ನಾನು ಬಿಜೆಪಿ ಅವ್ರಿಗೆ ಮನೆ ದೇವ್ರು ಆಗಿದ್ದೇನೆ ; ನನ್ ಬಗ್ಗೆ ಮಾತನಾಡದಿದ್ರೆ  ಅವ್ರಿಗೆ ತಿಂದ ಅನ್ನ ಜೀರ್ಣ ಆಗೋದಿಲ್ಲ ಎಂದ ಖರ್ಗೆ 

24-01-24 06:12 pm       HK News Desk   ಕರ್ನಾಟಕ

ನಾನು ಏನೇ ಮಾಡಿದ್ದರೂ, ಮಾತನಾಡಿದ್ದರೂ ಬಿಜೆಪಿಯವರಿಗೆ ನಾನು ಮನೆ ದೇವರಾಗಿದ್ದೇನೆ ಎಂದು  ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.

ಕಲಬುರಗಿ, ಜ 24: ನಾನು ಏನೇ ಮಾಡಿದ್ದರೂ, ಮಾತನಾಡಿದ್ದರೂ ಬಿಜೆಪಿಯವರಿಗೆ ನಾನು ಮನೆ ದೇವರಾಗಿದ್ದೇನೆ ಎಂದು  ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ಅವರಿಗೆ ಮನೆ ದೇವರಂತೆ ಆಗಿದ್ದೇನೆ. ಏನೇ ಇದ್ದರೂ ನನ್ನ ಬಗ್ಗೆ ಮಾತನಾಡುವವರೆಗೆ ತಿಂದ ಅನ್ನ ಕರುಗುವುದಿಲ್ಲ. ರಾಜ್ಯದಿಂದ 25 ಜನ ಸಂಸದರನ್ನು ಆಯ್ಕೆ ಮಾಡಿದ್ದರೂ ಏನು ತಂದಿದ್ದಾರೆ ಎಂದು ತಿರುಗೇಟು ನೀಡಿದರು.

ಪ್ರಸಕ್ತವಾಗಿ ವ್ಯಾಪಕ ಬರ ಬಿದ್ದಿದ್ದರೂ ಪರಿಹಾರ ಬರಲಿಲ್ಲ. ಯಾವುದೇ ದೊಡ್ಡ ಯೋಜನೆ ಬರಲಿಲ್ಲ. ನರೇಗಾ 150 ದಿನಕ್ಕೆ ಹೆಚ್ಚಳ ಮಾಡಲಿಲ್ಲ. ಇವರು ಯಾವುದೇ ಲೆಸ ಮಾಡಿಲ್ಲ. ಅಯೋಗ್ಯ, ಅಸಮರ್ಥ ಪದಗಳ ಎಲ್ಲ ಸಮನಾರ್ಥಕ ಪದಗಳು ಬಿಜೆಪಿ ರಾಜ್ಯ ನಾಯಕರಿಗೆ ಸರಿಹೊಂದುತ್ತವೆ ಎಂದು ಹೇಳಿದರು.

ನನಗೆ ಯಾರ ಮೇಲೆ ಭಕ್ತಿ ಇಲ್ಲ. ಬಸವೇಶ್ವರ, ಅಂಬೇಡ್ಕರ್ ತತ್ವದ ಮೇಲೆ ಭಕ್ತಿ ಇದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಯಾವ ತತ್ವದಲ್ಲಿ ಸಮಾನತೆ ಎಂಬುದು ಇಲ್ಲವೋ ಅದನ್ನು ನಾನು ಒಪ್ಪುವುದಿಲ್ಲ. ರಾಮ ಅಸಮಾನತೆ ಮಾಡಿಲ್ಲ ಎಂಬ ಪ್ರಶ್ನೆಗೆ ಈ ಬಗ್ಗೆ ಅಂಬೇಡ್ಕರ್ ಪುಸ್ತಕ ಬರೆದಿದ್ದಾರೆ ಅದನ್ನು ಬಿಜೆಪಿಯವರು ಓದಲಿ ಎಂದು ಸಲಹೆ ನೀಡಿದರು. ನಂಬಿಕೆ ಇದ್ದವರು ಅವರ ನಂಬಿಕೆಗೆ ಅನುಸಾರವಾಗಿ ಹೋಗಬಹುದಾಗಿದೆ. ನಾನು ಶರಣಬಸವೇಶ್ವರ ದೇವಸ್ಥಾನ, ದರ್ಗಾಗೆ ಭೇಟಿ ನೀಡುತ್ತೇನೆ. ಅಲ್ಲಿ ಹೋಗಬೇಡ ಇಲ್ಲಿ ಹೋಗಬೇಡ ಎಂಬ ಕಟ್ಟಳೆಗಳು ಇರುವುದಿಲ್ಲ. ಎಲ್ಲರಿಗೂ ಸಮಾನತೆಯಿಂದ ದಾಸೋಹ ನೀಡಲಾಗುತ್ತದೆ ಇಂತಹ ಸ್ಥಳಗಳಿಗೆ ನಾನು ಹೋಗುತ್ತೇನೆ ಎಂದು ಹೇಳಿದರು.

Karnataka Minister Priyank Kharge on Saturday said that whatever he has done or spoken about, he is a "house god" for the BJP. Speaking to reporters on Wednesday, Hegde said, "I am like a house god to the BJP.