ಬ್ರೇಕಿಂಗ್ ನ್ಯೂಸ್
09-08-25 10:12 pm Bangalore Correspondent ಕರ್ನಾಟಕ
ಬೆಂಗಳೂರು, ಆ.9 : ಆ ಹುಡುಗನಿಗೆ ಅದ್ಯಾವುದೇ ಹುಚ್ಚುತನ ಇರಲಿಲ್ಲ. ಶಾಲೆಯಲ್ಲಾಗಲೀ, ಮನೆಯಲ್ಲಾಗಲೀ ಒರಟುತನ, ಒಂಟಿತನ, ಕಿರುಕುಳದ ಸಮಸ್ಯೆ ಅನುಭವಿಸಿರಲಿಲ್ಲ. ತಾನಾಯ್ತು ತನ್ನ ಪಾಡಾಯ್ತು ಎನ್ನುವಂತಿದ್ದ ಏಳನೇ ಕ್ಲಾಸ್ ಕಲಿಯುತ್ತಿದ್ದ 14ರ ಹರೆಯದ ಹುಡುಗ ದಿಢೀರ್ ಎನ್ನುವಂತೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಸಾಯೋದಕ್ಕೂ ಮುನ್ನ ಸುಂದರವಾದ ಅಕ್ಷರಗಳಲ್ಲಿ ಪೋಣಿಸಿಟ್ಟಂತೆ ಡೆತ್ ನೋಟ್ ಬರೆದಿಟ್ಟಿದ್ದ. ತಂದೆ, ತಾಯಿ, ಗೆಳೆಯರು, ಸಂಬಂಧಿಕರನ್ನು ಉದ್ದೇಶಿಸಿ ನನ್ನ ಈ ನಿರ್ಧಾರದಿಂದ ಯಾರೂ ಕೂಡ ಅಳಬೇಡಿ, ನೀವು ಈ ಪತ್ರ ಓದುವಾಗ ನಾನು ಸ್ವರ್ಗದಲ್ಲಿರುತ್ತೇನೆ ಎಂದು ಪತ್ರ ಬರೆದಿದ್ದ.
ಸಾಮಾನ್ಯವಾಗಿ ಸಾಯೋಕೆ ಹೊರಟವರು ಡೆತ್ ನೋಟ್ ಬರೆದರೂ ಗೀಚಿ ಬಿಡುತ್ತಾರೆ, ತನ್ನ ಸಾವಿಗೆ ಇಂಥವರೇ ಕಾರಣ ಎಂದು ಹೇಳಿಯೋ, ತನ್ನ ದುಃಖಕ್ಕೆ ಕಾರಣ ಏನು ಅನ್ನೋದನ್ನು ಬರೆದಿಟ್ಟು ಸಾಯುತ್ತಾರೆ. ಆದರೆ ಈ ಹುಡುಗನ ಪತ್ರದಲ್ಲಿ ಅಂಥದ್ದೇನೂ ಇರಲಿಲ್ಲ. ಏಳನೇ ಕ್ಲಾಸಲ್ಲಿದ್ದರೂ ತುಂಬ ಪ್ರಬುದ್ಧ ರೀತಿಯಲ್ಲಿ ತನ್ನ ಸಾವಿನ ಪತ್ರವನ್ನು ಬರೆದಿಟ್ಟಿದ್ದ. ಪತ್ರದ ಉದ್ದಕ್ಕೂ ಪ್ರೀತಿ ಸುರಿಸಿದ್ದಾನೆ. ತಂದೆ, ತಾಯಂದಿರನ್ನು ಸಮಾಧಾನಿಸಿದ್ದಾನೆ. ಗೆಳೆಯರನ್ನು ಉದ್ದೇಶಿಸಿ ನೀವೆಲ್ಲ ನನ್ನ ಸಾವು ಕೇಳಿ ಶಾಕ್ ಆಗಬಹುದಲ್ವಾ, ಆದರೆ ನಾನು ಸ್ವರ್ಗಕ್ಕೆ ತಲುಪಿದ್ದೇನೆ. ನೀವು ಬೇಸರ ಮಾಡ್ಕೋಬೇಡಿ. 14 ವರ್ಷ ಜೀವನ ಮಾಡಿ ಸಂತೋಷದಿಂದಲೇ ವಿರಮಿಸುತ್ತಿದ್ದೇನೆ ಎಂದು ಹೇಳಿ ಅತ್ಯಂತ ಉತ್ಸಾಹ ತೋರಿದ್ದಾನೆ. ಹುಡುಗ ಪತ್ರವನ್ನು ಬರೆದಿಟ್ಟ ರೀತಿಯೇ ಎಲ್ಲರನ್ನೂ ದಂಗುಬಡಿಸಿತ್ತು.

ಗಿಟಾರ್ ಗೆ ಹೊದಿಕೆ ಹೊದಿಸಿ ನೇಣು
ಬೆಂಗಳೂರು ನಗರದ ಸಿ.ಕೆ. ಅಚ್ಚುಕಟ್ಟು ಪ್ರದೇಶದ ಗಾಂಧಾರ್ ಎನ್ನುವ ಹುಡುಗ ಆಗಸ್ಟ್ 5ರಂದು ರಾತ್ರಿ ತನ್ನ ಮನೆಯಲ್ಲೇ ನೇಣು ಬಿಗಿದು ಸಾವಿಗೆ ಶರಣಾಗಿದ್ದ. ತಂದೆ- ತಾಯಿ ಸಂಗೀತವನ್ನೇ ಉಸಿರಾಗಿಸಿಕೊಂಡಿದ್ದ ಸುಸಂಸ್ಕೃತ ಕುಟುಂಬದವರು. ತಂದೆ ಸಂಗೀತಗಾರ ಗಣೇಶ್ ಪ್ರಸಾದ್- ತಾಯಿ ಸವಿತಾ ಜನಪದ ಗಾಯಕಿ. ಎರಡು ದಿನದ ಹಿಂದಷ್ಟೇ ತಾಯಿ ಗಾಯನ ಕಛೇರಿಗೆಂದು ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಮನೆಯವರನ್ನೆಲ್ಲ ಸಲಹಬೇಕೆಂದು ಆ ತಾಯಿ ಗಾಯನಕ್ಕಾಗಿ ವಿದೇಶಕ್ಕೆ ಹೋಗಿದ್ದರೆ, ಈ ಮಗು ದುರಂತ ಸಾವನ್ನೇ ತಂದುಕೊಂಡಿತ್ತು. ತನ್ನ ಗಿಟಾರ್ ಯಂತ್ರವನ್ನು ತಾನು ಮಲಗುತ್ತಿದ್ದ ಬೆಡ್ ನಲ್ಲಿರಿಸಿ ಅದಕ್ಕೆ ಹೊದಿಕೆ ಅಲ್ಲಿಯೇ ಕಿಟಕಿಯಲ್ಲಿ ತಾನು ಸಾವಿಗೀಡಾಗಿದ್ದ. ಪಕ್ಕದಲ್ಲೇ ಅಣ್ಣ ಮಲಗಿದ್ದರೂ ಆತನಿಗ್ಯಾವುದೇ ಸುಳಿವೂ ಸಿಕ್ಕಿರಲಿಲ್ಲ. ಯಾವೊಂದು ಸುಳಿವನ್ನೂ ಕೊಡದೆ ಮಗು ಸಾವಿಗೆ ಶರಣಾಗಿದ್ದು ಕುಟಂಬ ಸದಸ್ಯರು, ಆಸುಪಾಸಿನವರಿಗೆ ಶಾಕ್ ನೀಡಿತ್ತು.

