ಬ್ರೇಕಿಂಗ್ ನ್ಯೂಸ್
26-08-24 04:52 pm HK News Desk ಕರ್ನಾಟಕ
ಚಿತ್ರದುರ್ಗ, ಆಗಸ್ಟ್ 26: ದರ್ಶನ್ ಕೈಯಲ್ಲಿ ಸಿಗರೇಟು ಹಿಡಿದು ಕುಳಿತಿರುವ ಫೋಟೋ ನೋಡಿ ನಮಗೆ ಶಾಕ್ ಆಯ್ತು, ಕುರ್ಚಿ ಮೇಲೆ ಕುಳಿತು ಚಹ, ಸಿಗರೇಟ್ ಹಿಡಿದು ಕೂತಿದ್ದಾರೆ. ರೆಸಾರ್ಟ್ ನಲ್ಲಿ ಕುಳಿತಂತೆ ಕುಳಿತಿದ್ದಾರೆ. ಇಂಥ ದೃಶ್ಯ ನಮ್ಮ ಹೊಟ್ಟೆ ಉರಿಸುತ್ತದೆ ಎಂದು ಕೊಲೆ ಆರೋಪಿ ದರ್ಶನ್ ರಾಜಾತಿಥ್ಯದ ಫೋಟೊ ನೋಡಿ ರೇಣುಕಾಸ್ವಾಮಿ ತಂದೆ ಶಿವನಗೌಡರ್ ಕಣ್ಣೀರು ಹಾಕಿದ್ದಾರೆ.
ನ್ಯಾಯಾಂಗ ಆತನಿಗೆ ಮನೆ ಊಟ ಕೊಟ್ಟಿಲ್ಲ. ನಮಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ಆದರೆ ಈ ಘಟನೆ ನೋಡಿ ನನಗೆ ಪರಮಾಶ್ವರ್ಯ ಆಗಿದೆ. ಜೈಲು ಜೈಲು ಆಗಿರ್ಬೇಕು, ಮತ್ತೊಂದು ಆಗಿರಬಾರ್ದು. ಸಿಎಂ ಸಿದ್ದರಾಮಯ್ಯ ಅವರು ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂದಿದ್ದಾರೆ. ನನ್ನ ಮಗನಿಗೆ ಶಾಂತಿ ಸಿಗಬೇಕು, ಅವರಿಗೆ ಶಿಕ್ಷೆಯಾಗಬೇಕು.

ಸರ್ಕಾರ ನಿರ್ದಾಕ್ಷಿಣ್ಯವಾಗಿ ತನಿಖೆ ಮಾಡಬೇಕು. ಕೈಮುಗಿದು ಸರ್ಕಾರವನ್ನ ನಾನು ಕೇಳುತ್ತೇನೆ. ಸರ್ಕಾರ, ಪೊಲೀಸರು, ನ್ಯಾಯಾಂಗದ ಮೇಲೆ ನಂಬಿಕೆ ಇದೆ. ನನ್ನ ಮಗನ ಸಾವಿಗೆ ಇಡೀ ರಾಜ್ಯ ದುಃಖ ಪಟ್ಟಿದೆ. ಗೃಹ ಸಚಿವರು ಕೂಡಾ ಈ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಅವರು ಕೇಳಿಕೊಂಡಿದ್ದಾರೆ.
ನಮ್ಮ ಮನೆಯವರೆಲ್ಲ ಕಣ್ಣೀರಲ್ಲಿ ಕೈತೊಳೆದಿದ್ದೇವೆ. ಇಂಥವರಿಗೆ ಮನುಷ್ಯತ್ವ ಇದಿಯಾ? ದಿನ ಬೆಳಕಾದ್ರೆ ಸೊಸೆ ಜೀವನ ನೆನೆದು ಸಂಕಟ ಆಗುತ್ತದೆ. ಅದರ ಮಧ್ಯೆ ಇಂಥ ದೃಷ್ಯ ನೋಡಿ ನಮ್ಮ ಹೊಟ್ಟೆ ಉರಿಸುತ್ತದೆ. ದಯವಿಟ್ಟು ಸರ್ಕಾರ ನಡೆಸೋರು ಅರ್ಥ ಮಾಡಿಕೊಂಡು ಸಮಗ್ರ ತನಿಖೆ ಮಾಡಬೇಕು. ಈ ರೀತಿ ಆಗುವುದರಿಂದ ಸರ್ಕಾರದ ಮೇಲೆ ನಂಬಿಕೆ ಹೋಗುತ್ತದೆ. ಹೀಗಾದರೆ ಸಿಬಿಐ ತನಿಖೆಯನ್ನೇ ನಡೆಸಬೇಕು ಎಂದು ಶಿವನಗೌಡರ್ ಒತ್ತಾಯಿಸಿದ್ದಾರೆ.
Royal treatment for actor Darshan in jail, victim Renukaswamy father cries. A photo of actor Darshan with rowdy sheeter Wilson Naga and team went viral on social media alleging that prison authorities have been giving in royal treatment inside the prison
20-09-26 03:32 pm
HK News Staffer
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 09:54 pm
HK News Staffer
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
20-09-26 04:39 pm
HK News Staffer
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm