Kumaraswamy, IGP IPS Chandrashekhar: ಲೋಕಾಯುಕ್ತ ಐಜಿಪಿ ಚಂದ್ರಶೇಖರ್, ಖಾಸಗಿ ಚಾನೆಲ್ ಎಂಡಿ ವಿಜಯ್ ಟಾಟಾ ಅಕ್ರಮ ಕೂಟ ; ಪಿಎಸಿಎಲ್ ನಿಂದ ನೂರು ಕೋಟಿ ಪಡೆದು, ಎಲ್ಲೆಲ್ಲಿ ಹಣ ಹೂಡಿದ್ದಾರೆ ಅಂತನೂ ಗೊತ್ತು! ಕುಮಾರಸ್ವಾಮಿ ಕಿಡಿ 

28-09-24 11:22 pm       Bangalore Correspondent   ಕರ್ನಾಟಕ

ಲೋಕಾಯುಕ್ತ ಐಜಿಪಿ ಎಂ.ಚಂದ್ರಶೇಖರ್ ಅವರು ಖಾಸಗಿ ಚಾನೆಲ್ ಎಂಡಿಯಾಗಿದ್ದ ವಿಜಯ್ ಟಾಟಾ ಜೊತೆಗೆ ಸೇರಿ ಭಾರೀ ಅಕ್ರಮ ಮಾಡಿದ್ದಾಗಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು, ಸೆ.28: ಲೋಕಾಯುಕ್ತ ಐಜಿಪಿ ಎಂ.ಚಂದ್ರಶೇಖರ್ ಅವರು ಖಾಸಗಿ ಚಾನೆಲ್ ಎಂಡಿಯಾಗಿದ್ದ ವಿಜಯ್ ಟಾಟಾ ಜೊತೆಗೆ ಸೇರಿ ಭಾರೀ ಅಕ್ರಮ ಮಾಡಿದ್ದಾಗಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಪಕ್ಷದ ರಾಜ್ಯ ಕಚೇರಿಯಲ್ಲಿ ದಾಖಲೆ ಸಹಿತ ಮಾತನಾಡಿದ ಕುಮಾರಸ್ವಾಮಿ, ಅಧಿಕಾರಿ ಅಕ್ರಮಗಳ ಬಗ್ಗೆ ಮಾಹಿತಿ ಬಿಚ್ಚಿಟ್ಟು ಈತನೇನು ಸಾಚಾನಾ ಎಂದು ಪ್ರಶ್ನೆ ಮಾಡಿದ್ದಾರೆ. 

ಹಿಮಾಚಲ ಪ್ರದೇಶ ಮೂಲದ ಈ ಚಂದ್ರಶೇಖರ್ ಸಾಧನೆ ಏನು? ಪೊಲೀಸ್ ಇಲಾಖೆಯಲ್ಲಿ ದರೋಡೆಕೋರರು ಇದ್ದಾರೆ ಎಂದು ಮೊದಲೇ ಹೇಳಿದ್ದೆ. ಇಂಥವರನ್ನೇ ಮುಂದಿಟ್ಟು ಆ ಮಾತು ಹೇಳಿದ್ದೆ. ದೆಹಲಿಯಲ್ಲಿ PACL ಎಂಬ ಕಂಪನಿ ಇದೆ. ಭೂಮಿ ಖರೀದಿಸಿ ಲ್ಯಾಂಡ್ ಬ್ಯಾಂಕ್ ಮಾಡುವ ಕೆಲಸ ಇದು ಮಾಡುತ್ತದೆ. ಎರಡು ಲಕ್ಷ ಕೋಟಿ ಆಸ್ತಿಯನ್ನು ಕಂಪನಿ ಹೊಂದಿತ್ತು. 2013ರಲ್ಲಿ ಚಾನೆಲ್ ಓನರ್ ವಿಜಯ್ ಟಾಟಾ,  ಶಿವಕುಮಾರ್ ಎಂಬ ವ್ಯಕ್ತಿಯ ಬಳಿ 50 ಸಾವಿರ ರೂ. ಪಿಎಸಿಎಲ್ ಕಂಪನಿಗೆ ಡಿಪಾಸಿಟ್ ಹಾಕಿಸಿದ್ದ. ಆಗಸ್ಟ್ 7ರಂದು ಡಿಪಾಸಿಟ್ ಮಾಡಿ, ಮರುದಿನ ಅದೇ ವ್ಯಕ್ತಿಯಿಂದ ಕಂಪನಿ ವಿರುದ್ಧ ದೂರು ಕೊಡಿಸಿದ್ದ.‌ ಆಗ ಸಿಸಿಬಿಯಲ್ಲಿ ಇದೇ ಚಂದ್ರಶೇಖರ್ ಇದ್ದಿರಬೇಕು. ಸಂಜೆ ನಾಲ್ಕು ಗಂಟೆಗೆ ಕೇಸು ಆಗಿದ್ದರೆ, ರಾತ್ರಿ ಎಂಟು ಗಂಟೆಗೆ ನಾಲ್ವರು ಪೊಲೀಸರು ದೆಹಲಿಗೆ ಫ್ಲೈಟಲ್ಲಿ ಹೋಗಿದ್ದರು. ಪಿಎಸಿಎಲ್ ಕಂಪನಿಯ ಡೈರೆಕ್ಟರ್ ಮುಂದೆ ನಿಂತಿದ್ದರು. ಪ್ರಕರಣದಲ್ಲಿ ಎಂಟ್ರಿಯಾಗಿದ್ದ ವಿಜಯ್ ಟಾಟಾ, ಪೊಲೀಸ್ ಕೇಸನ್ನು ನೋಡಿಕೊಳ್ತೇವೆ, ನೂರು ಕೋಟಿ ಕೊಡಿ ಎಂದು ಡೀಲ್ ಮಾಡ್ಕಂಡಿದ್ದ. 80 ಕೋಟಿ ಕ್ಯಾಶ್, 21 ಕೋಟಿ ಚೆಕ್ಕಲ್ಲಿ ತಗೊಂಡುಬಂದಿದ್ದ ಟಾಟಾ ಅಂಡ್ ಟೀಮ್, ಚಂದ್ರಶೇಖರ್ ಆದಿಯಾಗಿ ಹಂಚಿಕೊಂಡಿದ್ದರು. 

ಆನಂತರ, ಆತನ ಖಾಸಗಿ ವಾಹಿನಿ ಮುಚ್ಚಿ ಹೋಯಿತು, ಈಗ ಮತ್ತೊಂದು ಖಾಸಗಿ ಚಾನಲ್‌ ಇಟ್ಟಿಕೊಂಡು ಫೋರ್ಜರಿ ಮಾಡ್ತಿದಾನೆ. ಆ ಇಡೀ ಹಗರಣಕ್ಕೆ ಈ ಚಂದ್ರಶೇಖರ ಗಾಡ್ ಫಾದರ್! 2023 ಫೆಬ್ರವರಿಯಲ್ಲಿ ಅಂದಿನ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೂ ಈ ಬಗ್ಗೆ ದೂರು ಕೊಡಲಾಗುತ್ತದೆ. ಹಣ ವಾಪಸ್ ಪಡೆದುಕೊಳ್ಳಲು ಸಮಿತಿ ಮಾಡಲಾಗುತ್ತದೆ. ಆದರೆ ಕೇಸಿನ ತನಿಖೆಯೇ ಆಗದಂತೆ ಪೊಲೀಸರು ನೋಡಿಕೊಂಡಿದ್ದಾರೆ. ಎಲ್ಲಾ ಕಡೆ ಪೋರ್ಜರಿ ಮಾಡಿರುವ ವಿಜಯ್ ಟಾಟಾ ಮೇಲೆ ಎರಡೂವರೆ ಸಾವಿರ ಎಫ್ಐಆರ್ ದಾಖಲಾಗಿವೆ. ಈವರೆಗೆ ಒಂದು ಎಫ್ಐಆರ್ ಮೇಲೆಯೂ ಕ್ರಮ ಆಗಿಲ್ಲ. 

ಹಿಂದೆ ಶ್ರೀಧರ್ ಎಂಬ ರೌಡಿ ಇದ್ದ. ಅವನು ಮತ್ತು ವಿಜಯ್ ಟಾಟಾ ಏನೇನು‌ ಆಟ ಆಡಿದರು ಎನ್ನುವುದು ಅಧಿಕಾರಿ ಚಂದ್ರಶೇಖರ್ ಗೆ ಚೆನ್ನಾಗಿ ಗೊತ್ತಿದೆ. ಶ್ರೀಧರ್ ನ ಮತ್ತೆ ಜೈಲಿಗೆ ಕಳುಹಿಸಲು ಇವರು ಪ್ರಯತ್ನ ಮಾಡಿದ್ದರು. ಎಚ್ಚೆತ್ತ ಶ್ರೀಧರ್ ಇದೇ ವಿಜಯ್ ಟಾಟ ವಿರುದ್ಧ ದೂರು ದಾಖಲು ಮಾಡುತ್ತಾನೆ. ವಿಜಯ್ ಆರೋಪ ಪಟ್ಟಿಯಲ್ಲಿ ಮೊದಲ ಆರೋಪಿ ಆಗುತ್ತಾನೆ ಎಂದು ಕುಮಾರಸ್ವಾಮಿ ಹೇಳಿದರು. 

ಅಧಿಕಾರಿ ಚಂದ್ರಶೇಖರ್ ಗೆ ಐಜಿ ಕೆಲಸ ಕೊಟ್ಟಿದ್ದು ಇಂಥ ನಟೋರಿಯಸ್ ಕೆಲಸ ಮಾಡೋದಕ್ಕಾ? ಕೇಸ್ ನಡೆಸಿ ಅಂದ್ರೆ ಸ್ಟೇ ತೆಗೆದುಕೊಂಡಿದ್ದಾರೆ. ಕಿಶೋರ್ ಎಂಬ ಇನ್ಸ್‌ಪೆಕ್ಟರ್ ಒಬ್ಬರನ್ನು ಸಹ ಇವರು ಬ್ಲಾಕ್ ಮೇಲ್ ಮಾಡುತ್ತಾರೆ. ಆಗ 20 ಕೋಟಿ ಹಣವನ್ನು ಚಂದ್ರಶೇಖರ್ ಡಿಮ್ಯಾಂಡ್ ಮಾಡುತ್ತಾರೆ. ಸಂಜೆಯೊಳಗೆ 2 ಕೋಟಿ‌ ಕೊಡಬೇಕು ಎಂದು ಧಮ್ಕಿ ಹಾಕುತ್ತಾರೆ. ಇಂಥ ಅಧಿಕಾರಿ ರಾಜ್ಯಪಾಲರ ಸಿಬ್ಬಂದಿ ತನಿಖೆಗೆ ಅನುಮತಿ ಕೇಳುತ್ತಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಪಾಲರ ಕಚೇರಿ ಅಂದ್ರೆ ಏನು ಅನ್ಕೊಂಡಿದಾರೆ. ಅದು ರೌಡಿಗಳಿಗೆ ನೋಟಿಸ್ ಕೊಟ್ಟಂತೆಯೇ.. ರಾಜ್ಯಪಾಲರ ಕಚೇರಿಯಿಂದ ಮಾಹಿತಿ ಸೋರಿಕೆಯಾಗಿದೆ, ಸಿಬಂದಿ ವಿಚಾರಣೆಗೆ ಅನುಮತಿ ಕೊಡಿ ಎನ್ನಲು ಈ ಅಧಿಕಾರಿ ಯಾರು..? ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

Union Minister for Heavy Industries and Steel, H.D. Kumaraswamy on Saturday alleged that a corrupt senior IPS officer, who has committed multiple crimes, has sought permission to investigate the staff of the Governor’s office. “The Lokayukta’s SIT IGP, M. Chandrashekhar, is the corrupt officer, and the state government is conducting investigations using such rogue officers,” Kumaraswamy said during a media interaction at JP Bhavan, the JD-S state office.