ಬ್ರೇಕಿಂಗ್ ನ್ಯೂಸ್
21-09-24 11:17 pm HK News Desk ಕರ್ನಾಟಕ
ಬೆಳಗಾವಿ, ಸೆ.21: ಪ್ಯಾಲೆಸ್ತೀನ್ ಧ್ವಜದ ಹಾರಾಟದ ಬಗ್ಗೆ ಸಚಿವ ಜಮೀರ್ ಅಹ್ಮದ್ ಸಮರ್ಥನೆ ಮಾಡಿಕೊಂಡ ಬೆನ್ನಲ್ಲೇ ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿ ಪ್ಯಾಲೆಸ್ತೀನ್ ಧ್ವಜ ಕಾಣಿಸಿಕೊಂಡಿದೆ. ಬೆಳಗಾವಿ ನಗರದ ದರ್ಬಾರ್ ಗಲ್ಲಿಯಲ್ಲಿ ಉದ್ದಕ್ಕೂ ಪ್ಯಾಲೆಸ್ತೀನ್ ಪರ ಪೋಸ್ಟರ್ ಹಾಕಲಾಗಿದೆ.
ಪೊಲೀಸರ ಎಚ್ಚರಿಕೆಗೆ ಬೆಳಗಾವಿಯಲ್ಲಿ ಪ್ಯಾಲೆಸ್ತೀನ್ ಪ್ರಿಯರು ಡೋಂಟ್ ಕೇರ್ ಮಾಡಿದ್ದಾರೆ. ಬೆಳಗಾವಿ ನಗರದ ದರ್ಬಾರ್ ಗಲ್ಲಿಯಲ್ಲಿ ಎರಡನೂರು ಮೀಟರ್ ನಷ್ಟು ರಸ್ತೆಯುದ್ದಕ್ಕೂ ಕಿಡಿಗೇಡಿಗಳು ಪ್ಯಾಲೆಸ್ತೀನ್ ಧ್ವಜ ಇರುವ ಶಾಮಿಯಾನ ಕಟ್ಟಿದ್ದಾರೆ.
ಈ ಭಾಗದಲ್ಲಿ ಭಾನುವಾರ ಸೆ.22ರಂದು ಈದ್ ಮಿಲಾದ್ ಮೆರವಣಿಗೆ ನಡೆಯಲಿದ್ದು ಇದಕ್ಕಾಗಿ ಪೋಸ್ಟರ್ ಹಾಕಿ ಶೃಂಗಾರ ಮಾಡಲಾಗಿದೆ. ಮುಸ್ಲಿಂ ಸಮುದಾಯದ ಯುವಕರು ರಾತ್ರೋರಾತ್ರಿ ಪ್ಯಾಲೆಸ್ತೀನ್ ಧ್ವಜವನ್ನು ದೊಡ್ಡ ಪ್ರಮಾಣದಲ್ಲಿ ಕಟ್ಟಿದ್ದಾರೆ. ಬೆಳಗಾವಿ ಪಾಲಿಕೆ ವಿರೋಧ ಪಕ್ಷದ ನಾಯಕ ಮುಜಾಮಿಲ್ ಡೋಣಿ ನೇತೃತ್ವದಲ್ಲೇ ಪೋಸ್ಟರ್ ಹಾಕಿರುವುದು ಕಂಡುಬಂದಿದೆ.
ಇದೇ ವೇಳೆ, ಚಿಕ್ಕೋಡಿಯಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ಟೈನ್ ಧ್ವಜ ಕಾಣಿಸಿಕೊಂಡಿದೆ. ಪ್ಯಾಲೆಸ್ಟೈನ್ ಧ್ವಜ ಹಾರಿಸಿ ಯುವಕರು ಮತ್ತೆ ಪುಂಡಾಟ ಮೆರೆದಿದ್ದಾರೆ. ಸುಮಾರು 6 ಅಡಿ ಎತ್ತರದ ಧ್ವಜ ಪ್ರದರ್ಶನ ಮಾಡಿದ್ದಾರೆ. ಇದಲ್ಲದೆ, ಕೈಯಲ್ಲಿ ಪ್ಯಾಲೆಸ್ತೀನ್ ಧ್ವಜ ಹಿಡಿದು ಕುಣಿದು ಕುಪ್ಪಳಿಸಿದ್ದಾರೆ. ಗಣೇಶೋತ್ಸವ ವಿಸರ್ಜನೆ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದ ಈದ್ ಮೆರವಣಿಗೆ ಶನಿವಾರ ನಡೆದಿದೆ. ಈ ವೇಳೆ ಯುವಕರು ಧ್ವಜ ಹಿಡಿದಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ.
The controversy surrounding the Palestinian flag, which has caused a stir in several parts of the state, has now reached Belagavi. On Saturday, September 21, an incident occurred where a pandal resembling the Palestinian flag was erected.
23-02-25 06:38 pm
Bangalore Correspondent
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
Bidar accident, Prayagraj, five killed; ಬೀದರ್...
21-02-25 02:00 pm
23-02-25 11:22 pm
HK News Desk
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
Kerala school teacher suicide, catholic Churc...
22-02-25 03:53 pm
23-02-25 03:20 pm
Mangalore Correspondent
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
Thumbay Group, Fergana College, Uzbekistan: ಉ...
21-02-25 07:54 pm
23-02-25 03:42 pm
HK News Desk
Visa fraud, Bangalore crime, Arrest: ವಿದೇಶಿ ವ...
22-02-25 10:36 pm
Ankola Car Robbery, Rajendra Pawar, Gold Smug...
20-02-25 01:22 pm
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm