ಬ್ರೇಕಿಂಗ್ ನ್ಯೂಸ್
25-06-24 01:08 pm Bangalore Correspondent ಕರ್ನಾಟಕ
ಬೆಂಗಳೂರು, ಜೂನ್ 25: ನಂದಿನಿ ಹಾಲಿನ ದರ ಹೆಚ್ಚಿಸಿ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಮಹತ್ವದ ನಿರ್ಧಾರ ಪ್ರಕಟಿಸಿದೆ. ಬೆಂಗಳೂರಿನ ಕೆಎಂಎಫ್ ಮುಖ್ಯ ಕಚೇರಿಯಲ್ಲಿ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಸುದ್ದಿಗೋಷ್ಠಿ ನಡೆಸಿ ದರ ಹೆಚ್ಚಳದ ಬಗ್ಗೆ ಮಾಹಿತಿ ನೀಡಿದರು.
ಒಂದು ಲೀಟರ್ ನಂದಿನಿ ಹಾಲಿನ ಪ್ಯಾಕೆಟ್ಗೆ 50 ಎಂಎಲ್ ಹಾಲು ಹೆಚ್ಚುವರಿಯಾಗಿ ಸೇರಿಸಲಾಗುವುದು. ಸದ್ಯ ಲೀಟರ್ ಹಾಲಿಗೆ ಇರುವ 42 ರೂ. ಇರುವ ದರವನ್ನು 2 ರೂಪಾಯಿ ಹೆಚ್ಚಳ ಮಾಡಲಾಗುವುದು. ಜೂನ್ 26ರಿಂದಲೇ ಈ ದರ ರಾಜ್ಯದಲ್ಲಿ ಜಾರಿಗೆ ಬರಲಿದೆ ಎಂದು ಭೀಮಾನಾಯ್ಕ್ ತಿಳಿಸಿದ್ದಾರೆ.
ಅರ್ಧ ಲೀಟರ್ ಹಾಲಿನ ಪ್ಯಾಕೆಟ್ ದರ 22ರಿಂದ 24 ರೂ.ಗೆ ಏರಿಕೆಯಾಗಲಿದೆ. ಇದೇ ಟೋನ್ಡ್ ಲೀಟರ್ ಹಾಲಿನ ಬೆಲೆ 44 ರೂ. ಆಗಲಿದೆ. ಎಲ್ಲ ಪ್ಯಾಕೆಟ್ ಗಳಲ್ಲೂ 50 ಎಂಎಲ್ ಹೆಚ್ಚುವರಿ ಹಾಲು ಸಿಗಲಿದೆ. ಮೊಸರು, ಇನ್ನಿತರ ಯಾವುದೇ ಹಾಲಿನ ಉತ್ಪನ್ನದ ದರ ಏರಿಕೆ ಮಾಡಲ್ಲ ಎಂದು ತಿಳಿಸಿದ ಭೀಮಾ ನಾಯ್ಕ್, ಕೇರಳದಲ್ಲಿ ಒಂದು ಲೀಟರ್ ಹಾಲಿನ ಬೆಲೆ 52 ರುಪಾಯಿ ಇದೆ. ಗುಜರಾತ್ನಲ್ಲಿ ಅಮುಲ್ ಒಂದು ಲೀಟರ್ಗೆ 56 ರೂ., ಮಹಾರಾಷ್ಟ್ರದಲ್ಲಿ 56 ರೂ., ದೆಹಲಿ ಮದರ್ ಡೈರಿಯ ಹಾಲಿನ ಬೆಲೆ 54 ರೂ. ಇದೆ ಎಂದು ಎಂದು ದರ ಏರಿಕೆಯನ್ನು ಸಮರ್ಥಿಸಿದರು. ಇತ್ತೀಚಿಗಷ್ಟೆ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿದ್ದ ರಾಜ್ಯ ಸರ್ಕಾರ ಇದೀಗ, ಹಾಲಿನ ದರ ಏರಿಸಿದ್ದು, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಯಾವುದಕ್ಕೆ ಎಷ್ಟು ಏರಿಕೆ ನೋಡಿ..
ಟೋನ್ಡ್ ಹಾಲು
550 ಎಂಎಲ್ – 24 ರೂ.
1050 ಎಂಎಲ್ – 44 ರೂ.
ಹೋಮೋಜಿನೈಸ್ಡ್ ಟೋನ್ಡ್ ಹಾಲು
550 ಎಂಎಲ್ – 24 ರೂ.
1050 ಎಂಎಲ್ – 45 ರೂ.
ಹೋಮೋಜಿನೈಸ್ಡ್ ಹಸುವಿನ ಹಾಲು
550 ಎಂಎಲ್ – 26 ರೂ.
1050 ಎಂಎಲ್ – 48 ರೂ.
ಸ್ಪೆಷಲ್ ಹಾಲು
550 ಎಂಎಲ್ – 27 ರೂ.
1050 ಎಂಎಲ್ – 50 ರೂ.
ಶುಭಂ ಹಾಲು
550 ಎಂಎಲ್ – 27 ರೂ.
1050 ಎಂಎಲ್ – 50 ರೂ.
ಸಮೃದ್ಧಿ ಹಾಲು
550 ಎಂಎಲ್ – 28 ರೂ.
1050 ಎಂಎಲ್ – 53 ರೂ.
ಹೋಮೋಜಿನೈಸ್ಡ್ ಶುಭಂ ಹಾಲು
550 ಎಂಎಲ್ – 27 ರೂ.
1050 ಎಂಎಲ್ – 51 ರೂ.
ಸತೃಪ್ತಿ ಹಾಲು
550 ಎಂಎಲ್ – 30 ರೂ.
1050 ಎಂಎಲ್ – 57 ರೂ.
ಶುಭಂ ಗೋಲ್ಡ್ ಹಾಲು
550 ಎಂಎಲ್ – 28 ರೂ.
1050 ಎಂಎಲ್ – 51 ರೂ.
ಡಬಲ್ ಟೋನ್ಡ್ ಹಾಲು
550 ಎಂಎಲ್ – 23 ರೂ.
1050 ಎಂಎಲ್ – 43 ರೂ.
Close on the heels of the Karnataka government increasing the prices of petrol and diesel, the Karnataka Milk Federation (KMF) has decided to hike the price of milk by ₹2 a litre. The announcement came from KMF Chairman Bhima Naik at a press conference convened in Bengaluru on Tuesday, June 25.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
25-02-25 02:34 pm
Mangalore Correspondent
Puttur doctor, C Section, Mangalore: ಸಿಸೇರಿಯನ...
25-02-25 12:24 pm
Puttur News, Dr Anil Baipadithaya, hospital:...
24-02-25 02:50 pm
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
25-02-25 01:37 pm
HK News Desk
Delhi crime, Wife Murder: ತ್ರಿವೇಣಿ ಸಂಗಮದಲ್ಲಿ...
24-02-25 10:51 pm
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm
Bangalore crime, Police constable, Rape, Bomm...
24-02-25 07:08 pm
Sirsi Murder, KSRTC Bus, crime: ಶಿರಸಿ ; ಹತ್ತು...
23-02-25 03:42 pm