ಬ್ರೇಕಿಂಗ್ ನ್ಯೂಸ್
22-04-24 02:15 pm Bangalore Correspondent ಕರ್ನಾಟಕ
ಬೆಂಗಳೂರು, ಏ.22: ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಪಾಸಣೆ ವೇಳೆ ಕಾರಿನಲ್ಲಿ 2 ಕೋಟಿ ರೂ. ಹಣ ಪತ್ತೆ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ಆದಾಯ ತೆರಿಗೆ ಇಲಾಖೆಗೆ ವರ್ಗಾವಣೆಯಾಗಿದ್ದು, ಹಣ ಜಪ್ತಿ ಮಾಡಿಕೊಂಡ ಇಲಾಖೆ ತನಿಖೆ ಚುರುಕುಗೊಳಿಸಿದೆ.
ಕಳೆದ ಶನಿವಾರ ಮಧ್ಯಾಹ್ನ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಪಾಸಣೆ ನಡೆಸುವಾಗ ಕಾರಿನಲ್ಲಿ 2 ಕೋಟಿ ಹಣ ಪತ್ತೆ ಹಿನ್ನೆಲೆ ಚುನಾವಣಾಧಿಕಾರಿ ರವಿ ಅಸೂತಿ ಎಂಬುವರು ನೀಡಿದ ದೂರಿನ ಮೇರೆಗೆ ರಾಜ್ಯ ಬಿಜೆಪಿ ಕಾರ್ಯಾಲಯದ ಕಾರ್ಯದರ್ಶಿ ಲೊಕೇಶ್ ಅಂಬೆಕಲ್, ಹಣ ಸಾಗಿಸುತ್ತಿದ್ದ ವೆಂಕಟೇಶ್ ಪ್ರಸಾದ್ ಹಾಗೂ ಗಂಗಾಧರ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಐಟಿ ಅಧಿಕಾರಿಗಳು ಮಾಹಿತಿ ಮೇರೆಗೆ ಹಣ ಜಪ್ತಿ ಮಾಡಿಕೊಂಡಿದ್ದು, ಇಬ್ಬರು ಆರೋಪಿತರನ್ನು ಹೆಚ್ಚಿನ ವಿಚಾರಣೆ ನಡೆಸಲು ನೊಟೀಸ್ ಜಾರಿ ಮಾಡಿದ್ದಾರೆ.
ಕೋದಂಡರಾಮಪುರ ಕೆನೆರಾ ಬ್ಯಾಂಕಿನಲ್ಲಿ ಕಳೆದ ಮಾರ್ಚ್ 27ರಂದು 5 ಕೋಟಿ ರೂಪಾಯಿ ಹಣ ವಿತ್ ಡ್ರಾ ಮಾಡಲಾಗಿದ್ದು, ಈ ಪೈಕಿ 2 ಕೋಟಿ ಹಣವನ್ನು ಮೈಸೂರು - ಕೊಡಗು, ಚಾಮರಾಜನಗರ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಗಳ ಬೂತ್ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕ್ರಮಗಳಿಗೆ ಹಣ ಹಂಚಲು ಹೋಗುತ್ತಿರುವುದಾಗಿ ಆರೋಪಿತರು ಪ್ರಾಥಮಿಕ ತನಿಖೆಯಲ್ಲಿ ಒಪ್ಪಿಕೊಂಡಿದ್ದರು. ಈ ವೇಳೆ, ಪತ್ತೆಯಾದ ಪತ್ರದಲ್ಲಿ ಮೇಲಿನ ಲೋಕಸಭಾ ಕ್ಷೇತ್ರಗಳ ಬೂತ್ ಮಟ್ಟದ ಕಾರ್ಯಕರ್ತರಿಗೆ ಹಣ ಹಂಚಲು ವೆಂಕಟೇಶ್ ಮೂಲಕ ಹಣ ಸಾಗಿಸುತ್ತಿರುವ ಬಗ್ಗೆ ಉಲ್ಲೇಖವಾಗಿತ್ತು ಎಂದು ಚುನಾವಣಾಧಿಕಾರಿಗಳು ದೂರಿನಲ್ಲಿ ವಿವರಿಸಿದ್ದಾರೆ.
ಈ ಸಂಬಂಧ ಪೊಲೀಸರ ಸಮಕ್ಷಮದಲ್ಲಿ ಹಣ ಎಣಿಕೆ ಮಾಡಿ ವಶಕ್ಕೆ ಪಡೆದುಕೊಂಡು ತನಿಖೆಯನ್ನ ಐಟಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ.
worker and two others. A day after Rs 2 crore was recovered from a vehicle by the SST team, election officials on Sunday filed a case against a BJP worker after seeking permission from the court and Election Commission of India. The SST team of Chamarajpet, Benagluru, on April 20, had intercepted a car carrying Rs 2 crore cash at 4.05 pm. The vehicle was seized and the income tax officials were alerted.
22-12-25 11:09 pm
HK News Desk
ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯ ಹುಟ್ಟುಹಬ್ಬದಲ್ಲಿ...
22-12-25 10:30 pm
ಅಧಿಕಾರ ಹಂಚಿಕೆ ಹೈಕಮಾಂಡ್ ತೀರ್ಮಾನವೇ ಅಂತಿಮ, ನಮ್ಮದ...
22-12-25 06:29 pm
ಸ್ಥಳೀಯ ಮಟ್ಟದಲ್ಲೇ ಗೊಂದಲ ಬಗೆಹರಿಸಿಕೊಳ್ಳಿ, ಎಲ್ಲದಕ...
21-12-25 05:33 pm
ಸಿಎಂ ಸ್ಥಾನ ಉಳಿಸಿಕೊಳ್ಳಲು ಅಹಿಂದ ಶಾಸಕರು, ಸಚಿವರ ರ...
20-12-25 03:05 pm
22-12-25 06:32 pm
HK News Desk
ಶಬರಿಮಲೆ ಚಿನ್ನ ಕಳವು ; ಬೆಂಗಳೂರಿನ ಜುವೆಲ್ಲರಿ ಮಾಲೀ...
20-12-25 01:51 pm
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
22-12-25 06:36 pm
Mangalore Correspondent
ಕೋಳಿ ಅಂಕದಲ್ಲಿ ಪೆಟ್ಟು ಕೊಡಲು ಇವರ ಅಪ್ಪನ ಜಾಗವಾ?...
22-12-25 12:26 pm
ಕೇಪು ಜಾತ್ರೆ ಕೋಳಿ ಅಂಕಕ್ಕೆ ಎರಡನೇ ದಿನವೂ ಪೊಲೀಸ್ ದ...
21-12-25 11:04 pm
ಕೇಪು ಜಾತ್ರೆ ಕೋಳಿ ಅಂಕ ಮಾಡಿಸಿದ ಶಾಸಕರ ವಿರುದ್ಧ ಕೇ...
20-12-25 10:53 pm
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
22-12-25 04:00 pm
Mangalore Correspondent
ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ; 19 ವರ್ಷದ ಗರ್ಭಿ...
22-12-25 02:18 pm
Udupi Arrest, Pakistan: ಕೊಚ್ಚಿನ್ ಶಿಪ್ ಯಾರ್ಡ್...
22-12-25 01:06 pm
ಟ್ರಾಫಿಕ್ ದಂಡದ ಹೆಸರಲ್ಲಿ ಎಪಿಕೆ ಫೈಲ್ ಲಿಂಕ್ ; ಮೋಸ...
21-12-25 09:36 pm
Cyber Fraud: ಸೈಬರ್ ವಂಚಕರಿಗೆ 22 ಲಕ್ಷ ವರ್ಗಾವಣೆ...
21-12-25 08:55 pm