ಬ್ರೇಕಿಂಗ್ ನ್ಯೂಸ್
11-07-24 06:12 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 11: ರಾಜ್ಯದಲ್ಲಿ ಜಾರಿಗೆ ಬಂದ ಮಹಿಳಾ ಪ್ರಯಾಣಿಕರ ಉಚಿಚತ ಪ್ರಯಾಣದ ಶಕ್ತಿ ಯೋಜನೆಯಿಂದಾಗಿ ಸಾರಿಗೆ ನಿಗಮಗಳಿಗೆ ಭಾರೀ ನಷ್ಟವಾಗಿದೆ. ರಾಜ್ಯ ಸರಕಾರದ ಆಡಳಿತಾರೂಢರು ಶಕ್ತಿ ಯೋಜನೆಯಿಂದಾಗಿ ಲಾಭ ಆಗಿದೆಯೆಂದು ಹೇಳುತ್ತಿದ್ದರೂ, ನಿಗಮಕ್ಕೆ ಭಾರೀ ನಷ್ಟ ಆಗಿರುವುದು ದಾಖಲೆ ಸಹಿತ ಬಹಿರಂಗ ಆಗಿದೆ. ಯೋಜನೆ ಜಾರಿಯಾದ 13 ತಿಂಗಳಲ್ಲಿ ಬರೋಬ್ಬರಿ ಆರು ಸಾವಿರ ಕೋಟಿಯಷ್ಟು ವ್ಯಯ ಆಗಿದ್ದು, ಇದನ್ನು ತುಂಬುವಂತೆ ಸಾರಿಗೆ ನಿಗಮದ ಅಧಿಕಾರಿಗಳು ಸರಕಾರಕ್ಕೆ ಪತ್ರ ಬರೆದಿದ್ದಾರೆ.
13 ತಿಂಗಳಲ್ಲಿ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿ ಎಲ್ಲ ನಿಗಮಗಳಿಗೆ ಜುಲೈ 9ರ ವರೆಗಿನ ಲೆಕ್ಕಾಚಾರ ಪ್ರಕಾರ, 5960 ಕೋಟಿ ರೂಪಾಯಿ ಶಕ್ತಿ ಯೋಜನೆಗೆ ವ್ಯಯ ಆಗಿದೆ. ಶಕ್ತಿ ಯೋಜನೆಯಡಿ ಸುಮಾರು 245,34 ಕೋಟಿ ಸಲ ಮಹಿಳಾ ಪ್ರಯಾಣಿಕರು ಉಚಿತ ಸಂಚಾರ ಮಾಡಿದ್ದಾರೆ. ಶಕ್ತಿ ಯೋಜನೆ ಜಾರಿಯಾಗಿ ವರ್ಷ ಕಳೆದರೂ ಅದಕ್ಕೆ ಪ್ರತಿಯಾಗಿ ಸರಕಾರದಿಂದ ಹಣ ಪಾವತಿ ಆಗಿಲ್ಲ. ಹೀಗಾಗಿ ಶಕ್ತಿ ಯೋಜನೆಯಡಿ ಸರಕಾರಕ್ಕೆ 6 ಸಾವಿರ ಕೋಟಿ ರೂಪಾಯಿ ನಷ್ಟವೇ ಆಗಿದೆ.
ಶಕ್ತಿ ಯೋಜನೆಯಿಂದಾಗಿ ಕೆಎಸ್ಸಾರ್ಟಿಸಿಯಲ್ಲಿ ರೂ.2254 ಕೋಟಿ, ಬಿಎಂಟಿಸಿಗೆ ₹1019 ಕೋಟಿ, ವಾಯುವ್ಯ ಸಾರಿಗೆ ರೂ.1468 ಕೋಟಿ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ 1217 ಕೋಟಿ ರೂ. ವ್ಯಯ ಮಾಡಿದ್ದು ಅವುಗಳ ಲೆಕ್ಕವನ್ನು ಸರಕಾರದ ಮುಂದಿಟ್ಟಿದೆ. ಒಟ್ಟು 5960 ಕೋಟಿ ರೂ. ನಷ್ಟವಾಗಿರುವ ಸಾರಿಗೆ ನಿಗಮಗಳು ಲೆಕ್ಕ ತೋರಿಸಿದ್ದರೂ, ಸರಕಾರದ ಕಡೆಯಿಂದ ಶಕ್ತಿ ಯೋಜನೆಗಾಗಿ ಅನುದಾನ ಪೂರೈಕೆಯಾಗಿಲ್ಲ. ಹೀಗಾಗಿ ಎಲ್ಲಾ ಸಾರಿಗೆ ನಿಗಮಗಳು ತೀವ್ರ ನಷ್ಟಕ್ಕೀಡಾಗಿದೆ ಎಂದು ಸಾರಿಗೆ ನಿಗಮಗಳ ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ.
ಯೋಜನೆ ಜಾರಿಯಾದ ಜೂನ್ 11, 2023ರಿಂದ ಜುಲೈ 9, 2024ರ ವರೆಗೆ ಉಚಿತ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ವಿವರ ಲಭ್ಯವಾಗಿದೆ. ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ 74,40,58,529 ಮಂದಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಇದರ ಮೌಲ್ಯ ರೂ. 2254,97,52,726 ಆಗಿದೆ. ಬೆಂಗಳೂರು ನಗರದ ಬಿಎಂಟಿಸಿ ಬಸ್ಸಿನಲ್ಲಿ 77,90,23,179 ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣಿಸಿದ್ದು ಇದರ ಮೌಲ್ಯ ರೂ. 1019,91,69,909 ಆಗಿರುತ್ತದೆ.
ವಾಯುವ್ಯ ಸಾರಿಗೆ ನಿಗಮದಲ್ಲಿ 56,76,93,808 ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣಿಸಿದ್ದು, ಇದರ ಮೌಲ್ಯ- ₹1468,20,83,469 ಆಗಿರುತ್ತದೆ. ಇದೇ ವೇಳೆ, ಕಲ್ಯಾಣ ಕರ್ನಾಟಕ ಭಾಗದ ನಿಗಮದ ಬಸ್ಸುಗಳಲ್ಲಿ 36,23,26,048 ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣಿಸಿದ್ದು ಇದರ ಮೌಲ್ಯ ರೂ. 1217,84,73,502 ಆಗಿರುತ್ತದೆ. 2023ರ ಜೂನ್ 11 ರಿಂದ ಇಲ್ಲಿವರೆಗೂ ಒಟ್ಟು 245,31,01,564 ಕೋಟಿ ಮಹಿಳಾ ಪ್ರಯಾಣಿಕರು ಸರಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ ಮಾಡಿದ್ದು, ಒಟ್ಟು ಪ್ರಯಾಣದ ಮೌಲ್ಯ ರೂ. 5960,94,79,606 ಆಗಿರುತ್ತದೆ ಎಂಬುದು ಸಾರಿಗೆ ನಿಗಮಗಳ ಮಾಹಿತಿ. ಈ ಮೊತ್ತವನ್ನು ಸರಕಾರ ತನ್ನ ಖಜಾನೆಯಿಂದ ತುಂಬುತ್ತದೆ ಎಂದು ಹೇಳಿದ್ದರೂ, ಗ್ಯಾರಂಟಿ ಯೋಜನೆಯಿಂದ ಭಾರವಾಗಿರುವ ರಾಜ್ಯ ಸರಕಾರ ಅದನ್ನು ಬಾಕಿ ಮೊತ್ತ ಎಂದು ನಮೂದಿಸುವ ಸಾಧ್ಯತೆಯೇ ಜಾಸ್ತಿಯಿದೆ.
Transport corporations have suffered huge losses due to the 'Uchichata Yatra' shakti scheme for women commuters implemented in the state. Though the ruling party of the state government has been claiming that it has benefited from the shakti scheme, it has been revealed that the corporation has suffered huge losses. In the 13 months since the project was implemented, officials of the transport corporation have written to the government to fill up the rs 6,000 crore spent.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
24-02-25 02:50 pm
Mangalore Correspondent
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
24-02-25 10:51 pm
HK News Desk
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm
Bangalore crime, Police constable, Rape, Bomm...
24-02-25 07:08 pm
Sirsi Murder, KSRTC Bus, crime: ಶಿರಸಿ ; ಹತ್ತು...
23-02-25 03:42 pm
Visa fraud, Bangalore crime, Arrest: ವಿದೇಶಿ ವ...
22-02-25 10:36 pm