ಬ್ರೇಕಿಂಗ್ ನ್ಯೂಸ್
23-04-24 02:29 pm Bangalore Correspondent ಕರ್ನಾಟಕ
ಬೆಂಗಳೂರು, ಎ.23: ಈ ಬಾರಿ ಚುನಾವಣೆಯಲ್ಲಿ ಮತದಾರರು ಜಾಗ್ರತೆಯಿಂದ ಮತ ಹಾಕದೇ ಇದ್ದರೆ ಮತ್ತೊಮ್ಮೆ ನಾವು ಪಾರದರ್ಶಕ ಚುನಾವಣೆ ಎದುರಿಸುತ್ತೇವೆ ಎನ್ನುವ ನಂಬಿಕೆ ಇಲ್ಲ. ಆರ್ಥಿಕ ಅಸಮಾನತೆ ಇದೇ ರೀತಿ ಮುಂದುವರಿದರೆ ಮಣಿಪುರದಲ್ಲಾದ ಹಿಂಸಾಚಾರ ದೇಶದ ಇತರ ಭಾಗಗಳಿಗೂ ಹಬ್ಬುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕ ಪರಕಾಲ ಪ್ರಭಾಕರ್ ಹೇಳಿದ್ದಾರೆ.
ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಅವರು, ಆರ್ಥಿಕ ಅಸಮಾನತೆ ಹೆಚ್ಚುತ್ತಿದ್ದು, ಇದರ ಪರಿಣಾಮ ಎಲ್ಲ ಕ್ಷೇತ್ರ, ಜನರ ಮೇಲೂ ಆಗಲಿದೆ. ನಿಮ್ಮ ಮನೆ ಬಾಗಿಲಿಗೆ ಬಿಸಿ ತಟ್ಟಲ್ಲ ಎಂದುಕೊಳ್ಳಬೇಡಿ. ಹಾಲಿ ಆಡಳಿತಕ್ಕೆ ಶಿಕ್ಷೆಯಾಗಬೇಕು. ದೊಡ್ಡ ಮಟ್ಟದ ಆರ್ಥಿಕ ಅಸಮಾನತೆ ಸೃಷ್ಟಿಸಿರುವುದಕ್ಕೆ ಉತ್ತರದಾಯಿ ಮಾಡಬೇಕಿದೆ. ರಾಜ್ಯ- ಕೇಂದ್ರ ಒಕ್ಕೂಟ ವ್ಯವಸ್ಥೆ ಮತ್ತು ದೇಶದಲ್ಲಿ ಜಾತ್ಯತೀತ ತತ್ವಗಳಿಗೆ ಧಕ್ಕೆ ತಂದಿರುವುದಕ್ಕೆ ಶಿಕ್ಷೆ ನೀಡಬೇಕಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಇದಕ್ಕೆ ತಕ್ಕ ಶಿಕ್ಷೆ ನೀಡದೇ ಇದ್ದರೆ, ಇಂತಹ ಅಸಮಾನತೆ ಮತ್ತಷ್ಟು ಮುಂದುವರಿಯುವ ಸಾಧ್ಯತೆಯಿದೆ ಎಂದಿದ್ದಾರೆ.
ಸರಕಾರ ನೀಡುತ್ತಿರುವ ದತ್ತಾಂಶಗಳ ಬಗ್ಗೆ ನಂಬಿಕೆ ಇಲ್ಲ. ಅದನ್ನು ತಪ್ಪಾಗಿ ತೋರಿಸುತ್ತಿರಲೂಬಹುದು. ದೇಶದ ಇಕಾನಮಿ ಬಗ್ಗೆ ಅರ್ಥ ಮಾಡಲು ಐದು ತಿಂಗಳ ಹಿಂದೆ ಬೇಳೆ ಇನ್ನಿತರ ವಸ್ತುಗಳ ಬೆಲೆ ಎಷ್ಟಿತ್ತು, ಈಗ ಎಷ್ಟಿದೆ ಎನ್ನುವುದನ್ನು ಅರ್ಥ ಮಾಡಿಕೊಂಡರೆ ಸಾಕು. ದೇಶದಲ್ಲಿ ಸಾಮಾನ್ಯ ಮಧ್ಯಮ ವರ್ಗದ ಜನರ ಉಳಿಕೆಯ ಮೊತ್ತ ದಾಖಲೆಯ 5 ಶೇಕಡಾಕ್ಕೆ ಕುಸಿದಿದೆ. ಇದೇ ವೇಳೆ, ಸಾಮಾನ್ಯ ಜನರ ಸಾಲದ ಪ್ರಮಾಣ 40 ಶೇಕಡಕ್ಕೆ ಏರಿದೆ ಎಂದು ಪರಕಾಲ ಹೇಳಿದ್ದಾರೆ.
ನಮ್ಮ ದೇಶ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶ, ಜಗತ್ತಿನ ಐದನೇ ದೊಡ್ಡ ಆರ್ಥಿಕತೆ ಎಂದು ಬಿಂಬಿಸಲಾಗುತ್ತಿದೆ. ನಾವು ಅಭಿವೃದ್ಧಿ ಹೊಂದಿರುವ ಇಂಗ್ಲೆಂಡ್ ಆರ್ಥಿಕತೆಯನ್ನು ಹಿಮ್ಮೆಟ್ಟಿಸಿದ್ದರೆ ನಾವು ಯಾಕೆ ಅಭಿವೃದ್ಧಿ ಹೊಂದಿದ ರಾಷ್ಟ್ರ ಎಂದು ಹೇಳಿಕೊಳ್ಳಬಾರದು. ಅಭಿವೃದ್ಧಿಗೆ ಯಾಕೆ 2047ರ ಗಡಿಯನ್ನು ಹಾಕಿರುವುದು ಎಂದು ಪರಕಾಲ ಪ್ರಭಾಕರ್ ಪ್ರಶ್ನೆ ಮಾಡಿದ್ದಾರೆ.
NOTED political economist and author, Dr. Parakala Prabhakar, has warned that if Prime Minister Narendra Modi is re-elected in the ensuing Lok Sabha election, the country’s map could change drastically, leading to nationwide turmoil. Glimpses of what would be in store for the country are being seen in Ladakh and Manipur now which are reeling under extreme confusion, uncertainty, and a lack of order.
03-09-25 02:30 pm
Bangalore Correspondent
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
Sowjanya Case, Dharmasthala: ಸೌಜನ್ಯಾ ಪ್ರಕರಣ ;...
02-09-25 08:37 pm
ಮಕ್ಕಳ ಕಳ್ಳರು ಹೀಗೂ ಮಾಡುತ್ತಾರೆ..! ಶಾಲಾ ವಾಹನ ಎಂದ...
02-09-25 08:00 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
03-09-25 11:53 am
HK News Desk
ಧರ್ಮಸ್ಥಳ ಪ್ರಕರಣ ಮತ್ತೆ ತಿರುವು ; ಹತ್ಯೆಗೀಡಾದವರ ಸ...
02-09-25 10:26 pm
Mangalore Mukka Accident: ಮುಕ್ಕ ಜಂಕ್ಷನ್ನಲ್ಲಿ...
02-09-25 04:44 pm
Bribe Puttur, Tahsildar Absconding, Lokayukta...
02-09-25 02:17 pm
ಮಗನಿಗೆ ಇಲ್ಲ ಉದ್ಯೋಗ ; ಮುಂಬೈನಿಂದ ಉಡುಪಿಗೆ ಬಂದು ಆ...
02-09-25 01:05 pm
02-09-25 07:09 pm
Mangalore Correspondent
Valachil, Rape, College, Mangalore Crime: ಇನ್...
02-09-25 04:31 pm
Mangalore Auto Driver, Fake story, Falnir att...
02-09-25 11:22 am
Udupi, Brahmavar Suicide: 16 ವರ್ಷ ಹಿಂದಿನ ಕೊಲೆ...
01-09-25 09:21 pm
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm