ಐಎಂಎ ಬಹುಕೋಟಿ ವಂಚನೆ ಪ್ರಕರಣ ; ಮಾಜಿ ಸಚಿವ ರೋಶನ್ ಬೇಗ್ ಅರೆಸ್ಟ್

23-11-20 10:10 am       Bangalore Correspondent   ಕರ್ನಾಟಕ

ಮಾಜಿ ಸಚಿವ ರೋಶನ್ ಬೇಗ್ ಅವರನ್ನು ಐಎಂಎ ಜುವೆಲ್ಲರಿ ವಂಚನೆ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.  

ಬೆಂಗಳೂರು, ನ.23: ಕಾಂಗ್ರೆಸ್ ಮುಖಂಡರಾಗಿದ್ದ , ಮಾಜಿ ಸಚಿವ ರೋಶನ್ ಬೇಗ್ ಅವರನ್ನು ಐಎಂಎ ಜುವೆಲ್ಲರಿ ವಂಚನೆ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.  

ರೋಶನ್ ಬೇಗ್ ಅವರನ್ನು  ವಿಚಾರಣೆಗೆ ಹಾಜರಾಗಲು ಸಿಬಿಐ ನೋಟಿಸ್ ನೀಡಿತ್ತು. ಅದರಂತೆ, ಭಾನುವಾರ ಬೆಳಗ್ಗೆ ಬೇಗ್ ಸಿಬಿಐ ಕಚೇರಿಗೆ ತೆರಳಿ, ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಆದರೆ, ವಿಚಾರಣೆ ವೇಳೆ ಬೇಗ್ ಪಾತ್ರ ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ ಅಧಿಕಾರಿಗಳು ಬಂಧಿಸಿದ್ದಾರೆ. 

ಬಂಧನ ಬಳಿಕ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ರೋಶನ್ ಬೇಗ್ ಶಿವಾಜಿನಗರದ ಮಾಜಿ ಶಾಸಕರಾಗಿದ್ದು ಕಾಂಗ್ರೆಸ್ - ಜೆಡಿಎಸ್ ಸರಕಾರದ ಸಂದರ್ಭದಲ್ಲಿ ಅನರ್ಹಗೊಂಡು ಕಾಂಗ್ರೆಸ್ ಕೋಪಕ್ಕೆ ಗುರಿಯಾಗಿದ್ದರು‌. ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಸಚಿವರಾಗಿದ್ದರು.

Roshan Baig, a former Congress minister in Karnataka, was on Sunday arrested by the CBI in connection with the Rs 4,000-crore IMA ponzi scam. He was produced in a court and sent to 14-day judicial custody.