ಹುಡುಗನ ಡ್ರಾಯಿಂಗ್ ಹೇಳಿತ್ತು ಕತೆ
ಕೇಸು ದಾಖಲಿಸಿದ ಪೊಲೀಸರಿಗೂ ಆಘಾತ, ಅಚ್ಚರಿ ಉಂಟಾಗಿತ್ತು. ಯಾಕಂದ್ರೆ, ಯಾವೊಂದು ಸಮಸ್ಯೆಯೂ ಇಲ್ಲದೆ ಹುಡುಗ ತನ್ನ ಸಾವನ್ನು ತಂದುಕೊಂಡಿದ್ದಾನೆ ಅಂದ್ರೆ ಅವರಿಗೂ ನಂಬಲು ಆಗಿರಲಿಲ್ಲ. ಕೊನೆಗೆ, ಆತ ಬರೆದಿಟ್ಟ ಡೆತ್ ನೋಟ್ ನೋಡಿಯೇ ಪೊಲೀಸರು ಮನೆ ಹುಡುಕಲು ಶುರು ಮಾಡಿದ್ದರು. ಮನೆಯ ಒಳಹೊಕ್ಕರೆ ಗಾಂಧಾರ್ ಮಲಗುತ್ತಿದ್ದ ಕೋಣೆಯಲ್ಲಿ ಮಾಡಿಟ್ಟಿದ್ದ ಡ್ರಾಯಿಂಗ್ ಕಣ್ಣಿಗೆ ಬಿದ್ದಿತ್ತು. ಕೊರಿಯನ್, ಜಪಾನೀಸ್ ಮುಖದ ಚರ್ಯೆ ಹೊಂದಿದ್ದ ತನ್ನದೇ ಪ್ರಾಯದ ಹುಡುಗರ ಬಗೆಗಿನ ಡ್ರಾಯಿಂಗ್ ಅದಾಗಿತ್ತು. ಆ ಪಿಕ್ಚರ್ ಏನಿದು, ಯಾರದ್ದಿರಬಹುದು ಎಂದು ಗೂಗಲ್ ಸರ್ಚ್ ಮಾಡಿದರೆ ಪೊಲೀಸರಿಗೆ ಡೆತ್ ನೋಟ್ ಎನ್ನುವ ಜಪಾನೀಸ್ ಕ್ರೈಮ್ ಸಿರೀಸ್ ತೋರಿಸಿತ್ತು. ಅದರ ಕತೆಯನ್ನೇ ಆಧರಿಸಿ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾನೆಯೇ ಎಂಬ ಶಂಕೆ ಮೂಡಿಸಿತ್ತು. ಇದರಂತೆ, ಗಾಂಧಾರ್ ನೋಡುತ್ತಿದ್ದ ಲ್ಯಾಪ್ಟಾಪ್ ಮತ್ತು ಬಳಸುತ್ತಿದ್ದ ಮೊಬೈಲನ್ನು ಪೊಲೀಸರು ಶೋಧನೆ ಮಾಡಿದ್ದಾರೆ. ಹುಡುಗ ತನ್ನ ಮನೆಯಲ್ಲಿ ಕುಳಿತು ನಿರಂತರವಾಗಿ ಕ್ರೈಮ್ ಸಿರೀಸ್ ನೋಡುವ ಗೀಳು ಹಚ್ಚಿಕೊಂಡಿದ್ದ ಎನ್ನೋದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.


ಏನಿದು ಡೆತ್ ನೋಟ್ ಕ್ರೈಮ್ ಸಿರೀಸ್ ?
ಡೆತ್ ನೋಟ್ ಎನ್ನುವ ಕ್ರೈಮ್ ಟಿವಿ ಸಿರೀಸ್ 2006ರಲ್ಲಿ ಜಪಾನಿಗರು ಮಾಡಿದ್ದ ಕಥಾನಕ. ಬುದ್ಧಿವಂತ ಹೈಸ್ಕೂಲ್ ಹುಡುಗನೊಬ್ಬ ಸಮಾಜದಲ್ಲಿ ನಡೆಯುವ ಭ್ರಷ್ಟಾಚಾರ, ಲಂಚಕೋರ, ರೌಡಿಗಳಿಗೆಲ್ಲ ಇತಿಶ್ರೀ ಹಾಕಬೇಕೆಂದು ಸೂಪರ್ ನೋಟ್ ಬುಕ್ ಒಂದನ್ನು ತಯಾರಿಸಿದ್ದ. ಆ ನೋಟ್ ಬುಕ್ ನಲ್ಲಿ ಒಬ್ಬನ ಹೆಸರು ಬರೆದ ಎಂದರೆ, ಅವರ ಕತೆ ಮುಗೀತು ಎನ್ನುವಷ್ಟರ ಮಟ್ಟಿಗೆ ವಿಚಿತ್ರ ನೋಟ್ ಬುಕ್ ಅದಾಗಿತ್ತು. ಆ ವ್ಯಕ್ತಿ ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಜಪಾನೀ ಸ್ಪೆಷಲ್ ಏಜಂಟ್ಗಳು ನುಗ್ಗಿ ಹೊಡೆಯುತ್ತಿದ್ದರು ