ಬ್ರೇಕಿಂಗ್ ನ್ಯೂಸ್
19-09-24 10:42 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.19: ವಾಣಿಜ್ಯ ಸಂಕೀರ್ಣ ನಿರ್ಮಿಸಲು ವಿವಿಧ ಸೆಸ್ ವಿಧಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2022ರಲ್ಲಿ ನೀಡಿದ್ದ ಡಿಮ್ಯಾಂಡ್ ನೋಟಿಸ್ ಪ್ರಶ್ನಿಸಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ಅವರ ಪತ್ನಿ ತಬಸ್ಸುಮ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಪತ್ನಿ ತಬಸ್ಸುಮ್ ದಿನೇಶ್ ರಾವ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಸಂಸದೀಯ ವ್ಯವಹಾರ ಹಾಗೂ ಶಾಸನ ರಚನಾ ಇಲಾಖೆ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತ, ಬಿಬಿಎಂಪಿ ಪೂರ್ವ ವಿಭಾಗದ ನಗರ ಯೋಜನಾ ಸಹಾಯಕ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ, ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿದೆ.
ಆರ್.ಟಿ. ನಗರದ ಮಠದಹಳ್ಳಿಯಲ್ಲಿ ನಮ್ಮ ಒಡೆತನದಲ್ಲಿ 608.21 ಚದರ ಅಡಿ ಆಸ್ತಿ ಇದೆ. ಇದಕ್ಕೆ ಬಿಬಿಎಂಪಿ ಖಾತೆಯನ್ನೂ ನೀಡಿದೆ. ಈ ಆಸ್ತಿಗೆ ಚಾಲ್ತಿ ತೆರಿಗೆ ಕಟ್ಟಲಾಗಿದೆ. ಈ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಕೋರಿ ಮನವಿ ಸಲ್ಲಿಸಿದ್ದೆವು. ಆದರೆ, ನಕ್ಷೆ ಮಂಜೂರಾತಿ ನೀಡಲು ನೆಲ ಬಾಡಿಗೆ ಶುಲ್ಕ, ಅದರ ಮೇಲೆ ಶೇ 18ರಷ್ಟು ಜಿಎಸ್‌ಟಿ, ಭದ್ರತಾ ಠೇವಣಿ, ಕಟ್ಟಡ ಹಾಗೂ ನಿವೇಶನ ಅಭಿವೃದ್ಧಿ ಶುಲ್ಕ, ಕೆರೆ ಜೀರ್ಣೋದ್ಧಾರ ಶುಲ್ಕ, ವರ್ತುಲ ರಸ್ತೆ ಶುಲ್ಕ, ಕೊಳೆಗೇರಿ ಅಭಿವೃದ್ಧಿ ಸೆಸ್ ಸೇರಿದಂತೆ ವಿವಿಧ ಬಗೆಯ 41.55 ಲಕ್ಷ ಮೊತ್ತದ ಶುಲ್ಕ, ತೆರಿಗೆ, ಸೆಸ್‌ಗಳು ಹಾಗೂ 3.46 ಲಕ್ಷ ಕಾರ್ಮಿಕರ ಸೆಸ್ ಪಾವತಿಸುವಂತೆ ಬಿಬಿಎಂಪಿ 2024ರ ಆಗಸ್ಟ್ 29ರಂದು ಡಿಮ್ಯಾಂಡ್ ನೋಟಿಸ್ ಜಾರಿಗೊಳಿಸಿದೆ. ಇದು ಕಾನೂನು ಬಾಹಿರ' ಎಂದು ಅರ್ಜಿದಾರರು ದೂರಿದ್ದಾರೆ.
