ಬ್ರೇಕಿಂಗ್ ನ್ಯೂಸ್
04-09-24 02:53 pm HK News Desk ಕರ್ನಾಟಕ
ಚಿಕ್ಕೋಡಿ, ಸೆ 04: ಮದುವೆಗೆ ಒಂದು ದಿನ ಮುನ್ನ ಯುವಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ಝುಂಜರವಾಡ ಆರ್ಸಿ ಗ್ರಾಮದ ನಿವಾಸಿ ಸದಾಶಿವ ರಾಮಪ್ಪ ಹೋಸಲ್ಕಾರ (31) ಮೃತಪಟ್ಟಿದ್ದಾರೆ.
ಸೆಪ್ಟೆಂಬರ್ 5ರಂದು ಈ ಯುವಕನ ಮದುವೆ ನಿಶ್ಚಯವಾಗಿತ್ತು. ಕುಟುಂಬ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಮಂಗಳವಾರ ರಾತ್ರಿ 8 ಗಂಟೆಯ ಸುಮಾರಿಗೆ ಮನೆ ಮುಂದೆ ಮದುವೆಪೂರ್ವ ಸಿದ್ಧತೆ ನಡೆಸಲಾಗುತ್ತಿತ್ತು. ಸದಾಶಿವ ಸ್ನೇಹಿತನ ಜೊತೆಗೆ ಮದುವೆ ಕೆಲಸದ ಬಗ್ಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಹಠಾತ್ ಹೃದಯಾಘಾತ ಸಂಭವಿಸಿದ್ದು, ಸ್ಥಳದಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅಥಣಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ, ಅಷ್ಟರಲ್ಲೇ ಯುವಕನ ಪ್ರಾಣಪಕ್ಷಿ ಹಾರಿ ಹೋಗಿದೆ.
ಮನೆಗೆ ಆಸರೆಯಾಗಿದ್ದ ಒಬ್ಬನೇ ಮಗನನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಶಾಲಾ-ಕಾಲೇಜು ಮಕ್ಕಳಿಗೆ CPR ತರಬೇತಿಗೆ ಶಿಕ್ಷಣ ಇಲಾಖೆ ಚಿಂತನೆ;
ಪಿಯು ಕಾಲೇಜು ಹಾಗೂ ಪ್ರೌಢ ಶಾಲಾ ಮಕ್ಕಳಿಗೆ CPR ಕ್ಲಾಸ್ ಮಾಡಲು ಕರ್ನಾಟಕ ಶಿಕ್ಷಣ ಇಲಾಖೆ ಮುಂದಾಗಿದೆ. ಹೃದಯಘಾತವಾದಗ ತಕ್ಷಣಕ್ಕೆ ಏನು ಮಾಡಬೇಕು? ಹೇಗೆ ನಿರ್ವಹಿಸಬೇಕು? ಗೋಲ್ಡನ್ ಟೈಮ್ ನಲ್ಲಿ ಏನು ಮಾಡಿದ್ರೆ ಜೀವ ಉಳಿಸಬಹುದು ಎನ್ನುವ ಜ್ಞಾನ ಬಹುತೇಕ ಜನರಲ್ಲಿ ಇಲ್ಲ. ಹೃದಯಘಾತದ ವೇಳೆ ತಕ್ಷಣದ ಚಿಕಿತ್ಸೆ ನೀಡದೆ ಗೊಂದಲದಲ್ಲಿ ಅನೇಕ ಜನರು ಜೀವ ಕೈಚೆಲ್ಲುತ್ತಿದ್ದಾರೆ. ಹೀಗಾಗಿ CPR ಶಿಕ್ಷಣವನ್ನ ಪ್ರೌಢ ಹಾಗೂ ಕಾಲೇಜು ಹಂತದ 10,11,12 ನೇ ತರಗತಿಯ ಮಕ್ಕಳಿಗೆ ನೀಡಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ.
ವಾರದಲ್ಲಿ 40 ನಿಮಿಷ ಒಂದು ತರಗತಿಯ ಅವಧಿಯಲ್ಲಿ ಸಿಪಿಆರ್ ಅಂದ್ರೇನು? ಹೇಗೆ ಯಾವ ಸಮಯದಲ್ಲಿ ಇದನ್ನ ಮಾಡಿದ್ರೆ ಜೀವ ಉಳಿಸಬಹುದು? ಹಾಗೂ ಪ್ರಥಮ ದರ್ಜೆ ಚಿಕಿತ್ಸೆ ಹೇಗೆ ನೀಡಬೇಕು.? ಎಂಬ ಎಲ್ಲ ತರಬೇತಿಯ ಶಿಕ್ಷಣವನ್ನ ಶಾಲಾ ಮಕ್ಕಳಿಗೆ ನೀಡಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ. ಈ ಮೂಲಕ ಶಾಲಾ ಹಂತದಲ್ಲಿ ಮಕ್ಕಳಿಗೆ ಆರೋಗ್ಯದ ಬಗ್ಗೆ ತರಬೇತಿ ಹಾಗೂ ಪ್ರಾಥಮಿಕ ಚಿಕಿತ್ಸೆಯ ಶಿಕ್ಷಣ ನೀಡಲು ಶಾಲಾ ಶಿಕ್ಷಣ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ.
31 year old bride groom dies of heart attack day before marriage due to heart attack Chikodi.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
23-02-25 11:22 pm
HK News Desk
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
Kerala school teacher suicide, catholic Churc...
22-02-25 03:53 pm
24-02-25 02:50 pm
Mangalore Correspondent
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
23-02-25 03:42 pm
HK News Desk
Visa fraud, Bangalore crime, Arrest: ವಿದೇಶಿ ವ...
22-02-25 10:36 pm
Ankola Car Robbery, Rajendra Pawar, Gold Smug...
20-02-25 01:22 pm
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm