ಬ್ರೇಕಿಂಗ್ ನ್ಯೂಸ್
26-01-24 08:17 pm Bangalore Correspondent ಕರ್ನಾಟಕ
ಬೆಂಗಳೂರು, ಜ 26: ನಟಿ ಪವಿತ್ರಾ ಗೌಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ನಟ ದರ್ಶನ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡು, “ನಮ್ಮ ಸಂಬಂಧಕ್ಕೆ 10 ವರ್ಷ” ಎಂದು ಪೋಸ್ಟ್ ಮಾಡಿ ದರ್ಶನ್ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಇತ್ತ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಪವಿತ್ರಾ ಗೌಡ ವಿರುದ್ಧ ಕಾನೂನು ಕ್ರಮ ಕೈಗೊಳ್ಳೋದಾಗಿ ಎಚ್ಚರಿಕೆ ನೀಡಿದ್ದಾರೆ.
ಪವಿತ್ರಾ ಗೌಡ ಪೋಸ್ಟ್ ಅಲ್ಲಿ ಏನಿದೆ?
ಪವಿತ್ರಾ ಗೌಡ ಅವರು ಇದ್ದಕ್ಕಿದ್ದಂತೆ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಜೊತೆಗಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, “ಒಂದು ದಶಕ ಕಳೆಯಿತು, ನಮ್ಮ ಸಂಬಂಧಕ್ಕೆ 10 ವರ್ಷ” ಎಂದು ಬರೆದುಕೊಂಡಿದ್ದಾರೆ.
ಖುಷಿ ಗೌಡ ಜನ್ಮದಿನ ಆಚರಿಸಿದ್ದ ದರ್ಶನ್ ದರ್ಶನ್ ಜೊತೆಗೆ ಪವಿತ್ರಾ ಅವರು ಸಾಕಷ್ಟು ಪ್ರವಾಸ ಮಾಡಿರುವ ಫೋಟೋಗಳು, ಪೂಜೆಗೆ ಕೂತುಕೊಂಡಿದ್ದು, ಹುಟ್ಟುಹಬ್ಬ ಆಚರಣೆ ಮಾಡಿದ ಫೋಟೋಗಳು ಕೂಡ ಅದರಲ್ಲಿ ಇವೆ.
ಕೆಲವು ದಿನಗಳ ಹಿಂದೆ ಪವಿತ್ರಾ ಗೌಡ ಅವರ ಮಗಳು ಖುಷಿ ಗೌಡ ಅವರ ಜನ್ಮದಿನವನ್ನು ದರ್ಶನ್ ಅವರು ಆಚರಿಸಿದ್ದರು. ಖುಷಿ ಗೌಡ ಜೊತೆಗೆ ಡ್ಯಾನ್ಸ್ ಮಾಡಿ ಕೇಕ್ ತಿನಿಸಿದ್ದರು. ಈ ವಿಡಿಯೋವನ್ನು ಪವಿತ್ರಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಕಳೆದ ವರ್ಷ ಕೂಡ ದರ್ಶನ್ ಅವರ ಜನ್ಮದಿನವನ್ನು ಪವಿತ್ರಾ ಅವರು ಗ್ರ್ಯಾಂಡ್ ಆಗಿ ಆಚರಿಸಿದ್ದರು. ಈ ವಿಡಿಯೋವನ್ನು ನಟಿ ಮೇಘಾ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗ, ಅದನ್ನು ಆಗಲೂ ವಿಜಯಲಕ್ಷ್ಮೀ ಅವರು ವಿರೋಧಿಸಿದ್ದರು.
ಬೇರೆಯವರ ಗಂಡನ ಜೊತೆಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವಾಗ ಪವಿತ್ರಾ ಗೌಡ ಅವರು ಯೋಚನೆ ಮಾಡಬೇಕು ಎಂದು ನಾನು ಅಂದುಕೊಳ್ಳುತ್ತಿದ್ದೇನೆ. ಇದು ಅವರ ಕ್ಯಾರೆಕ್ಟರ್ ಏನು? ನೈತಿಕತೆ ಏನು ಎಂದು ತೋರಿಸುತ್ತದೆ. ಮದುವೆಯಾಗಿರುವ ಪುರುಷ ಎಂದು ಗೊತ್ತಿದ್ದರೂ ವೈಯಕ್ತಿಕ ಹಿತಾಸಕ್ತಿಗೋಸ್ಕರ ಅವರು ಈ ರೀತಿ ಮಾಡಿದ್ದಾರೆ. ಖುಷಿ ಗೌಡ ಅವರು ಪವಿತ್ರಾ, ಸಂಜಯ್ ಸಿಂಗ್ ಅವರ ಪುತ್ರಿ ಎನ್ನೋದನ್ನು ಈ ಫೋಟೋ ಸ್ಪಷ್ಟವಾಗಿ ಹೇಳುತ್ತದೆ. ನಾನು ಸಾಮಾನ್ಯವಾಗಿ ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡಲು ಸೋಶಿಯಲ್ ಮೀಡಿಯಾವನ್ನು ನಾನು ಬಳಸೋದಿಲ್ಲ. ಆದರೆ ಈಗ ನನ್ನ ಕುಟುಂಬದ ಪರವಾಗಿ ನಾನು ಮಾತನಾಡಬೇಕಿದೆ, ಇಡೀ ಸಮಾಜಕ್ಕೆ ಬೇರೆ ಚಿತ್ರಣವನ್ನು ನೀಡುತ್ತಿರುವ ವ್ಯಕ್ತಿಗಳ ವಿರುದ್ಧ ನಾನು ಕಾನೂನು ಕ್ರಮವನ್ನು ಕೈಗೊಳ್ಳುತ್ತೇನೆ” ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಅಂದಹಾಗೆ ನಿನ್ನೆಯೇ ವಿಜಯಲಕ್ಷ್ಮೀ ಅವರು ದರ್ಶನ್ ಹಾಗೂ ಮಗ ವಿನೀಶ್ ಜೊತೆಗಿನ ಫೋಟೋವನ್ನು ಹಂಚಿಕೊಂಡು, ಎಂದೆಂದಿಗೂ ಫ್ಯಾಮಿಲಿ ಇರುವುದು ಎಂಬ ಅಡಿಬರಹ ನೀಡಿದ್ದರು. ಅದರ ನಂತರದಲ್ಲಿ ಪವಿತ್ರಾ ಅವರು ದರ್ಶನ್ ಜೊತೆಗಿನ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದರು.
Kannada actor Darshan’s life is under the radar once again. This time the ongoing conflict between his wife, Vijayalakshmi, and model actress Pavithra Gowda has escalated to new heights. It all started when Pavithra Gowda shared a reel with Darshan celebrating what she claims to be a decade-long relationship. Vijayalakshmi took to her social media to condemn the actress for her move.
18-04-25 05:38 pm
HK News Desk
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
18-04-25 12:54 pm
Mangalore Correspondent
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲ...
17-04-25 04:39 pm
Mangalore, Bantwal Accident, Melroy D’Sa: ಬಂಟ...
16-04-25 10:58 pm
18-04-25 08:14 pm
HK News Desk
Dead Baby Found, Garbage, Bangalore crime: ಅಪ...
18-04-25 03:41 pm
Ullal Gang rape, Mangalore, Arrest: ಪಶ್ಚಿಮ ಬಂ...
17-04-25 09:56 pm
Gang Rape, Mangalore, Ullal, Crime: ಪಶ್ಚಿಮ ಬಂ...
17-04-25 03:19 pm
Sullia, Drugs, Mangalore, Ccb Police; ದೆಹಲಿಯಿ...
17-04-25 11:39 am