ಬ್ರೇಕಿಂಗ್ ನ್ಯೂಸ್
16-07-25 07:05 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 16 : ಸರಣಿ ವೈದ್ಯಕೀಯ ಸಂಶೋಧನೆಗಳ ಬಳಿಕ ಕೋವಿಡ್ 19 ಸೋಂಕು ಮತ್ತು ಕೋವಿಡ್ ಲಸಿಕೆಯಿಂದ ಮನುಷ್ಯನ ನರಮಂಡಲದಲ್ಲಿ ವ್ಯತ್ಯಾಸಗಳಾಗಿರುವುದು ಮತ್ತು ಮೆದುಳಿನ ಮೇಲೆ ನೇರ ಪರಿಣಾಮ ಆಗಿರುವುದು ಪತ್ತೆಯಾಗಿದೆ ಎಂದು ನಿಮ್ಹಾನ್ಸ್ ವೈದ್ಯರ ಸಂಶೋಧನಾ ವರದಿ ಹೇಳಿದೆ.
ಬೆಂಗಳೂರಿನ ನ್ಯಾಶನಲ್ ಇನ್ಸ್ ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋಸೈನ್ಸಸ್ (ನಿಮ್ಹಾನ್ಸ್) ಸಂಸ್ಥೆಯ ನರರೋಗ ತಜ್ಞೆ, ಪ್ರೊಫೆಸರ್ ಡಾ.ನೇತ್ರಾವತಿ ಎಂ. ನೇತೃತ್ವದಲ್ಲಿ ನಡೆಸಿರುವ ಅಧ್ಯಯನದಲ್ಲಿ ಈ ಮಾಹಿತಿ ಹೊರಬಿದ್ದಿದೆ. ಕೋವಿಡ್ ಸೋಂಕಿನ ಮೊದಲ ಅಲೆ ಮತ್ತು ಆನಂತರ ನೀಡಲಾಗಿದ್ದ ಕೋವಿಡ್ ಲಸಿಕೆಯಿಂದ ನರಮಂಡಲಕ್ಕೆ ಯಾವ ರೀತಿಯ ಪರಿಣಾಮಗಳನ್ನು ಬೀರಿದೆ ಎನ್ನುವ ಬಗ್ಗೆ ಅಧ್ಯಯನ ಕೈಗೊಳ್ಳಲಾಗಿತ್ತು.
ನಿಮ್ಹಾನ್ಸ್ ನಲ್ಲಿ 2020ರ ಮಾರ್ಚ್ ಮತ್ತು ಸೆಪ್ಟಂಬರ್ ಮಧ್ಯೆ ದಾಖಲಾಗಿದ್ದ 3200 ನರರೋಗಿ ಸಂಬಂಧಿತ ರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಈ ಪೈಕಿ 120 ಮಂದಿ ಕೋವಿಡ್ ಸೋಂಕಿಗೆ ಒಳಗಾದವರಿದ್ದರಲ್ಲದೆ ನರ ಸಂಬಂಧೀ ಸಮಸ್ಯೆಗಳನ್ನು ಅನುಭವಿಸಿದ್ದರು. ಇವರಲ್ಲಿ ಮೂರರಿಂದ 84 ವರ್ಷದ ಒಳಗಿನವರಿದ್ದು, ಸರಾಸರಿ 49 ವಯಸ್ಸಿನವರು ಹೆಚ್ಚಿದ್ದರು. ಹೆಚ್ಚಿನ ರೋಗಿಗಳು ತೀವ್ರ ಜ್ವರದ ಜೊತೆಗೆ ಪ್ರಜ್ಞೆ ತಪ್ಪುವುದು(47 ಶೇ), ಅನ್ಸೋಮಿಯಾ(14.2 ಶೇ.), ಸೀಜರ್ಸ್ (21 ಶೇ.) ರೀತಿಯ ಲಕ್ಷಣಗಳನ್ನು ಹೊಂದಿದ್ದರು. ಕೋವಿಡ್ ವೈರಸ್ ಸೋಂಕಿನಿಂದಾಗಿ ನೇರವಾಗಿ ನರವ್ಯೂಹಕ್ಕೆ ಸಮಸ್ಯೆ ಆಗಿರುವುದನ್ನು ವೈದ್ಯರು ಪತ್ತೆ ಮಾಡಿದ್ದಾರೆ.
ಇದಲ್ಲದೆ, ಕೋವಿಡ್ ಸೋಂಕಿತರು ಮತ್ತು ಕೋವಿಡ್ ಸೋಂಕಿಗೆ ಒಳಗಾದವರಲ್ಲಿ ನರ ಸಂಬಂಧೀ ಸಮಸ್ಯೆಗಳಿರುವುದನ್ನು ಪತ್ತೆ ಮಾಡಲಾಗಿದ್ದು, ಸೋಂಕಿನಿಂದ ಚೇತರಿಕೆ ಆಗಿಬಂದವರಿಗೂ ದೀರ್ಘ ಕಾಲದ ನಿಗಾ ವಹಿಸುವ ಅಗತ್ಯವಿದೆ ಎಂದೂ ವೈದ್ಯರು ಸೂಚಿಸಿದ್ದಾರೆ. 2021ರ ಮೇ ತಿಂಗಳಿನಿಂದ ಡಿಸೆಂಬರ್ ವರೆಗೆ ಕೋವಿಡ್ ಲಸಿಕೆ ಪಡೆದ 42 ದಿನಗಳ ಬಳಿಕ ನರ ರೋಗ ಸಮಸ್ಯೆಗೆ ಒಳಗಾಗಿ ನಿಮ್ಹಾನ್ಸ್ ದಾಖಲಾದ 116 ಮಂದಿಯನ್ನೂ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಈ ಪೈಕಿ 29 ಮಂದಿಗೆ ವ್ಯಾಕ್ಸಿನ್ ನೀಡಿದ ಬಳಿಕ ಇಮ್ಯುನ್ ಸಿಸ್ಟಮ್ ತೊಂದರೆಗೀಡಾಗಿ ನರರೋಗ ಸಮಸ್ಯೆ ಬಂದಿರುವುದು ಕಂಡುಬಂದಿದೆ. ಇದರಲ್ಲಿ 27 ಕೋವಿಶೀಲ್ಡ್ ಲಸಿಕೆ ಪಡೆದವರಾಗಿದ್ದರೆ, ಇಬ್ಬರು ಕೋವ್ಯಾಕ್ಸಿನ್ ಲಸಿಕೆ ಪಡೆದವರಿದ್ದರು. ಇವರಿಗೆ ಮೊದಲ ಡೋಸ್ ಪಡೆದ 16 ದಿನಗಳ ಬಳಿಕ ತೊಂದರೆ ಎದುರಾಗಿತ್ತು. ಆದರೂ ಸಾರ್ವತ್ರಿಕವಾಗಿ ನೋಡಿದರೆ ಕೋವಿಡ್ ಸೋಂಕು ಮತ್ತು ಲಸಿಕೆಯಿಂದಾಗಿ ನರರೋಗ ಸಮಸ್ಯೆಗೀಡಾದವರ ಸಂಖ್ಯೆ ತೀರಾ ಅತ್ಯಲ್ಪ ಎಂದೂ ವರದಿಯಲ್ಲಿ ವೈದ್ಯರು ತಿಳಿಸಿದ್ದಾರೆ.
ದೀರ್ಘ ಕೋವಿಡ್ ಪರಿಣಾಮಗಳ ಬಗ್ಗೆಯೂ ಅಧ್ಯಯನ ವರದಿಯಲ್ಲಿ ಹೇಳಲಾಗಿದ್ದು, ಕೆಲವರಲ್ಲಿ ನಡವಳಿಕೆಯಲ್ಲಿ ವ್ಯತ್ಯಾಸ ಆಗಿರುವುದು ಕಂಡುಬಂದಿದೆ. ಆತಂಕ, ನಿರಾಸಕ್ತಿ, ನೆನಪಿನ ಶಕ್ತಿ ಕುಂದುವುದು, ಮೂಡ್ ಬದಲಾವಣೆ ಆಗುವುದು ಇತ್ಯಾದಿ ಲಕ್ಷಣಗಳು ಲಾಂಗ್ ಕೋವಿಡ್ ನಿಂದ ಆಗಿರುವುದು ಪತ್ತೆಯಾಗಿದೆ. ಈ ರೀತಿಯ ಲಕ್ಷಣಗಳು ಅದರಲ್ಲೂ ನರ ರೋಗ ಸಂಬಂಧಿ ಸಮಸ್ಯೆಗೀಡಾದವರಲ್ಲಿ ಹೆಚ್ಚಿವೆ. ಈ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ನರ ರೋಗ ಮತ್ತು ಇನ್ನಿತರ ವೈದ್ಯಕೀಯ ದಾಖಲೆಗಳನ್ನು ತಾಳೆ ಹಾಕಬೇಕಾಗುತ್ತದೆ ಎಂದೂ ವರದಿ ಹೇಳಿದೆ.
A recent study by doctors at NIMHANS (National Institute of Mental Health and Neurosciences), Bengaluru, has revealed that both COVID-19 infection and its vaccines have shown measurable effects on the human nervous system and the brain — even long after recovery from the illness.
16-07-25 09:36 pm
HK News Desk
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
16-07-25 10:52 pm
Mangalore Correspondent
ಕೆಂಪು ಕಲ್ಲು, ಮರಳು ಸಮಸ್ಯೆಗೆ ಕಾಂಗ್ರೆಸ್ ಸರ್ಕಾರದ...
16-07-25 01:01 pm
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
16-07-25 11:04 pm
Mangalore Correspondent
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm