Basavaraj Horatti, Jagadish Shettar: ಜಗದೀಶ್ ಶೆಟ್ಟರ್​ ಪಕ್ಷಾಂತರ ನಿಷೇಧ ಕಾಯ್ದೆಯಡಿ ಲೋಪ ಮಾಡಿದ್ದಾರೆ ; ಸಭಾಪತಿ ಹೊರಟ್ಟಿ

25-01-24 10:30 pm       Bangalore Correspondent   ಕರ್ನಾಟಕ

ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್‌ ತೊರೆದು ಮರಳಿ ಮಾತೃಪಕ್ಷ ಬಿಜೆಪಿ ಸೇರಿದ ಜಗದೀಶ್ ಶೆಟ್ಟರ್​ಗೆ ಸಂಕಷ್ಟ ಎದುರಾಗಿದೆ. ಜಗದೀಶ್ ಶೆಟ್ಟರ್​ ಅವರಿಗೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗುತ್ತದೆ ಅಂತ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. 

ಬೆಂಗಳೂರು, ಜ.25: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್‌ ತೊರೆದು ಮರಳಿ ಮಾತೃಪಕ್ಷ ಬಿಜೆಪಿ ಸೇರಿದ ಜಗದೀಶ್ ಶೆಟ್ಟರ್​ಗೆ ಸಂಕಷ್ಟ ಎದುರಾಗಿದೆ. ಜಗದೀಶ್ ಶೆಟ್ಟರ್​ ಅವರಿಗೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗುತ್ತದೆ ಅಂತ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. 

ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಜಗದೀಶ್ ಶೆಟ್ಟರ್ ರಾಜೀನಾಮೆ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ನನಗೆ 11:45ಕ್ಕೆ ಜಗದೀಶ್ ಶೆಟ್ಟರ್ ಕರೆ ಮಾಡಿ, ಬಿಜೆಪಿಗೆ ಹೋಗ್ತಿದ್ದೀನಿ ರಾಜಿನಾಮೆ ಕೊಡುತ್ತೇನೆ ಎಂದರು. ನಾನು ರಾಜಿನಾಮೆ ಕಳಿಸಿಕೊಡಿ ಅಂತ ಹೇಳಿದ್ದೇನೆ. 

Former Karnataka CM Jagadish Shettar returns to BJP, had joined Congress  last year | Bangalore News - The Indian Express

ಆದರೆ, ಶೆಟ್ಟರ್​ ಅವರು ರಾಜೀನಾಮೆ ಪತ್ರವನ್ನು ಮೇಲ್ ಮಾಡ್ತೀನಿ ಎಂದಿದ್ದರು. ಇನ್ನೂ ನನಗೆ ಮೇಲ್ ಬಂದಿಲ್ಲ. ಮೇಲ್ ಬಂದರೂ ಅದನ್ನು ಗಣನೆ ತೆಗೆದುಕೊಳ್ಳಲು ಆಗೋದಿಲ್ಲ. ಯಾವುದೇ ಸದಸ್ಯ ನೇರವಾಗಿ ಬಂದು ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಹೊರಟ್ಟಿ ತಿಳಿಸಿದ್ದಾರೆ. 

ರಾಜೀನಾಮೆ ಪಡೆಯುವಾಗ, ಸ್ವ ಇಚ್ಛೆಯಿಂದ ರಾಜೀನಾಮೆ ಕೊಡ್ತಿದ್ದೀರಾ ಅಂತ ಕೇಳ್ತೀವಿ. ಅವರು ಪಕ್ಷ ಬಿಟ್ಟು ಬೇರೆ ಪಕ್ಷ ಹೋಗೋದು ಅವರ ಇಷ್ಟ. ಆದರೆ ಜಗದೀಶ್ ಶೆಟ್ಟರ್ ಅವರು ಈಗಲೂ ಕಾಂಗ್ರೆಸ್​ ಸದಸ್ಯರು. ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆದರೂ ಆಗಬಹುದು ಎಂದು ಸಭಾಪತಿ ತಿಳಿಸಿದ್ದಾರೆ.

ಜಗದೀಶ್ ಶೆಟ್ಟರ್ ರಾಜೀನಾಮೆ ವಿಚಾರದಲ್ಲಿ ಯಾರಾದ್ರೂ ದೂರು ಕೊಡಬಹುದು. ಇದುವರೆಗು ಯಾವ ಪಕ್ಷದ ನಾಯಕರು ನನ್ನ ಜೊತೆ ಮಾತನಾಡಿಲ್ಲ. ಕಾನೂನು ಪ್ರಕಾರ ಯಾವುದೇ ಸದಸ್ಯ ರಾಜೀನಾಮೆ ಕೊಟ್ಟ ನಂತರವಷ್ಟೇ ಬೇರೆ ಪಕ್ಷಕ್ಕೆ ಹೋಗಬೇಕು ಎಂದು ಹೊರಟ್ಟಿ ಹೇಳಿದ್ದಾರೆ.

Jagadish Shettar, who quit the Congress ahead of the Lok Sabha elections and returned to his parent party BJP, is in trouble. Council Chairman Basavaraj Horatti said that the anti-defection law will be applicable to Jagadish Shettar.