೆ ಹೋಗುತ್ತೇನೆ, ಪೂಜಿಸುತ್ತೇನೆ. ನನ್ನ ಆರಾಧ್ಯ ದೈವ ಶ್ರೀರಾಮ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಮಧು ಬಂಗಾರಪ್ಪ ಅವರು ತಂದೆಯ ಹಾದಿಯಲ್ಲಿ ನಡೆಯುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ನವರು ಅನೇಕ ಬದಲಾವಣೆ ತಂದಿದ್ದಾರೆ. ಅಲ್ಲಮ ಪ್ರಭುಗಳ ಹೆಸರನ್ನು ಫ್ರೀಡಂ ಪಾರ್ಕ್ ಗೆ ಇಟ್ಟಿದ್ದಾರೆ ಎಂದರು.
ಗ್ಯಾರಂಟಿಗಳ ಹಣ ವ್ಯರ್ಥವಾಗುತ್ತಿದೆ ಎಂದು ವಿರೋಧ ಪಕ್ಷಗಳು ಹೇಳುತ್ತಿದ್ದಾರೆ. ನಾನು ಬೇಕಾದರೆ ಡಾಟಾ ಮೂಲಕ ಗ್ಯಾರಂಟಿ ಸಾಧನೆ ಕೊಡಬಲ್ಲೆ. 8320 ಕೋಟಿಗಳ ದುರಸ್ತಿ ಆಗುತ್ತಿದೆ ಎಂದರು.
ಶಿಕ್ಷಣದಲ್ಲಿ ಬದಲಾವಣೆ ಬೇಕಿದೆ: ಸರ್ಕಾರಿ ಶಾಲೆಯ ಶಿಕ್ಷಕರು ಬುದ್ದಿವಂತರಿರುತ್ತಾರೆ. ಪ್ರಾಥಮಿಕ ಶಿಕ್ಷಣವನ್ನು ಗಟ್ಟಿ ಮಾಡುವ ಅವಶ್ಯಕತೆಯಿದೆ. ಯಾವುದೇ ವ್ಯವಸ್ಥೆಯನ್ನು ಮುಂದುವರಿಸಲು ಶಿಕ್ಷಣವೇ ಕಾರಣ. ಶಿಕ್ಷಣದಲ್ಲಿ ಬದಲಾವಣೆ ಬರಬೇಕಿದೆ. ಮುಂದಿನ ಐದು ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಕಾಣುತ್ತೀರಿ. ಹಳೆ ಸರ್ಕಾರ ಪಠ್ಯ ಪುಸ್ತಕ ಬದಲಾವಣೆಯನ್ನು ನಾವು ಸರಿ ಮಾಡುತ್ತಿದ್ದೇವೆ ಎಂದರು.
ಕೈ ಮುಗಿದು ಬೇಡುತ್ತೇನೆ, ಯುವಕರು ರಾಜಕಾರಣಿಗಳ ಹಿಂದೆ ಬರಬೇಡಿ. ನಾಳೆ ನಿಮ್ಮ ಹೆಚ್ಚುಕಮ್ಮಿಯಾದರೆ ಯಾರೂ ಬರುವುದಿಲ್ಲ, ಕೋಮುಗಲಭೆಯಲ್ಲಿ ಯಾವ ಸಮುದಾಯದ ಯುವಕರು ಹೋಗಬೇಡಿ. 25 ವರ್ಷಕ್ಕೆ ಕೇಸ್ ಆದರೆ ಕಷ್ಟ. ನಾನು ಸಹ ಒಬ್ಬ ರಾಜಕಾರಣಿ ಹಿಂದೆ ಬಿದ್ದು 22 ಕೇಸ್ ಹಾಕಿಸಿಕೊಂಡಿದ್ದೆ ಎಂದರು.
ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನೀವು ನಮ್ಮ ನಾಯಕರನ್ನು ಬೈದ ಹಾಗೆ ನಾವು ಬೈಯ್ಯಬೇಕಾ? ಅವರು ಬೈದಿರುವುದು ನಮ್ಮ ಮುಖ್ಯಮಂತ್ರಿಯವರನ್ನು. ಅವರಿಗೆ ಒಂದು ಘನತೆಯಿದೆ. ಏಕವಚನದ ಪದ ಬಳಕೆ ಬೇಡ. ಪ್ರತಾಪ್ ಸಿಂಹ, ಅನಂತ ಕುಮಾರ್ ಹೆಗಡೆಯವರು ಯಾವ ಸೀಮೆಯ ಲೀಡರ್? ಸಂಸ್ಕೃತಿ, ಸಂಸ್ಕಾರದ ಬಗ್ಗೆ ಚರ್ಚೆಗೆ ಬನ್ನಿ. ಶಿರಸಿಗೆ ನಾನೇ ಬರಲಾ? ಸಂಸ್ಕಾರದ ನಮಗೆ ಹೇಳಕೊಡಬೇಡಿ. ನಮ್ಮಮನೆಯಲ್ಲಿ ಸಂಸ್ಕಾರ ಕಳಿಸಿಕೊಟ್ಟಿದ್ದಾರೆ. ದೊಡ್ಡವರಿಗೆ ಗೌರವ ಕೊಡಬೇಕು ಎಂದರು.
20 ಸ್ಥಾನ ಲೋಕಸಭೆಯಲ್ಲಿ ಗೆಲ್ಲುತ್ತೇನೆ. ಸುಧಾಕರ್ ಅವರೇ ಒಮ್ಮೆ ಸೋತಿದ್ದೀರಿ ಮತ್ತೆ ಬಂದು ಸೋಲಬೇಡಿ. ಮತ್ತೊಮ್ಮೆ ಸೋತರೆ ಜನ ಕೈಬಿಡುತ್ತಾರೆ. ನಮ್ಮೂರ ಹುಡುಗ ಸೋಲುತ್ತಾನೆ ಎಂದು ಹೇಳುತ್ತಿದ್ದೇನೆ.ಕೊವಿಡ್ ನಲ್ಲಿ ಅವ್ಯವಹಾರ ನಡೆದಿದೆ ಅದನ್ನು ತನಿಖೆ ಮಾಡಿ. ಸ್ವಾತಂತ್ರ ಬಂದಾಗಿನಿಂದ ರಸ್ತೆಯೇ ಆಗಿಲ್ಲ. ಸುಧಾಕರ್ ನಗರ ಅಭಿವೃದ್ಧಿ ಮಾಡಿದ್ದಾರೆ, ಆದರೆ ಹಳ್ಳಿಗಳ ಅಭಿವೃದ್ಧಿ ಕಡೆಗಣಿಸಿದ್ದಾರೆ ಚಂದ್ರನಲ್ಲಿ ನೀರು ಹುಡುಕುತ್ತಿದ್ದಾರೆ ಆದರೆ ನಮ್ಮ ಕ್ಷೇತ್ರದ ಜನ ಕುಡಿಯುವ ನೀರಿಲ್ಲದೆ ಕಣ್ಣಿರು ಹಾಕುತ್ತಿದ್ದಾರೆ ಎಂದು ಪ್ರದೀಪ್ ಈಶ್ವರ್ ಹೇಳಿದರು.
ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನಾಳೆ ಪಕ್ಷ ಕಸ ಗುಡಿಸು, ರಾಜೀನಾಮೆ ಕೊಡು ಎಂದರೆ ಹಾಗೆ ಮಾಡುತ್ತೇನೆ. ಪಾರ್ಟಿ ಹೇಳಿದರೆ ಲೋಕಸಭೆಗೂ ನಿಲ್ಲುತ್ತೇನೆ. ಪಕ್ಷ ಸಂಘಟಿಸುವ ಆಸೆ ನನಗಿದೆ ಎಂದರು.
Mla Pradeep Eshwar slams Pratap Simha and Anantkumar Hegde over remarks on CM Siddaramaiah. Says i am a true hindu, i will go to ayodhya ram temple he added. Pratap Simha and Anantkumar Hegde Should learn to respect, i will teach them what respect is he added.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm