ಬ್ರೇಕಿಂಗ್ ನ್ಯೂಸ್
16-07-24 08:42 pm HK News Desk ಕರ್ನಾಟಕ
ಕಾರವಾರ, ಜುಲೈ 16: ಅಂಕೋಲಾ ಬಳಿಯ ಶಿರೂರಿನಲ್ಲಿ ಹೆದ್ದಾರಿ ಬದಿಯ ಗುಡ್ಡ ಕುಸಿದು ಬಿದ್ದು ಮಣ್ಣಿನಡಿ ಹತ್ತಕ್ಕೂ ಹೆಚ್ಚು ಮಂದಿ ಸಿಲುಕಿದ್ದು ಎಲ್ಲರೂ ಸಾವನ್ನಪ್ಪಿದ ಶಂಕೆ ವ್ಯಕ್ತವಾಗಿದೆ. ಗುಡ್ಡ ಕುಸಿದ ಪರಿಣಾಮ ಪಕ್ಕದಲ್ಲಿದ್ದ ಒಂದು ಮನೆ, ಒಂದು ಕಾರು ಮತ್ತೊಂದು ಟ್ಯಾಂಕರ್ ದುರಂತಕ್ಕೀಡಾಗಿದೆ.
ಸಂಜೆ ವೇಳೆಗೆ ಒಂದೇ ಕುಟುಂಬದ ನಾಲ್ವರ ಶವ ಮಣ್ಣಿನಡಿಯಲ್ಲಿ ಪತ್ತೆಯಾಗಿದೆ. ಲಕ್ಷ್ಮಣ ನಾಯ್ಕ, ಅವರ ಪತ್ನಿ ಶಾಂತಿ ನಾಯ್ಕ, ರೋಶನ್ ನಾಯ್ಕ್ ಮತ್ತು ಟ್ಯಾಂಕರ್ ಚಾಲಕನ ಮೃತದೇಹ ಪತ್ತೆಯಾಗಿದೆ. ಮಂಗಳೂರು- ಪಣಜಿ ರಾಷ್ಟ್ರೀಯ ಹೆದ್ದಾರಿ- 66 ಇದಾಗಿದ್ದು ಇಲ್ಲಿ ಐಆರ್‌ಬಿ ಕಂಪೆನಿ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಸಿತ್ತು. ರಸ್ತೆ ಅಗಲೀಕರಣಕ್ಕಾಗಿ ಪಕ್ಕದ ಗುಡ್ಡವನ್ನು ಅಗೆದು ಹಾಗೇ ಬಿಡಲಾಗಿತ್ತು. ದೊಡ್ಡ ಗುಡ್ಡ ಅಗೆದಿದ್ದರಿಂದ ಭಾರೀ ಮಳೆಯಿಂದ ಸಡಿಲಗೊಂಡು ಕುಸಿದಿದೆ. ಇದರಿಂದ ಕೆಳ ಭಾಗದಲ್ಲಿದ್ದ ಮನೆಯ ಮೇಲೆ ಭಾರೀ ಪ್ರಮಾಣದ ಮಣ್ಣು ಬಿದ್ದಿದ್ದು ಅಲ್ಲಿದ್ದ ಐವರು ಸಿಲುಕಿದ್ದರು ಎನ್ನಲಾಗಿದೆ. ಇದೇ ವೇಳೆ ಹೆದ್ದಾರಿ ಬದಿಯಲ್ಲಿದ್ದ ಕ್ಯಾಂಟೀನಲ್ಲಿ ಟ್ಯಾಂಕರ್ ನಿಲ್ಲಿಸಿ ಚಾಲಕ ಮತ್ತು ಕ್ಲೀನರ್ ಚಹಾ ಕುಡಿಯುತ್ತಿದ್ದರು.
ಗುಡ್ಡ ಕುಸಿತದಿಂದ ಕ್ಯಾಂಟೀನ್ ಸಮೇತ ಕುಸಿದು ಹೋಗಿದ್ದು ಅಲ್ಲಿದ್ದ ಇಬ್ಬರು ಟ್ಯಾಂಕರ್ ಸಿಬಂದಿ ಮತ್ತು ಕ್ಯಾಂಟೀನಲ್ಲಿದ್ದ ಗಂಡ ಹೆಂಡತಿ ಮಣ್ಣಿನಡಿಗೆ ಬಿದ್ದಿದ್ದಾರೆ. ಮಣ್ಣಿನ ಕುಸಿತಕ್ಕೆ ಪಲ್ಟಿಯಾದ ಟ್ಯಾಂಕರ್ ಪಕ್ಕದಲ್ಲೇ ಹರಿಯುವ ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋಗಿದೆ. ಟೀ ಸ್ಟಾಲ್ ನಡೆಸುತ್ತಿದ್ದ ವ್ಯಕ್ತಿ, ಆತನ ಪತ್ನಿ, ಮಗ ಸಾವನ್ನಪ್ಪಿದ್ದಾರೆ. ಜೊತೆಗೆ ಚಹಾ ಕುಡಿಯಲು ಬಂದಿದ್ದ ಚಾಲಕನೂ ಸಾವನ್ನಪ್ಪಿದ್ದಾನೆ. ಉಳಿದವರು ಎಷ್ಟು ಮಂದಿ ಇದ್ದರೆಂದು ಪತ್ತೆಯಾಗಿಲ್ಲ. ಸ್ಥಳದಲ್ಲಿ ನೌಕಾಪಡೆ ಮತ್ತು ಇತರ ರಕ್ಷಣಾ ಪಡೆಗಳು ಕಾರ್ಯಾಚರಣೆಗೆ ಇಳಿದಿದ್ದು, ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. ಈ ನಡುವೆ ಐಆರ್‌ಬಿ ರಸ್ತೆ ನಿರ್ಮಾಣ ಸಂಸ್ಥೆಯ ಅವೈಜ್ಞಾನಿಕ ಕಾಮಗಾರಿಯೇ ಅನಾಹುತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಒಂದು ಕಡೆ ನದಿಯಾದರೆ, ಮತ್ತೊಂದು ಕಡೆ ಗುಡ್ಡ ಇದೆ. ಗುಡ್ಡವನ್ನು ಅಗೆದು ಹೆದ್ದಾರಿ ಮಾಡಲಾಗಿದ್ದು ಮಳೆಗೆ ಗುಡ್ಡ ಕುಸಿದು ಹೆದ್ದಾರಿ ಸಹಿತ ನದಿಯತ್ತ ಬಿದ್ದಿದೆ.
Ankola Landslide, death toll increases to 10, IRB company alleged of poor quality work. The collapse, attributed to continuous heavy rains and the unscientific and incomplete work of the company contracted for the construction of the quadruple highway, occurred near the Shiruru Bommaiah temple on the Ankola-Kumta route of National Highway 66.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
24-02-25 02:50 pm
Mangalore Correspondent
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
24-02-25 10:51 pm
HK News Desk
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm
Bangalore crime, Police constable, Rape, Bomm...
24-02-25 07:08 pm
Sirsi Murder, KSRTC Bus, crime: ಶಿರಸಿ ; ಹತ್ತು...
23-02-25 03:42 pm
Visa fraud, Bangalore crime, Arrest: ವಿದೇಶಿ ವ...
22-02-25 10:36 pm