ಬ್ರೇಕಿಂಗ್ ನ್ಯೂಸ್
26-07-24 08:50 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ.26: ಓವರ್ ಟೇಕ್ ಮಾಡುವ ಭರದಲ್ಲಿ ಬೈಕ್ಗೆ ಟಚ್ ಆಗಿದೆ ಎಂದು, ಪುಂಡರ ಗುಂಪೊಂದು ಮುಂದೆ ಹೋಗುತ್ತಿದ್ದ ಎರಡು ಕಾರುಗಳನ್ನು ಚೇಸ್ ಮಾಡಿ ಚಾಕು ತೋರಿಸಿ ಹಲ್ಲೆಗೆ ಯತ್ನಿಸಿರುವ ಘಟನೆ ವಿಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮತ್ತೊಂದು ಘಟನೆಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಯುವಕರು ಮುಂದೆ ಹೋಗುತ್ತಿದ್ದ ಕಾರನ್ನು ಅಡ್ಡಗಟ್ಟಿ ಚಾಕು ತೋರಿಸಿದ್ದು, ಈ ಸಂಬಂಧ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ಕಾರುಗಳನ್ನು ಫಾಲೋ ಮಾಡಿಕೊಂಡು ಅಡ್ಡಗಟ್ಟಿದ ಪುಂಡರು ಕಾರಿನ ಗಾಜು ಒಡೆದು ಪುಡಿ - ಪುಡಿ ಮಾಡಿದ್ದಾರೆ. ಆರೋಪಿಗಳು ಹಲ್ಲೆ ಮಾಡಿರುವ ದೃಶ್ಯ ಕಾರಿನ ಡ್ಯಾಷ್ ಕ್ಯಾಮರಾದಲ್ಲಿ ಸೆರೆಯಾಗಿದೆ. ದೃಶ್ಯದಲ್ಲಿ ಇಬ್ಬರು ದ್ವಿಚಕ್ರವಾಹನ ಸವಾರರು ಹಾಗೂ ಎರಡು ಕಾರುಗಳನ್ನು ಚೇಸ್ ಮಾಡುತ್ತಿದ್ದಾರೆ. ಎರಡು ಬಾರಿ ಕಾರುಗಳ ಮುಂದೆ ತಮ್ಮ ದ್ವಿಚಕ್ರ ವಾಹನ ಅಡ್ಡಗಟ್ಟಿ ಕಾರಿನ ಗ್ಲಾಸಿಗೆ ಒಡೆಯಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ ಕಾರು ಚಾಲಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ಚೇಸಿಂಗ್ ಸುಮಾರು ಒಂದೂವರೆ ಕಿಮೀ ವರೆಗೂ ನಡೆದಿದ್ದು, ಈ ಸಂಬಂಧ ವಿಜಯನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಹೀಲಿಂಗ್ ಮಾಡುತ್ತಿದ್ದ ಪುಂಡರಿಂದ ಚಾಕು ತೋರಿಸಿ ಧಮ್ಕಿ:
ಇತ್ತೀಚೆಗೆ ಉದ್ಘಾಟನೆಯಾದ ಡಬ್ಬಲ್ ಡೆಕ್ಕರ್ ಬ್ರಿಡ್ಜ್ ಈಗ ವ್ಹೀಲಿಂಗ್ ಮಾಡುವವರಿಗೆ ಹಾಟ್ ಫೇವರಿಟ್ ಆಗಿದೆ. ಎರಡು ಬೈಕ್ಗಳಲ್ಲಿ ಬಂದಿದ್ದ ಒಟ್ಟು ಆರು ಜನ ಪುಂಡರು ಪಕ್ಕದಲ್ಲಿ ಚಲಿಸುತ್ತಿದ್ದ ಕಾರು ಚಾಲಕನಿಗೆ ಚಾಕು ತೋರಿಸಿ ಧಮ್ಕಿ ಹಾಕಿದ್ದಾರೆ. ಈ ಬಗ್ಗೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಲರ್ಟ್ ಆದ ಸುದ್ದುಗುಂಟೆ ಠಾಣೆ ಪೊಲೀಸರು ಸುಮೋಟೋ ಕೇಸ್ ದಾಖಲು ಮಾಡಿ ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆದು ಯುವಕ ಸಂಜಯ್ ಎಂಬಾತನನ್ನು ಬಂಧಿಸಿದ್ದಾರೆ.
"ಈ ಬಗ್ಗೆ ವಿಚಾರಣೆ ನಡೆಸಿದಾಗ ವ್ಹೀಲಿಂಗ್ ಮಾಡುತ್ತಿದ್ದ ಯುವಕರನ್ನು ಕಾರು ಚಾಲಕ ಪ್ರಶ್ನೆ ಮಾಡಿದ್ದ. ಪ್ರಶ್ನೆ ಮಾಡಿದ್ದೇ ತಪ್ಪು ಎಂಬಂತೆ ಕಾರು ಚಾಲಕನ ಪಕ್ಕವೇ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾರೆ." ಎಂದು ಪೊಲೀಸರು ತಿಳಿಸಿದ್ದಾರೆ.
ಯುವಕರೇ ಹೆಚ್ಚು – ಇದೊಂಥರ ಹುಚ್ಚು ;
ಈ ವೀಲಿಂಗ್ ಪ್ರವೃತ್ತಿಯು ಯುವ ಸಮೂಹದಲ್ಲಿ ಅತಿ ಹೆಚ್ಚು ಕಾಣುತ್ತಿದ್ದು, ಕುಡಿ ಮೀಸೆ ಮುಖದಲ್ಲಿ ಕಾಣುತ್ತಿದ್ದಂತೆ ಹೀರೋಯಿಸಂ ತೋರಿಸುತ್ತಿದ್ದೇವೆಂಬ ಹುಂಬುತನದಲ್ಲಿ ಇಂತಹ ಪುಂಡಾಟಗಳನ್ನು ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಇನ್ನು ಹೀಗೆ ಬೈಕ್ ವೀಲಿಂಗ್ ಮಾಡುವ ಯುವಕರ ವಯಸ್ಸನ್ನು ಗಮನಿಸುವುದಾದರೆ ೧೮ರಿಂದ ೨೨ ವರ್ಷದ ವಯೋಮಿತಿಯೊಳಗಿನವರೇ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಇವರ ಈ ಹುಚ್ಚಾಟವು ಕೆಲವರ ಪ್ರಾಣಕ್ಕೆ ಕುತ್ತು ತಂದಿದ್ದೂ ಇವೆ.
ಕೆಲವರು ವೀಲಿಂಗ್ ಕಾರಣಕ್ಕಾಗಿಯೇ ತಮ್ಮ ಬೈಕ್ ಅನ್ನು ಆಲ್ಟ್ರೇಷನ್ ಮಾಡಿಸಿಕೊಂಡಿರುತ್ತಾರೆ. ಅದನ್ನು ತಮಗೆ ಬೇಕಾದಂತೆ ಹಲವಾರು ರೀತಿಯ ಮಾರ್ಪಾಡುಗಳನ್ನು ಮಾಡಿಸಿಕೊಂಡಿರುತ್ತಾರೆ. ಹ್ಯಾಂಡಲ್‌ಗಳ ಬದಲಾವಣೆ, ದೊಡ್ಡ ಗಾತ್ರದ ವೀಲ್‌ಗಳು, ಸ್ಟಿಕ್ಕರ್‌ಗಳು, ಲೈಟಿಂಗ್ ಸಿಸ್ಟಮ್, ಮಡ್‌ಗಾರ್ಡ್ ತೆಗೆದುಹಾಕುವುದು, ಸೈಲೆನ್ಸರ್‌ಗಳ ಮಾರ್ಪಾಡು ಸೇರಿದಂತೆ ಇನ್ನಿತರ ಆಲ್ಟ್ರೇಷನ್‌ಗಳನ್ನು ಮಾಡಿಸಿಕೊಳ್ಳುತ್ತಾರೆ. ಈ ಮೂಲಕ ತಮ್ಮ ಸ್ನೇಹಿತ ವರ್ಗದಲ್ಲಿ ಹೆಚ್ಚುಗಾರಿಕೆಯ ಪ್ರದರ್ಶನಗಳನ್ನು ಮಾಡಿಕೊಂಡು ವೀಲಿಂಗ್ ಮಾಡಲು ರಸ್ತೆಗಿಳಿಯುತ್ತಿದ್ದಾರೆ. ಇಂತಹ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿಕ್ಕಮಗಳೂರು ಪೊಲೀಸರು ಜೂನ್ ೨೭ರಂದು ೫ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದರು. ಬಳಿಕ ಸೈಲೆನ್ಸರ್‌ಗಳ ಮೇಲೆ ಬುಲ್ಡೋಜರ್ ಹತ್ತಿಸಿ ನಾಶಪಡಿಸಿದ್ದಾರೆ. ಜತೆಗೆ ಹಾಫ್ ಹೆಲ್ಮೆಟ್‌ಗಳನ್ನೂ ಪುಡಿಗಟ್ಟಿದ್ದಾರೆ.
ಬೈಕ್ ವೀಲಿಂಗ್ ವಿರುದ್ಧ ಕಾನೂನು ಕ್ರಮವೇನು..?
ವೀಲಿಂಗ್ ಪ್ರಕರಣವು ಶಿಕ್ಷಾರ್ಹ ಹಾಗೂ ದಂಡಾರ್ಹ ಅಪರಾಧವಾಗಿದೆ. ಈ ಮೊದಲು ವೀಲಿಂಗ್ ಮಾಡಿದವರ ಮೇಲೆ ಮಾತ್ರ ಕ್ರಮ ಕೈಗೊಳ್ಳಲಾಗುತ್ತಿತ್ತು. ಅವರಿಗೆ ದಂಡ ವಿಧಿಸುವ ಜೊತೆಗೆ ವಾಹನವನ್ನೂ ಸಹ ಜಪ್ತಿ ಮಾಡಲಾಗುತ್ತಿತ್ತು. ಇನ್ನು ಸವಾರರು ಅಪ್ರಾಪ್ತರಾಗಿದ್ದರೆ ಅವರ ಪೋಷಕರ ಮೇಲೂ ಕ್ರಮ ಕೈಗೊಳ್ಳುವ ಅಧಿಕಾರ ಪೊಲೀಸರಿಗೆ ಇರುತ್ತದೆ.
ಈ ವೀಲಿಂಗ್ ಪ್ರಕರಣಗಳು ಹೆಚ್ಚುತ್ತಾ ಹೋದಂತೆ ಕಠಿಣ ಕಾನೂನುಗಳನ್ನು ರೂಪಿಸಿದ ಕರ್ನಾಟಕ ಪೊಲೀಸ್ ಇಲಾಖೆಯು ವೀಲಿಂಗ್ ಮಾಡುವವರ ಜೊತೆಗೆ ಆ ವಾಹನವನ್ನು ಮಾರ್ಪಾಡು ಮಾಡುತ್ತಿದ್ದ ಗ್ಯಾರೇಜ್ ಮೆಕಾನಿಕ್ ಮೇಲೆಯೂ ಕ್ರಮ ಕೈಗೊಳ್ಳುತ್ತಿದೆ. ಆಲ್ಟ್ರೇಷನ್ ಮಾಡುವ ಗ್ಯಾರೇಜ್ ಮಾಲೀಕನ ಮೇಲೆ ವಾಹನ ಕಾಯ್ದೆ ಅಡಿ ಕ್ರಮ ಕೈಗೊಂಡು ಗ್ಯಾರೇಜ್ ಪರವಾನಗಿಯನ್ನು ಸಹ ರದ್ದು ಮಾಡಲು ಶಿಫಾರಸು ಮಾಡಲಾಗುತ್ತದೆ.
ಎಚ್ಚೆತ್ತುಕೊಳ್ಳಬೇಕಿದೆ ಪೋಷಕರು ;
ಯುವಕರ ಈ ವೀಲಿಂಗ್ ಪ್ರಹಸನಗಳು ನಿಲ್ಲಬೇಕೆಂದರೆ ಪೋಷಕರ ಪಾತ್ರ ಬಹಳ ದೊಡ್ಡದಿರುತ್ತದೆ. ಮಕ್ಕಳು ಕೇಳಿದ್ದನ್ನೆಲ್ಲ ಕೊಡುವ ಮೊದಲು ಅದರ ಅವಶ್ಯಕತೆಯನ್ನು ಮೊದಲು ತಿಳಿದುಕೊಳ್ಳುವ ಕೆಲಸ ಆಗಬೇಕು. ಇನ್ನು ಮಕ್ಕಳಿಗೆ ವಾಹನಗಳನ್ನು ಕೊಡಿಸಿದ ಮೇಲೆ ಅವರ ಚಲನವಲನಗಳ ಮೇಲೆ ನಿಗಾ ವಹಿಸಬೇಕು ಎಂಬ ಮನವಿ ಸಹಿತ ಎಚ್ಚರಿಕೆಯನ್ನು ಪೊಲೀಸರು ಆಗಾಗ ಮಾಡುತ್ತಲೇ ಇದ್ದಾರೆ. ಹೀಗಾಗಿ ಪೋಷಕರು ಎಚ್ಚೆತ್ತುಕೊಳ್ಳಬೇಕಿದೆ.
ಬೈಕ್ ವೀಲಿಂಗ್ ಮೇಲೆ ಸೆಕ್ಷನ್ ಹಾಗೂ ದಂಡ ಬೈಕ್ ಸ್ಟಂಟ್ ಮಾಡಿದವರ ಮೇಲೆ ಐಪಿಸಿ ಸೆಕ್ಷನ್ 279ರ ಅಡಿಯಲ್ಲಿ 1000 ರೂಪಾಯಿ ದಂಡ ಅಥವಾ 6 ತಿಂಗಳು ಜೈಲು ಶಿಕ್ಷೆ ವಿಧಿಸಬಹುದಾಗಿದೆ. ವೀಲಿಂಗ್ ಮಾಡಿದವರನ್ನು ಪೊಲೀಸ್ ಠಾಣೆಗೆ ಕರೆಸಿ ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡು ಬಿಟ್ಟುಕಳಿಸಲಾಗುತ್ತದೆ.
ಬೆಂಗಳೂರಿನಲ್ಲಿ ನಿಲ್ಲದ ಪುಂಡರ ವ್ಹೀಲಿಂಗ್ ಹಾವಳಿ..!@BlrCityPolice @blrcitytraffic @CPBlr pic.twitter.com/0y2atyuNKe
— Aditya Samarth (@aaditya_samarth) July 25, 2024
Bangalore bike wheelie, threat public with knife, break car glass for questioning stunt. The wheelie menace by a few bikers in Bengaluru is not ending even after police warned of strict consequences. Recently, a group of youngsters were found dangerously doing stunts in the middle of the road, leaving all safety measures. A video went viral on social media and the police have booked them.
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm