ಬ್ರೇಕಿಂಗ್ ನ್ಯೂಸ್
01-05-24 12:36 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 1: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರ ಜೊತೆ ರಾಸಲೀಲೆ ನಡೆಸಿದ ವಿಡಿಯೋಗಳ ಹಿಂದೆ ತಮ್ಮ ಕೈವಾಡ ಇದೆ ಎಂಬ ಕುಮಾರಸ್ವಾಮಿ ಅವರ ಆರೋಪವನ್ನ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಕುಮಾರಸ್ವಾಮಿ ಮಾಡಿರುವ ಆರೋಪಗಳ ಸಂಬಂಧ ಇಂದು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿಸಿಎಂ, ಮಹಿಳೆಯರ ಬಗ್ಗೆ ಅಪಾರ ಗೌರವ ಇದೆ ಇಂಥ ಚಿಲ್ಲರೆ ಕೆಲಸಗಳನ್ನು ಯಾವತ್ತೂ ಮಾಡಲ್ಲ. ಪೆನ್ ಡ್ರೈವ್ ಇದೆ ಎಂದು ಹೆದರಿಸಲ್ಲ. ನಾವು ಚುನಾವಣೆಯನ್ನ ಎದುರಿಸುತ್ತೇವೆ. ನೇರವಾಗಿ ಅಸಂಬ್ಲಿಯಲ್ಲಿ ಚರ್ಚೆ ಮಾಡುತ್ತೇವೆ. ಇವರ ಚಟಕ್ಕೆ ವಿಡಿಯೋ ಮಾಡಿಕೊಳ್ಳುತ್ತಾರೆ ಎಂದು ತಿರುಗೇಟು ನೀಡಿದರು.
ಕುಮಾರಸ್ವಾಮಿ ಅವರಿಗೆ ನನ್ನನ್ನು ನೆನೆಸಿಕೊಳ್ಳದೆ ಇರಲು ಸಾಧ್ಯವಿಲ್ಲ. ಈಗ ಮಾತ್ರವಲ್ಲ, ಬಹಳ ವರ್ಷಗಳಿಂದ ಅವರು ಹಾಗೂ ಅವರ ಕುಟುಂಬದವರಿಗೆ ನನ್ನನ್ನು ನೆನೆಸಿಕೊಳ್ಳಲಿದ್ದರೆ ಊಟ ಸೇರಲ್ಲ, ನಿದ್ದೆ ಬರಲ್ಲ, ಸ್ಫೂರ್ತಿಯೂ ಇರಲ್ಲ. ಹಾಸನದ ಪ್ರಚಾರದ ವೇಳೆ ಕುಮಾರಸ್ವಾಮಿ ಅವರು ನನಗೆ ನಿಖಿಲ್ ಬೇರೆ ಅಲ್ಲ, ಪ್ರಜ್ವಲ್ ಬೇರೆ ಅಲ್ಲ ಎಂದು ಬೆನ್ನುತಟ್ಟಿ ಹೇಳಿದ್ದನ್ನು ನೋಡಿದ್ದೇವೆ. ಅದರಲ್ಲಿ ತಪ್ಪೇನಿಲ್ಲ. ಅವರ ಕುಟುಂಬ ಹಾಗೂ ಅವರ ಕುಡಿ. ಈಗ ನನಗೂ ಪ್ರಜ್ವಲ್ ಕುಟುಂಬಕ್ಕೂ ಸಂಬಂಧ ಇಲ್ಲ ಎಂದು ಮಾತು ಬದಲಿಸಿದ್ದಾರೆ. ನೂಲಿನಂತೆ ಸೀರೆ ಎಂದು ಹೇಳುತ್ತಿದ್ದುದ್ದನ್ನು ಮಾಧ್ಯಮಗಳಲ್ಲಿ ನೋಡಿದೆ. ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಸ್ವತಃ ಕುಮಾರಸ್ವಾಮಿ ಅವರೇ, “ ಹಾಸನದಲ್ಲಿ ಪ್ಲಾಬ್ಲಮ್ ಇದೆ ಎಂದು ಬಿಜೆಪಿ ನಾಯಕರು ಹೇಳಿದ್ದರೂ ಬ್ರದರ್, ಆದರೆ ದೊಡ್ಡವರು ಎಲ್ಲವನ್ನು ನೋಡಿಕೊಳ್ಳುತ್ತೇನೆ ಅಂದರು ಬ್ರದರ್ ” ಎಂದು ತಿಳಿಸಿದ್ದರು.
ಪೆನ್ ಡ್ರೈವ್ ವಿಚಾರ ಡಿಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಅವರಿಗೆ ಗೊತ್ತಿತ್ತು ಎಂಬ ದೇವರಾಜೇಗೌಡ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಮಗೆ ಈ ವಿಚಾರ ಗೊತ್ತಿದ್ದರೆ ನಾವು ಮುಂಚಿತವಾಗಿ ರಿಲೀಸ್ ಮಾಡಬಹುದಾಗಿತ್ತು. ಇಂದು ಬೆಳಗ್ಗೆ ಅವರ ಚಾಲಕರೇ ಈ ಪೆನ್ ಡ್ರೈವ್ ವಿಚಾರ ಬಹಿರಂಗಗೊಳಿಸಿರುವುದಾಗಿ ಹೇಳಿದ್ದಾರೆ. ನಾನಂತೂ ಇಂತಹ ಚಿಲ್ಲರೆ ಕೆಲಸಕ್ಕೆ ಕೈ ಹಾಕುವುದಿಲ್ಲ " ಎಂದರು.
ಇಲ್ಲಿ ಮಹಿಳೆಯರ ಗೌರವದ ವಿಚಾರ ಪ್ರಮುಖ. ನನಗೆ ಬಂದ ಮಾಹಿತಿ ಪ್ರಕಾರ 200-300 ಮಹಿಳೆಯರು ಹಾಗೂ ಅವರ ಕುಟುಂಬದ ವಿಚಾರ. ಇದರಲ್ಲಿ ಅವರ ಪಕ್ಷದ ಕಾರ್ಯಕರ್ತರು, ಕೆಲಸಗಾರರ ಹೆಸರೂ ಕೇಳಿಬರುತ್ತಿದೆ. ಪಕ್ಷದ ಅಧ್ಯಕ್ಷನಾಗಿ ನನಗೆ ಮಾಹಿತಿ ತಿಳಿಸುತ್ತಾರೆ. ಈ ವಿಚಾರವಾಗಿ ಮೊದಲಿನಿಂದಲೇ ಗುಸುಗುಸು ನಡೆದೆದೆ ಎಂದರು
ಕುಮಾರಸ್ವಾಮಿ ಪ್ರಜ್ವಲ್ ರೇವಣ್ಣ ನಮ್ಮ ಕುಟುಂಬವಲ್ಲ ಎಂದಿದ್ದಾರೆ. ಪ್ರಜ್ವಲ್ ಅವರ ಕುಟುಂಬದವರಲ್ಲವೇ ಎಂದು ಮಾಧ್ಯಮಗಳೇ ಚರ್ಚೆ ಮಾಡಬೇಕು. ರೇವಣ್ಣ ದೇವೇಗೌಡರ ಮಗನೋ ಅಲ್ಲವೋ? ತಪ್ಪು ಮಾಡಿದ್ದರೆ ತಪ್ಪು ಎಂದು ಹೇಳಲಿ, ತಪ್ಪು ಮಾಡಿಲ್ಲವೆಂದರೆ ತಪ್ಪಲ್ಲ ಎಂದು ಹೇಳಲಿ. ಆದರೆ ನಮ್ಮ ಕುಟುಂಬವೇ ಅಲ್ಲ ಎಂದರೆ ಹೇಗೆ? ಹೆಚ್.ಡಿ ಕುಮಾರಸ್ವಾಮಿ ಹಾಗೂ ಹೆಚ್.ಡಿ ರೇವಣ್ಣ ಅವರ ಹೆಸರಿನಲ್ಲಿರುವ ಹೆಚ್.ಡಿ ಅಂದರೆ ಏನು? ಹೊಳೆನರಸಿಪುರದ ದೇವೇಗೌಡರ ಮಗ ಅಂತಲ್ಲವೇ? ಪ್ರಜ್ವಲ್ ರೇವಣ್ಣ ಅಂದರೆ ಏನು? ರೇವಣ್ಣನ ಮಗ ಎಂದಲ್ಲವೇ? ಪ್ರಶ್ನೆ ಮಾಡಿದರು ಎಂದರು.
DK Shivakumar slams HD Kumaraswamy, says I don't threaten anyone with CD or Pen drive. They make videos for their pleasure and then blame someone else he slammed in prajwal Revanna sex video case.
14-07-25 10:44 pm
Bangalore Correspondent
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm