ಬ್ರೇಕಿಂಗ್ ನ್ಯೂಸ್
18-07-24 06:35 pm HK News Desk ಕರ್ನಾಟಕ
ಕಾರವಾರ, ಜುಲೈ.18: ಅಂಕೋಲಾದ ಶಿರಾಲಿಯಲ್ಲಿ ಗುಡ್ಡ ಕುಸಿತ ದುರಂತವನ್ನೇ ಸೃಷ್ಟಿಸಿದೆ. ಘಟನೆ ನಡೆದು ಮೂರು ದಿನ ಕಳೆದರೂ, ಎಷ್ಟು ಮಂದಿ ನಾಪತ್ತೆಯಾಗಿದ್ದಾರೆ, ಎಷ್ಟು ಜನ ಸತ್ತಿದ್ದಾರೆ ಎಂಬ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿಲ್ಲ. ಘಟನೆಯಲ್ಲಿ ಒಟ್ಟು ಹತ್ತು ಜನ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಒಂದೇ ಕುಟುಂಬದ ಐದು ಮಂದಿ, ಪಕ್ಕದ ಇನ್ನೊಂದು ಮನೆಯ ನಿವಾಸಿ, ಮೂವರು ಲಾರಿ ಚಾಲಕರು ಮತ್ತು ಇನ್ನೊಬ್ಬ ವ್ಯಕ್ತಿ ದುರಂತದಲ್ಲಿ ಸಾವಿಗೀಡಾಗಿದ್ದಾರೆ ಎಂದು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಜುಲೈ 16ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಹೆದ್ದಾರಿ ಸಹಿತ ಬೃಹತ್ ಗುಡ್ಡ ಕುಸಿದು ನದಿಗೆ ಬಿದ್ದಿತ್ತು. ಈ ಸಂದರ್ಭದಲ್ಲಿ ಮೂರು ಲಾರಿಗಳನ್ನು ಅದರ ಸಿಬಂದಿ ಹೆದ್ದಾರಿ ಬದಿ ನಿಲ್ಲಿಸಿ, ಪಕ್ಕದ ಟೀ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದರು. ಟೀ ಅಂಗಡಿಯಲ್ಲಿದ್ದ ಇಬ್ಬರು ಮಕ್ಕಳು ಮತ್ತು ಹೆತ್ತವರು ಮಣ್ಣಿನಡಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಲಾರಿಯಲ್ಲಿದ್ದವರು ಗುಡ್ಡದ ಮಣ್ಣಿನೊಂದಿಗೆ ಗಂಗಾವಳಿ ನದಿಗೆ ಬಿದ್ದು ನೀರುಪಾಲಾಗಿದ್ದಾರೆ. ಬುಧವಾರ ಬೆಳಗ್ಗೆ ಗಂಗಾವಳಿ ನದಿಯಲ್ಲಿ ಇಬ್ಬರು ಚಾಲಕರ ಶವ ಪತ್ತೆಯಾಗಿದ್ದು, ಒಂದನ್ನು ತಮಿಳುನಾಡು ಮೂಲಕ ಮುರುಗನ್ (45) ಎಂದು ಗುರುತಿಸಲಾಗಿದೆ. ಇದೇ ವೇಳೆ, ಕುಮಟಾ ತಾಲೂಕಿನ ಗಂಗೆಕೊಳ್ಳದ ಸಮುದ್ರ ತೀರದಲ್ಲಿ ನಾಪತ್ತೆಯಾಗಿದ್ದ ಟೀ ಅಂಗಡಿಯ ಕುಟುಂಬದ ಆವಂತಿಕಾ ಎಂಬ ಬಾಲಕಿಯ ಶವ ಪತ್ತೆಯಾಗಿದೆ. ಸಂತೋಷ್ ನಾಯ್ಕ, ಪತ್ನಿ ಶಾಂತಿ ನಾಯ್ಕ ಮತ್ತು ಮಗ ರೋಶನ್ ಅವರ ಶವ ಅಂದೇ ಸಿಕ್ಕಿತ್ತು.
ಜಿಲ್ಲಾಧಿಕಾರಿ ಮಾಹಿತಿ ಪ್ರಕಾರ, ಆರು ಜನರ ಮೃತದೇಹ ಪತ್ತೆಯಾಗಿದೆ. ಇದೇ ವೇಳೆ, ಕೇರಳದ ಕುಟುಂಬವೊಂದು ದೂರು ನೀಡಿದ್ದು, ಅರ್ಜುನ ಎಂಬವರು ಚಲಾಯಿಸುತ್ತಿದ್ದ ಲಾರಿಯ ಜಿಪಿಎಸ್ ಇದೇ ಜಾಗವನ್ನು ತೋರಿಸುತ್ತಿದೆ ಎಂದಿದ್ದಾರೆ. ಹೀಗಾಗಿ ಅರ್ಜುನ ಇದೇ ದುರಂತದಲ್ಲಿ ಮಣ್ಣಿನಡಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಎರಡು ಗ್ಯಾಸ್ ಟ್ಯಾಂಕರ್, ಒಂದು ಲಾರಿ ಸ್ಥಳದಲ್ಲಿತ್ತು ಎನ್ನುವ ಮಾಹಿತಿ ಅಧಿಕಾರಿಗಳಿಗೆ ಸಿಕ್ಕಿದೆ. ಎರಡು ಟ್ಯಾಂಕರ್ ನದಿಯಲ್ಲಿ ಪತ್ತೆಯಾಗಿದ್ದು, ಒಂದು ಖಾಲಿ ಇದ್ದರೆ ಇನ್ನೊಂದರಲ್ಲಿ ಗ್ಯಾಸ್ ಇದ್ದು, ಅದನ್ನು ತೆರವು ಮಾಡುವ ಕಾರ್ಯ ಆಗುತ್ತಿದೆ. ಬೆಂಕಿ ಉದ್ಭವ ಆಗದಂತೆ ನೋಡಿಕೊಳ್ಳಲು ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ. ಆಸುಪಾಸಿನ ಪ್ರದೇಶದಲ್ಲಿ ಕ್ಯಾಂಡಲ್ ಆಗಲೀ, ಮೊಬೈಲ್ ಫೋನ್ ಚಾರ್ಜನ್ನೂ ಮಾಡದಂತೆ ನಿಷೇಧ ವಿಧಿಸಲಾಗಿದೆ. ಸ್ಥಳದಲ್ಲಿ ಕಾರ್ಯಾಚರಣೆ ಸಿಬಂದಿ ಬಿಟ್ಟರೆ ಬೇರೆ ಯಾರನ್ನೂ ಹೋಗಲು ಬಿಡುತ್ತಿಲ್ಲ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಎಷ್ಟು ಜನರು ನೀರುಪಾಲಾಗಿದ್ದಾರೆ, ಆ ಸಂದರ್ಭದಲ್ಲಿ ಎಷ್ಟು ಮಂದಿ ಇದ್ದರು ಎನ್ನುವುದು ಯಾರಿಗೂ ಮಾಹಿತಿ ಇಲ್ಲ. ಟ್ಯಾಂಕರ್, ಟ್ರಕ್ ಗಳಲ್ಲಿ ಸಾಮಾನ್ಯವಾಗಿ ಇಬ್ಬರು ಇರುತ್ತಾರೆ. ಒಬ್ಬ ಚಾಲಕ ಮತ್ತು ಇನ್ನೊಬ್ಬ ಕ್ಲೀನರ್ ಇರುತ್ತಾರೆ. ಈಗ ಇಬ್ಬರು ಚಾಲಕರ ಮೃತದೇಹ ಮಾತ್ರ ಸಿಕ್ಕಿದೆ. ಸ್ಥಳೀಯರು ಸೇರಿ ಹತ್ತು ಮಂದಿ ಇದ್ದಿರಬಹುದು ಎಂದು ಅಧಿಕಾರಿಗಳು ಲೆಕ್ಕ ಹಾಕುತ್ತಿದ್ದಾರೆ. ಒಂದು ಲಾರಿಯಲ್ಲಿ ಇಬ್ಬರಿದ್ದರೂ ಆರು ಮಂದಿ ಅವರೇ ಆಗುತ್ತಾರೆ. ಹೀಗಾಗಿ ಹತ್ತಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಸಾಧ್ಯತೆಯೇ ಹೆಚ್ಚಿದೆ. ಸದ್ಯಕ್ಕೆ ಈ ಹೆದ್ದಾರಿಯನ್ನು ಬಂದ್ ಮಾಡಿದ್ದು, ಗ್ಯಾಸ್ ಸೋರಿಕೆ ಹಿನ್ನೆಲೆಯಲ್ಲಿ ಮಾಧ್ಯಮದವರನ್ನು ಸೇರಿ ಯಾರನ್ನೂ ಹತ್ತಿರಕ್ಕೆ ಹೋಗಲು ಬಿಡುತ್ತಿಲ್ಲ. ನದಿಯಲ್ಲಿ ಬಿದ್ದವರ ಮೃತದೇಹಗಳು ಸಿಕ್ಕಿವೆ. ಬೃಹತ್ ಗುಡ್ಡದ ಮಣ್ಣು ಇಳಿಜಾರಿನಲ್ಲಿ ನದಿಯ ಒಂದು ಬದಿಗೆ ಕುಸಿದು ನಿಂತಿದೆ. ಆ ಮಣ್ಣಿನೊಳಗೆ ಎಷ್ಟು ಮಂದಿಯ ಶವ ಇದೆಯೋ ದೇವರಿಗೇ ಗೊತ್ತು.
Ankola landslide, total 10 death reported says DC, Two trucks found in river. Rescue personnel recovered two more bodies of people killed in the landslide at Shirur village in Ankola taluk on Thursday. With this, the rescuers have recovered the bodies of six persons, including four of a family.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 07:56 pm
Mangalore Correspondent
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm