Ram mandir celebration Shivamogga, Muslim slogan: ಸಿಹಿ ಹಂಚುತ್ತಿದ್ದ ಕಾರ್ಯಕರ್ತರು ; ಟ್ರಾಫಿಸ್ ಜಾಮ್ ಆಗಿದ್ದಕ್ಕೆ ರೊಚಿಗೆದ್ದ ಲೇಡಿ, ಹೇ..ನಿಮ್ ಮೋದಿ ಏನು ಮಾಡಿದ್ದಾನೆ? ಎಂದು ಕೇಳಿ ಅವಾಜ್, ಜೈಶ್ರೀರಾಮ್‌ ಕೂಗಿದ್ದಕ್ಕೆ ಅಲ್ಲಾ ಹು ಅಕ್ಬರ್ ಘೋಷಣೆ 

22-01-24 05:55 pm       HK News Desk   ಕರ್ನಾಟಕ

ರಾಮಜನ್ಮಭೂಮಿ ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣಪ್ರತಿಷ್ಠಾಪನಾ ಕಾರ್ಯವು ಅದ್ಧೂರಿಯಾಗಿ ನೆರವೇರಿದೆ.

ಶಿವಮೊಗ್ಗ, ಜ 22: ರಾಮಜನ್ಮಭೂಮಿ ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣಪ್ರತಿಷ್ಠಾಪನಾ ಕಾರ್ಯವು ಅದ್ಧೂರಿಯಾಗಿ ನೆರವೇರಿದೆ.

ಈ ಖುಷಿಯ ಸಂದರ್ಭದಲ್ಲಿ ಶಿವಮೊಗ್ಗ ನಗರದ ಶಿವಪ್ಪನಾಯಕ ಸರ್ಕಲ್‌ನಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಹಾಗೂ ಮುಸ್ಲಿಂ ಮಹಿಳೆ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಮಹಿಳೆ ಅಲ್ಲಾ ಹು ಅಕ್ಬರ್‌ ಎಂದು ಕೂಗಿರುವ ಘಟನೆ ನಡೆದಿದೆ.

ನಗರದ ಶಿವಪ್ಪನಾಯಕ ಸರ್ಕಲ್‌ನಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಸಿಹಿ ಹಂಚುತ್ತಿದ್ದರು. ಈ ವೇಳೆ ಟ್ರಾಫಿಕ್ ಜಾಮ್ ಉಂಟಾಗಿದೆ. ಟ್ರಾಫಿಕ್ ಜಾಮ್ ವೇಳೆ ಮುಂದು ಹೋಗುವಂತೆ ಶ್ರೀರಾಮನ ಭಕ್ತರು ಎಲ್ಲರಿಗೂ ಹೇಳುತ್ತಾ ಬಂದಿದ್ದಾರೆ. ಆಗ ಅಲ್ಲಿದ್ದ ಮುಸ್ಲಿಂ ಮಹಿಳೆಯೊಬ್ಬರು ಆಕ್ರೋಶಗೊಂಡಿದ್ದು, ನನ್ನನ್ನೇಕೆ ತಡೆಯುತ್ತೀರಿ? ಹೇ.. ನಿಮ್ಮ ಪ್ರಧಾನಿ ನರೇಂದ್ರ ಮೋದಿ ಏನು ಮಾಡಿದ್ದಾನೆ? ಎಂದು ಆಕ್ರೋಶವನ್ನು ವ್ಯಕ್ತಪಡಿಸಿದಳು. ಇದು ಆಕ್ರೋಶಕ್ಕೆ ಕಾರಣವಾಯಿತು.

ಅಲ್ಲದೆ, ಇದೇ ವೇಳೆ ಆ ಮಹಿಳೆ ಅಲ್ಲಾ ಹು ಅಕ್ಬರ್‌ ಎಂದು ಕೂಗಿದ್ದಾಳೆ. ಆಕೆ ಹೀಗೆ ಕೂಗುತ್ತಿದ್ದಂತೆ ರೊಚ್ಚಿಗೆದ್ದ ಶ್ರೀರಾಮ ಸೇನೆ ಕಾರ್ಯಕರ್ತರು, “ಜೈ ಶ್ರೀರಾಮ್” ಎಂದು ಘೋಷಣೆ ಕೂಗಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗುತ್ತಿದ್ದಂತೆ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದುಕೊಂಡರು.

ಘೋಷಣೆ ಕೂಗಿದ ಮಹಿಳೆಗೆ ಮಾನಸಿಕ ಸ್ಥಿಮಿತತೆ ಇರಲಿಲ್ಲ, ಕುಟುಂಬದವರ ಹೇಳಿಕೆ ; ಎಸ್ಪಿ

'ಅಲ್ಲಾ ಹು ಅಕ್ಬರ್' ಎಂದು ಘೋಷಣೆ ಕೂಗಿದ ಮಹಿಳೆಗೆ ಮಾನಸಿಕ ಸ್ಥೀಮಿತ ಇಲ್ಲ ಎಂದು ಆಕೆಯ ತಂದೆ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.

ಮಾನಸಿಕ ಸ್ಥೀಮಿತತೆ ಇಲ್ಲದ ಕಾರಣಕ್ಕೆ ಆಕೆ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ ಎಂದು ಆಕೆಯ ಕುಟುಂಬದವರು ತಿಳಿಸಿದ್ದು, ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tension prevailed for a while near Shivappa Nayaka circle on Monday when a 25-year-old Muslim woman, said to be mentally unstable, raised 'Allahu Akbar' slogans when activists of Hindu organisations were distributing sweets to people to mark the inauguration of Ram Mandir in Ayodhya in Uttar Pradesh.