ಕರ್ನಾಟಕ ಪೌರ ನಿಗಮಗಳು ಹಾಗೂ ಇತರೆ ಕೆಲವು ಕಾನೂನುಗಳ (ತಿದ್ದುಪಡಿ) ಕಾಯ್ದೆ-2021 ಅನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು. ಕರ್ನಾಟಕ ಪಟ್ಟಣ ಹಾಗೂ ನಗರ ಯೋಜನಾ ಕಾಯ್ದೆ-2004ರ ಕಲಂ 18-ಎ ರದ್ದುಪಡಿಸಬೇಕು. ಬಿಬಿಎಂಪಿ ಜಾರಿಗೊಳಿಸಿರುವ ಡಿಮ್ಯಾಂಡ್ ನೋಟಿಸ್ ರದ್ದುಪಡಿಸಬೇಕು. ನಮ್ಮ ಒಡೆತನದ ಆಸ್ತಿಯಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸಲು ಯಾವುದೇ ಷರತ್ತು ಹಾಗೂ ತೆರಿಗೆ, ಶುಲ್ಕಗಳನ್ನು ವಿಧಿಸದೆ ನಕ್ಷೆ ಮಂಜೂರು ಮಾಡಲು ಬಿಬಿಎಂಪಿಗೆ ನಿರ್ದೇಶಿಸಬೇಕು' ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
Minister for Health Dinesh Gundu Rao and his wife Tabassum Dinesh Rao have approached the Karnataka High Court challenging the legality of the Karnataka Municipal Corporation and Certain Other Law (Amendment) Act, 2021. This Act, enacted in January 2022, was designed to “nullify” the court’s 2021 judgment, which had declared charges such as ground rent, licence fees, scrutiny fees, and security deposits levied for sanctioning building plans as illegal.
20-01-25 07:00 pm
HK News Desk
Hassan Suicide, Online Gaming: ಅಮ್ಮಾ ನನ್ನನ್ನು...
20-01-25 04:24 pm
ಕೇಸರಿ ಮನೆಯಲ್ಲಿ ಬಣ ಬಡಿದಾಟ ಜೋರು ; ಯತ್ನಾಳ್ ಬಣದ ಎ...
19-01-25 08:30 pm
ಮುಡಾ ಸೈಟ್ ಹಗರಣ ; 300 ಕೋಟಿ ಮೌಲ್ಯದ 142 ಆಸ್ತಿಗಳನ...
18-01-25 05:05 pm
ಗದಗ ; ಪ್ರೀತಿಸಲು ಪೀಡಿಸುತ್ತಿದ್ದ ಇಬ್ಬರು ಯುವಕರು,...
16-01-25 05:30 pm
19-01-25 08:17 pm
HK News Desk
Israel War: ಕಡೆಗೂ ಕದನ ವಿರಾಮ ಘೋಷಿಸಿದ ಇಸ್ರೇಲ್ ;...
19-01-25 06:35 pm
ಮಂಗಳೂರಿನ ಕುದುರೆಮುಖ ಕಬ್ಬಿಣ ಅದಿರು ಕಂಪನಿ ಎನ್ಎಂಡಿ...
18-01-25 06:20 pm
Vijay Kiran Anand 2025: ಮಹಾ ಕುಂಭ ಮೇಳದ ಮುಖ್ಯ ಉ...
16-01-25 09:01 pm
Actor Saif Ali Khan attack stabbed: ಬಾಲಿವುಡ್...
16-01-25 04:24 pm
20-01-25 11:05 pm
Mangalore Correspondent
Mangalore, Ivan dsouza, CM Siddaramaiah: ಬಹು...
20-01-25 06:00 pm
International Kite Festival 2025, Thannirbhav...
18-01-25 09:27 pm
Mangalore Dinesh Gundu Rao, belthandy: ತಾಲೂಕು...
18-01-25 06:16 pm
CM Siddaramaiah, multicultural fest, Mangalor...
17-01-25 11:10 pm
20-01-25 10:18 pm
HK News Desk
Mangalore Kotekar Bank Robbery, Three Arreste...
20-01-25 07:19 pm
Mangalore Kotekar Robbery, Davanagere: ಮಂಗಳೂರ...
20-01-25 05:20 pm
Mysuru Robbery, Bidar Mangalore, Crime; ಬೀದರ್...
20-01-25 01:25 pm
Bidar Bank Robbery, bihar gang, Update: ಬೀದರ್...
19-01-25 07:52 pm