ಬ್ರೇಕಿಂಗ್ ನ್ಯೂಸ್
16-07-25 11:47 am HK News Desk ಕರ್ನಾಟಕ
ಮಂಡ್ಯ, ಜುಲೈ 16 : ಕಾವೇರಿ ಆರತಿ ಇದೊಂದು ದುಡ್ಡು ಹೊಡೆಯುವ ಸ್ಕೀಮ್. 100% ಮೌಢ್ಯಾಚರಣೆ, ಇದು ತಪ್ಪು ನಡೆಯಾಗಿದ್ದು ಮುಂದೆ ನೀವೇ ಅನುಭವಿಸ್ತೀರಿ.. ಹೀಗೆಂದು ರಾಜ್ಯ ಸರ್ಕಾರಕ್ಕೆ ಮಾಜಿ ಶಾಸಕ ಡಾ.ಕೆ.ಅನ್ನದಾನಿ ನೇರ ಎಚ್ಚರಿಕೆ ಕೊಟ್ಟಿದ್ದಾರೆ.
ಮಂಡ್ಯದಲ್ಲಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಹೇಳಿಕೆ ನೀಡಿದ್ದು KRS ನಲ್ಲಿ ಕಾವೇರಿ ಆರತಿ ಮಾಡುವುದಕ್ಕೆ ನನ್ನ ವಿರೋಧ ಇದೆ, ಅದರ ಅವಶ್ಯಕತೆ ಇಲ್ಲ. ಕಾವೇರಿ ಆರತಿ ಎನ್ನುವುದು ದುಡ್ಡು ಹೊಡೆಯುವ ಸ್ಕೀಮ್. ಸಾಹಿತ್ಯ ಸಮ್ಮೇಳನದ ರೀತಿ ದುಡ್ಡು ಹೊಡೆಯುವ ಸ್ಕೀಮ್. ಲೂಟಿ ಮಾಡುವ ಕಾರ್ಯಕ್ರಮ ಎಂದು ಹೇಳಿದ್ದಾರೆ.
ರೈತ ಸಂಘಟನೆ ಈಗಾಗಲೇ ಆರತಿ ಕಾರ್ಯಕ್ರಮವನ್ನು ವಿರೋಧ ಮಾಡಿದೆ. ನಾನು ಕೂಡ ವಿರೋಧ ಮಾಡ್ತೇನೆ. ಯಾವುದೇ ಕಾರಣಕ್ಕೂ ಕಾವೇರಿ ಆರತಿ ಮಾಡಬಾರದು. ಕಾವೇರಿ ಆರತಿ ಮಾಡುವ ಬದಲು ಡ್ಯಾಂ ರಕ್ಷಣೆ ಮಾಡಿ. ಕರ್ಪೂರ ಬೆಳಗಿ ಆರತಿ ಮಾಡಿದ್ರೆ ಕನ್ನಂಬಾಡಿ ಕಟ್ಟೆ ರಕ್ಷಣೆ ಮಾಡಕ್ಕಾಗಲ್ಲ. ಕನ್ನಂಬಾಡಿ ಕಟ್ಟೆ ಮೇಲೆ ಆಸಕ್ತಿ ಇದ್ರೆ ಉಳಿಸಿ. ಡ್ಯಾಂ ಸಮಸ್ಯೆ ಸರಿಪಡಿಸಿ, ಕಾಲುವೆ ಸರಿಪಡಿಸಿ. ರೈತರ ಜಮೀನಿಗೆ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ರೈತರು ಸಮೃದ್ಧವಾಗಿದ್ರೆ ಅದೇ ಕಾವೇರಿ ಆರತಿ.
ಕಡ್ಡಿ, ಕರ್ಪೂರ, ಕಾಯಿ ಹೊಡೆಯುವುದು ಕಾವೇರಿ ಆರತಿ ಅಲ್ಲ, ಕಾವೇರಿ ರಕ್ಷಣೆಯೂ ಅಲ್ಲ. ಕಾವೇರಿ ನದಿ ಶುದ್ದೀಕರಿಸಿ, ಕಟ್ಟೆ ರಕ್ಷಣೆ ಮಾಡಲು ಆರತಿಗೆ ಬಳಸುವ 92 ಕೋಟಿಯನ್ನು ಖರ್ಚು ಮಾಡಿ. ಆರತಿ ಎತ್ತಿ ಹಣ ಲೂಟಿ ಮಾಡುವುದಕ್ಕೆ ನಮ್ಮ ವಿರೋಧ ಇದೆ. ಯಾವ ಆರತಿನೂ ಬೇಡ. ಅನಾವಶ್ಯಕ ಕಾರ್ಯಕ್ರಮಕ್ಕೆ ವಿರೋಧ ಮಾಡ್ತೇನೆ. ರೈತರಿಗೆ ಸರಿಯಾಗಿ ನೀರು ಕೊಡುವ ಕೆಲಸ ಮಾಡಿ. 100 % ಮೌಢ್ಯಾಚರಣೆ, ಈ ಕಲ್ಪನೆಯಿಂದ ದೂರವಿರಬೇಕು. ಇದಕ್ಕೆ ಯಾರು ಕೂಡ ಬೆಂಬಲ ಕೊಡಬಾರದು ಇದು ತಪ್ಪು. ಈ ರೀತಿ ದುಡ್ಡು ಅಪವ್ಯಯ ಮಾಡಿದತೆ ಮುಂದಿನ ದಿನಗಳಲ್ಲಿ ನೀವೇ ಅನುಭವಿಸುತ್ತೀರಿ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಜೆಡಿಎಸ್ ಪಕ್ಷದ ಮಾಜಿ ಶಾಸಕ ಡಾ.ಅನ್ನದಾನಿ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಕಾವೇರಿ ಆರತಿ ಕಾರ್ಯಕ್ರಮ ನೆಪದಲ್ಲಿ ನೀರಾವರಿ ಸಚಿವ ಡಿಕೆ ಶಿವಕುಮಾರ್ ನೂರು ಕೋಟಿ ಅನುದಾನ ಮಂಜೂರು ಮಾಡಿಸಿದ್ದು ಗಂಗಾರತಿ ರೀತಿ ಕಾವೇರಿ ಆರತಿ ಎತ್ತಲು ಮುತುವರ್ಜಿ ವಹಿಸಿದ್ದಾರೆ.
Former JDS MLA Dr. K. Annadani has strongly opposed the proposed Cauvery Aarti program at KRS Dam, calling it a “money-making scheme” and a “100% superstitious ritual” that misuses public funds. He has urged the Karnataka government to focus instead on dam safety and ensuring water reaches farmers’ fields.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 11:00 pm
Mangalore Correspondent
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm