ಬ್ರೇಕಿಂಗ್ ನ್ಯೂಸ್
20-04-24 12:53 pm HK News Desk ಕರ್ನಾಟಕ
ಹುಬ್ಬಳ್ಳಿ, ಎ.20: ತಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದಕ್ಕೆ ಮಗಳನ್ನು ಕಳೆದುಕೊಳ್ಳಬೇಕಾಯಿತು ಎಂದು ಹುಬ್ಬಳ್ಳಿ ಕಾಲೇಜಿನಲ್ಲಿ ಮುಸ್ಲಿಂ ಯುವಕನಿಂದ ಕೊಲೆಯಾಗಿರುವ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ತಂದೆ ಕಾಂಗ್ರೆಸ್ ಕಾರ್ಪೋರೇಟರ್ ನಿರಂಜನ್ ಹಿರೇಮಠ ಅಳಲು ತೋಡಿಕೊಂಡಿದ್ದಾರೆ.
ನಾನು ಮಹೇಶ್ ಟೆಂಗಿನಕಾಯಿ (ಬಿಜೆಪಿ ಶಾಸಕ) ಶಿಷ್ಯ, ಆ ಕಡೆ ಹೋಗಿದ್ದಕ್ಕೆ ಮಗಳನ್ನು ಕಳೆದುಕೊಂಡೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಜತೆ ಅಳಲು ತೋಡಿಕೊಂಡಿದ್ದಾರೆ. ನಾನು ಸಾರ್ವಜನಿಕ ಬದುಕಿನಲ್ಲಿ ಇರುವವನು. ನನಗೆ ಹೀಗಾದರೆ ಹೇಗೆ ಎಂದು ಅಳಲು ತೋಡಿಕೊಂಡಿದ್ದಾರೆ. ಆಗ ಯತ್ನಾಳ್ ನಿಮ್ಮ ಪಕ್ಷದವರು ಯಾರೂ ಇದನ್ನು ಖಂಡನೆ ಮಾಡಿಲ್ಲ. ಈ ರೀತಿಯ ಸ್ಥಿತಿ ಯಾರಿಗೂ ಬರಬಾರದು. ಕಾಂಗ್ರೆಸ್ ಸರ್ಕಾರದಿಂದಾಗಿ ರಾಜ್ಯದಲ್ಲಿ ಇಂತಹ ಸ್ಥಿತಿಯಾಗಿದೆ ಎಂದು ಟೀಕಿಸಿದ್ದಾರೆ.
ಹುಬ್ಬಳ್ಳಿ ನಗರದ ಬಿಡನಾಳದಲ್ಲಿರುವ ನಿರಂಜನ್ ಹಿರೇಮಠ ನಿವಾಸಕ್ಕೆ ಶಾಸಕ ಯತ್ನಾಳ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಭಾರತದಲ್ಲಿ ಲವ್ ಜಿಹಾದ್ನ ದೊಡ್ಡ ಜಾಲ ಇದೆ. ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿ ಲವ್ ಮಾಡಿ ಮತಾಂತರ ಮಾಡಲಿಕ್ಕೆ 10-20 ಲಕ್ಷ ರೂ. ಹಣ ಕೊಡುವ ಕೆಲಸ ಆಗುತ್ತಿದೆ. ಆದರೆ ನೇಹಾ ಹಿರೇಮಠ ಯಾವುದೇ ಆಮಿಷಕ್ಕೂ ಒಳಗಾಗಿರಲಿಲ್ಲ ಎಂದಿದ್ದಾರೆ.
ದೇಶದಲ್ಲಿ ಮುಸ್ಲಿಂ ಯುವತಿಯರ ಕೊಲೆಯಾಗಿದ್ಯಾ. ಮುಸ್ಲಿಂ ಯುವತಿ ಕೈಕೊಟ್ರೆ ಹಿಂದೂಗಳು ರೈಲ್ವೇ ಹಳಿಗೆ ಬಿದ್ದು ಸಾಯುತ್ತಾರೆ ಹೊರತು ಯಾರು ಕೂಡ ಕೊಲೆ ಮಾಡುವಂತಹ ಹಲ್ಕಾ ಕೆಲಸ ಮಾಡುವುದಿಲ್ಲ ಎಂದು ಕಿಡಿಕಾರಿದ್ದಾರೆ. ಗೃಹ ಸಚಿವರು ತಾಕತ್ ಇದ್ದರೆ ಆರೋಪಿಯನ್ನು ಎನ್ಕೌಂಟರ್ ಮಾಡಲು ಆದೇಶ ಮಾಡಬೇಕು ಎಂದರು.
Left BJP and joined Congress, had to lose my daughter says Neha father in Hubballi. Yatnal also visited their house and gave his condolences.
22-12-25 11:09 pm
HK News Desk
ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯ ಹುಟ್ಟುಹಬ್ಬದಲ್ಲಿ...
22-12-25 10:30 pm
ಅಧಿಕಾರ ಹಂಚಿಕೆ ಹೈಕಮಾಂಡ್ ತೀರ್ಮಾನವೇ ಅಂತಿಮ, ನಮ್ಮದ...
22-12-25 06:29 pm
ಸ್ಥಳೀಯ ಮಟ್ಟದಲ್ಲೇ ಗೊಂದಲ ಬಗೆಹರಿಸಿಕೊಳ್ಳಿ, ಎಲ್ಲದಕ...
21-12-25 05:33 pm
ಸಿಎಂ ಸ್ಥಾನ ಉಳಿಸಿಕೊಳ್ಳಲು ಅಹಿಂದ ಶಾಸಕರು, ಸಚಿವರ ರ...
20-12-25 03:05 pm
22-12-25 06:32 pm
HK News Desk
ಶಬರಿಮಲೆ ಚಿನ್ನ ಕಳವು ; ಬೆಂಗಳೂರಿನ ಜುವೆಲ್ಲರಿ ಮಾಲೀ...
20-12-25 01:51 pm
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
22-12-25 06:36 pm
Mangalore Correspondent
ಕೋಳಿ ಅಂಕದಲ್ಲಿ ಪೆಟ್ಟು ಕೊಡಲು ಇವರ ಅಪ್ಪನ ಜಾಗವಾ?...
22-12-25 12:26 pm
ಕೇಪು ಜಾತ್ರೆ ಕೋಳಿ ಅಂಕಕ್ಕೆ ಎರಡನೇ ದಿನವೂ ಪೊಲೀಸ್ ದ...
21-12-25 11:04 pm
ಕೇಪು ಜಾತ್ರೆ ಕೋಳಿ ಅಂಕ ಮಾಡಿಸಿದ ಶಾಸಕರ ವಿರುದ್ಧ ಕೇ...
20-12-25 10:53 pm
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
22-12-25 04:00 pm
Mangalore Correspondent
ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ; 19 ವರ್ಷದ ಗರ್ಭಿ...
22-12-25 02:18 pm
Udupi Arrest, Pakistan: ಕೊಚ್ಚಿನ್ ಶಿಪ್ ಯಾರ್ಡ್...
22-12-25 01:06 pm
ಟ್ರಾಫಿಕ್ ದಂಡದ ಹೆಸರಲ್ಲಿ ಎಪಿಕೆ ಫೈಲ್ ಲಿಂಕ್ ; ಮೋಸ...
21-12-25 09:36 pm
Cyber Fraud: ಸೈಬರ್ ವಂಚಕರಿಗೆ 22 ಲಕ್ಷ ವರ್ಗಾವಣೆ...
21-12-25 08:55 pm