ಬ್ರೇಕಿಂಗ್ ನ್ಯೂಸ್
21-08-24 03:25 pm HK News Desk ಕರ್ನಾಟಕ
ಶಿವಮೊಗ್ಗ, ಆಗಸ್ಟ್ 21: ಬಾಂಗ್ಲಾ ರೀತಿ ರಾಜಭವನಕ್ಕೆ ಮುತ್ತಿಗೆ ಹಾಕುತ್ತೇವೆ ಎಂಬ ಎಂ.ಎಲ್.ಸಿ. ಐವಾನ್ ಡಿಸೋಜಾ ಹೇಳಿಕೆಗೆ ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ. ಆತ ಐವಾನ್ ಡಿಸೋಜಾ ಅಲ್ಲಾ.. ಹೈವಾನ್ ಡಿಸೋಜಾ ಆಗಿದ್ದಾನೆ. ಕೂಡಲೇ ಆತನನ್ನು ಎಂ.ಎಲ್.ಸಿ. ಸ್ಥಾನದಿಂದ ಕಿತ್ತು ಬಿಸಾಕಬೇಕು ಎಂದು ಆಗ್ರಹಿಸಿದ್ದಾರೆ.
ಐವಾನ್ ಹೇಳಿಕೆಯಿಂದ ಇಡೀ ದೇಶ ತಲೆತಗ್ಗಿಸುವ ಸ್ಥಿತಿಯಾಗಿದೆ. ಯಾರು ಯಾರು ಈ ರೀತಿಯ ಹೇಳಿಕೆ ನೀಡಿದ್ದಾರೋ ಅವರೆಲ್ಲರೂ ರಾಷ್ಟ್ರದ್ರೋಹಿಗಳೇ. ಅವರೆಲ್ಲರ ಮೇಲೂ ಸುಮೊಟೋ ಕೇಸು ದಾಖಲಿಸಬೇಕು. ಕೃಷ್ಣ ಭೈರೇಗೌಡ ಏನೂ ಮೇಲಿಂದ ಕೆಳಗೆ ಬಂದಿಲ್ಲ. ಈ ರೀತಿಯ ಹೇಳಿಕೆ ನೀಡಿದವರೆಲ್ಲರೂ ದೇಶದ್ರೋಹಿಗಳೇ. ಬಾಂಗ್ಲಾದಲ್ಲಿ ಎಲ್ಲ ಸಮುದಾಯದವರ ಅತ್ಯಾಚಾರ, ಕೊಲೆ ಆದವು. ಇವರು ಯಾರನ್ನೊ ತೃಪ್ತಿಪಡಿಸಲು ಹೇಳಿಕೆ ನೀಡಿದ್ದಾರೆ. ಇದು ಗಾಂಧೀಜಿಗೆ ಅವಮಾನ ಮಾಡಿದಂತೆ.
ಇದು ದೇಶದ ನಾಗರಿಕರನ್ನು ತಲೆ ತಗ್ಗಿಸುವಂತೆ ಮಾಡಿದೆ. ಇದನ್ನು ಕಾಂಗ್ರೆಸ್‌ನ ಯಾವ ನಾಯಕರು ವಿರೋಧಿಸಿಲ್ಲ. ಐವಾನ್ ಡಿಸೋಜ ಅವರನ್ನು ಪರಿಷತ್ ಸದಸ್ಯ ಸ್ಥಾನದಿಂದ ಕಿತ್ತು ಹಾಕಬೇಕು. ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಸ್ವಾತಂತ್ರ್ಯ ಹೋರಾಟ ಸಮಯದಲ್ಲಿ ಕ್ರಾಂತಿ ಇತ್ತು, ಅತ್ಯಾಚಾರ ಇರಲಿಲ್ಲ. ಆಗ ಕೊಲೆಗಳೂ ಆಗುತ್ತಿರಲಿಲ್ಲ.
ಬಾಂಗ್ಲಾ ಪರ ಹೇಳಿಕೆ ಇಲ್ಲಿಯ ಮುಸಲ್ಮಾನರಿಗೆ ದಂಗೆ, ಅತ್ಯಾಚಾರ, ಕೊಲೆ ಮಾಡಲು ಪ್ರೋತ್ಸಾಹ ನೀಡಿದಂತೆ. ಇದಕ್ಕೆ ಬೆಂಬಲ ನೀಡಿದವರೆಲ್ಲರೂ ರಾಷ್ಟ್ರದ್ರೋಹಿಗಳು. ಹೈವಾನ್ ಡಿಸೋಜಾನನ್ನು ಮೊದಲು ಕಿತ್ತು ಬಿಸಾಕಬೇಕು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
Mangalore Ivan dsouza remarks on provocative speech, Eshwarappa slams Ivan says he's anti national. Karnataka Congress leader Ivan D'Souza threatened Governor Thawar Chand Gehlot of facing a "Bangladesh-like fate" if he does not withdraw his order for probe against Chief Minister Siddaramaiah.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
23-02-25 11:22 pm
HK News Desk
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
Kerala school teacher suicide, catholic Churc...
22-02-25 03:53 pm
24-02-25 02:50 pm
Mangalore Correspondent
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
24-02-25 07:08 pm
Bangalore Correspondent
Sirsi Murder, KSRTC Bus, crime: ಶಿರಸಿ ; ಹತ್ತು...
23-02-25 03:42 pm
Visa fraud, Bangalore crime, Arrest: ವಿದೇಶಿ ವ...
22-02-25 10:36 pm
Ankola Car Robbery, Rajendra Pawar, Gold Smug...
20-02-25 01:22 pm
Mangalore, Puttur, Cheating, paras traders: ಲ...
19-02-25 09:26 pm