Siddaramaiah, G. Parameshwar: ಸಿಎಂ ಸಿದ್ದರಾಮಯ್ಯ ಜೈ ಶ್ರೀರಾಮ್ ಅಂದರೆ ತಪ್ಪೇನಿದೆ ಸ್ವಾಮಿ ? ನಾವೂ ರಾಮಭಕ್ತರೇ, ನಮ್ಗೆ ರಾಮ ಹೆಸರಲ್ಲಿ ಜನರ ಒಡೆದಾಳುವ ನೀತಿ ಮಾಡೋರು ಬೇಕಾಗಿಲ್ಲ

23-01-24 07:14 pm       Bangalore Correspondent   ಕರ್ನಾಟಕ

ಸಿಎಂ ಸಿದ್ದರಾಮಯ್ಯ ಅವರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರೆ ತಪ್ಪೇನಿದೆ? ನಾವೆಲ್ಲಾ ರಾಮನ ಭಕ್ತರೇ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು‌.

ಬೆಂಗಳೂರು, ಜ 23: ಸಿಎಂ ಸಿದ್ದರಾಮಯ್ಯ ಅವರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರೆ ತಪ್ಪೇನಿದೆ? ನಾವೆಲ್ಲಾ ರಾಮನ ಭಕ್ತರೇ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು‌.

ಮಹದೇವಪುರದ ಸೀತಾ ರಾಮ ಲಕ್ಷ್ಮಣ ದೇವಸ್ಥಾನದ ಲೋಕಾರ್ಪೆಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೈ ಶ್ರೀರಾಮ್ ಘೋಷಣೆ ಕೂಗಿದ್ದರು. ಇದು ಕಾಂಗ್ರೆಸ್ ವಲಯದಲ್ಲಿ ಗೊಂದಲಕ್ಕೆ ಕಾರಣವಾಗಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಈ ಬಗ್ಗೆ ನಗರದಲ್ಲಿ ಮಂಗಳವಾರ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಹೇಳಿದ್ದರಲ್ಲಿ ಏನು ತಪ್ಪಿದೆ, ನಾವೆಲ್ಲರೂ ಕೂಡ ಹೇಳಿದ್ದೇವೆ. ಹೇಳದೆ ಇದ್ದರೆ ಶ್ರೀರಾಮ ವಿರೋಧಿ ಅಂತೀರಾ? ಹೇಳಿದ್ರೆ ಹೇಳಿದ್ರಪ್ಪ ಅಂತೀರಾ ಎಂದು ಪ್ರಶ್ನಿಸಿದರು.

ಹೇಳಿದ್ದು ಸರಿಯೇ, ಹೇಳದಿದ್ರೆ ಸರಿಯೇ ? ನಾವೆಲ್ಲಾ ಶ್ರೀ ರಾಮನ ಭಕ್ತರೇ. ಒಂದಲ್ಲ ಒಂದು ರೀತಿಯಲ್ಲಿ ಶ್ರೀ ರಾಮನ ಆದರ್ಶ ಪಾಲನೆ ಮಾಡಬೇಕೆಂದು ಹೇಳೋರೆ. ಶ್ರೀ ರಾಮ ಇವರು ಯಾರೋ ನಾಲ್ಕು ಜನಕ್ಕೆ ಆಗೋರು ಅಲ್ಲ. ನಮಗೆ ಬೇಕಾಗಿರುವುದು ದಶರಥ ರಾಮ ಬದಲಾಗಿ ಮೋದಿ ರಾಮ ಬೇಕಾಗಿಲ್ಲ ಎಂದರು.

ನಮಗೆ ಬೇಕಾಗಿರುವುದು ರಾಮ ರಾಜ್ಯ ಮಾಡಿದ ದಶರಥ ರಾಮ ವಿನಃ ರಾಮ ಹೆಸರಲ್ಲಿ ಜನರ ಒಡೆದಾಳುವ ನೀತಿ ಮಾಡೋರು ಬೇಕಾಗಿಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

Siddaramaiah chants Jai Shri Ram, home minister says what's wrong in saying.