Chalavadi Narayana Swamy: ಕೋಟರಿಂದ ತೆರವಾದ ವಿಪಕ್ಷ ನಾಯಕ ಸ್ಥಾನಕ್ಕೆ ಛಲವಾದಿ ನಾರಾಯಣಸ್ವಾಮಿ ನೇಮಕ ; ಸೀಟಿ ರವಿಗೆ ತಪ್ಪಿದ ಸೀಟು, ಬಿಜೆಪಿಯಿಂದ ದಲಿತ ನಾಯಕನಿಗೆ ಮಣೆ 

23-07-24 01:13 pm       Bangalore Correspondent   ಕರ್ನಾಟಕ

ಕೋಟ ಶ್ರೀನಿವಾಸ ಪೂಜಾರಿ ಅವರಿಂದ ತೆರವಾಗಿದ್ದ ಪರಿಷತ್ತಿನ ವಿಪಕ್ಷ ನಾಯಕ ಸ್ಥಾನಕ್ಕೆ ಬಿಜೆಪಿಯಿಂದ ಪರಿಶಿಷ್ಟ ಸಮುದಾಯದ ಪ್ರಭಾವಿ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ.

ಬೆಂಗಳೂರು, ಜುಲೈ.23: ಕೋಟ ಶ್ರೀನಿವಾಸ ಪೂಜಾರಿ ಅವರಿಂದ ತೆರವಾಗಿದ್ದ ಪರಿಷತ್ತಿನ ವಿಪಕ್ಷ ನಾಯಕ ಸ್ಥಾನಕ್ಕೆ ಬಿಜೆಪಿಯಿಂದ ಪರಿಶಿಷ್ಟ ಸಮುದಾಯದ ಪ್ರಭಾವಿ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ.

ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟ್ವೀಟ್ ಮಾಡಿ ಛಲವಾದಿ ನಾರಾಯಾಣಸ್ವಾಮಿಗೆ ಅಭಿನಂದನೆ ತಿಳಿಸಿದ್ದಾರೆ. ಪರಿಶಿಷ್ಟ ಸಮುದಾಯಗಳ ಹಾಗೂ ಸಾಂವಿಧಾನಿಕ ಹಕ್ಕುಗಳ ಪರ ನಿರಂತರ ಹೋರಾಟ ನಡೆಸಿಕೊಂಡು ಬಂದ ಛಲವಾದಿ ನಾರಾಯಣ ಸ್ವಾಮಿಯವರ ನಾಯಕತ್ವ ಹಾಗೂ ಪಕ್ಷ ಬದ್ಧತೆಯನ್ನು ಗುರುತಿಸಿ ವಿಧಾನ ಪರಿಷತ್ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದ ಬಿಜೆಪಿ ವರಿಷ್ಠರು ಇದೀಗ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವ ಮೂಲಕ 'ಸಾಮಾಜಿಕ ನ್ಯಾಯ' ನಮ್ಮ ಪಕ್ಷದ ಆದ್ಯತೆ ಎಂಬ ಸಂದೇಶ ರವಾನಿಸಿದ್ದಾರೆ ಎಂದು ಹೇಳಿದ್ದಾರೆ. 

Kota Srinivas Poojary appointed M'luru district in-charge minister, Bommai  for Udupi | udayavani

Dropping C.T. Ravi as BJP national general secretary sets off speculation  on whether he may be picked to lead the party in Karnataka - The Hindu

ಪರಿಷತ್ ವಿಪಕ್ಷ ನಾಯನಾಗಿದ್ದ ಶ್ರೀನಿವಾಸ ಪೂಜಾರಿ ಉಡುಪಿ -ಚಿಕ್ಕಮಗಳೂರು ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾದ ನಂತರ ಈ ಸ್ಥಾನ ತೆರವಾಗಿತ್ತು. ಇದೀಗ ಪಕ್ಷವು ವಿಪಕ್ಷ ನಾಯಕನ ಸ್ಥಾನಕ್ಕೆ ಛಲವಾದಿ ನಾರಾಯಣ ಸ್ವಾಮಿ ಅವರನ್ನು ನೇಮಿಸಿದೆ. ಸಿಟಿ ರವಿ ಆ ಸ್ಥಾನಕ್ಕೇರುತ್ತಾರೆಂದು ಹೇಳಲಾಗಿತ್ತು. ಇತ್ತೀಚೆಗೆ ಸಿಟಿ ರವಿ ಪರಿಷತ್ ಸದಸ್ಯರಾದ ಸಂದರ್ಭದಲ್ಲಿ ಅವರೇ ಮೇಲ್ಮನೆ ನಾಯಕ ಸ್ಥಾನಕ್ಕೇರುತ್ತಾರೆಂದು ಬಿಂಬಿತವಾಗಿತ್ತು‌. ವಿಧಾನಸಭೆ ವಿಪಕ್ಷ ನಾಯಕ ಸ್ಥಾನದಲ್ಲೂ ಒಕ್ಕಲಿಗ ವರ್ಗದ ಆರ್.ಅಶೋಕ್ ಇರುವುದರಿಂದ ಸಿಟಿ ಸೀಟು ತಪ್ಪಿಸಿಕೊಂಡಿದ್ದಾರೆ. 

ಮೇಲ್ಮನೆಯಲ್ಲಿ ಎನ್‌ಡಿಎ ಬಹುಮತ ಹೊಂದಿದ್ದು ಕಾಂಗ್ರೆಸ್ 35 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿದ್ದರೂ, ಬಿಜೆಪಿ - 25 ಹಾಗೂ ಅದರ ಮಿತ್ರ ಪಕ್ಷ ಜೆಡಿಎಸ್ 8 ಮತ್ತು ಸ್ವತಂತ್ರ ಸದಸ್ಯರನ್ನು ಸೇರಿಸಿದರೆ ಒಟ್ಟು 38 ಸ್ಥಾನಗಳನ್ನು ಹೊಂದಿದೆ.

Chalavadi Narayana Swamy appointed as opposition leader by BJP in the place of Kota Srinivas Poojary.