ಬ್ರೇಕಿಂಗ್ ನ್ಯೂಸ್
26-07-24 06:39 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ.26: ಕನ್ನಡದ ಸ್ಟಾರ್ ನಿರೂಪಕಿ ಅನುಶ್ರೀ ಅವರ ಮುದ್ದಾದ ಮಾತು ಯಾರಿಗೇ ತಾನೇ ಇಷ್ಟ ಆಗೋದಿಲ್ಲ ಹೇಳಿ. ಕನ್ನಡ ಕಿರುತೆರೆ ಲೋಕದಲ್ಲಿ ಆ್ಯಂಕರ್ ಆಗಿ ಮಿಂಚುತ್ತಿರುವ ನಟಿ, ನಿರೂಪಕಿ ಅನುಶ್ರೀ ಅವರು ಒಂದಲ್ಲಾ ಒಂದು ವಿಚಾರದ ಬಗ್ಗೆ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಚಟಪಟ ಅಂತ ಮಾತನಾಡುವ ಅನುಶ್ರೀ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಸದ್ಯ ಅನುಶ್ರೀ ಅವರು ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿದ್ದಾರೆ. ಆದರೆ ಕಳೆದ ಸಂಚಿಕೆಯಲ್ಲಿ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ರಿಯಾಲಿಟಿ ಶೋನಲ್ಲಿ ಒಂದು ಸ್ಕಿಟ್ ಮಾಡಲಾಗಿತ್ತು. ಟೈಮ್ ಟ್ರಾವೆಲ್ ಮೆಷಿನ್ ಕುರಿತಾದ ಕಾನ್ಸೆಪ್ಟ್‌ನಿಂದ ಸ್ಕಿಟ್ ರಚನೆಯಾಗಿತ್ತು. ಆ ಟೈಮ್ ಮೆಷಿನ್ ಸ್ಕಿಟ್ನಲ್ಲಿ ಜೂನಿಯರ್ ಪುನೀತ್ ರಾಜ್‌ಕುಮಾರ್ ಎಂಟ್ರಿ ಕೊಟ್ಟಿದ್ರು. ಇದನ್ನೂ ನೋಡಿದ ಕೂಡಲೇ ಶೋನಲ್ಲಿ ಭಾಗಿಯಾಗಿದ್ದ ಎಲ್ಲರೂ ಭಾವುಕರಾಗಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ನಿಧನರಾಗಿ 3 ವರ್ಷಗಳಾಗುತ್ತಿವೆ. ಆದರೆ ಇನ್ನೂ ಕೂಡ ಅವರ ಅಗಲಿಕೆಯ ನೋವು ಕಡಿಮೆ ಆಗಿಲ್ಲ. ಈಗಲೂ ‘ಅಪ್ಪು’ ಎಂಬ ಹೆಸರು ಕಿವಿ ಮೇಲೆ ಬಿದ್ದಾಗ ಫ್ಯಾನ್ಸ್ ಕಣ್ಣೀರು ಇಡುತ್ತಾರೆ. ಅಷ್ಟರ ಮಟ್ಟಿಗೆ ಪುನೀತ್ ರಾಜ್‌ಕುಮಾರ್ ಅವರನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ವೇದಿಕೆಗೆ ಜೂನಿಯರ್ ಪುನೀತ್ ರಾಜ್‌ಕುಮಾರ್ ಅವರು ಎಂಟ್ರಿ ಕೊಡುತ್ತಿದ್ದಂತೆ ನಿರೂಪಕಿ ಅನುಶ್ರೀ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. "ವಾಪಸ್ ಬಂದ್ಬಿಡಿ ಸಾರ್ ಪ್ಲೀಸ್" ಅಂತ ಹೇಳಿ ಅವರನ್ನು ತಬ್ಬಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ಎಂದರೆ ಅನುಶ್ರೀ ಅವರಿಗೆ ತುಂಬಾ ಇಷ್ಟ. ಅವರ ದೊಡ್ಡ ಅಭಿಮಾನಿ ಕೂಡ ಹೌದು. ಹೀಗಾಗಿ ವೇದಿಕೆ ಮೇಲೆ ಜೂನಿಯರ್ ಪುನೀತ್ ರಾಜ್‌ಕುಮಾರ್ ಅವರು ಮಾತಾಡುತ್ತಿದ್ದಂತೆ ಅತ್ತಿದ್ದಾರೆ. ಜೊತೆಗೆ ನಟಿ ನಯನಾ ಕಣ್ಣೀರಿಟ್ಟಿದ್ದಾರೆ.
Anchor Anushree crying videos goes viral after junior Puneeth Rajkumar enters stage of comedy Khiladigalu. She said sir plz come back, the video of Zee kannada promo has gone viral on social media.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
24-02-25 02:50 pm
Mangalore Correspondent
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
24-02-25 10:51 pm
HK News Desk
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm
Bangalore crime, Police constable, Rape, Bomm...
24-02-25 07:08 pm
Sirsi Murder, KSRTC Bus, crime: ಶಿರಸಿ ; ಹತ್ತು...
23-02-25 03:42 pm
Visa fraud, Bangalore crime, Arrest: ವಿದೇಶಿ ವ...
22-02-25 10:36 pm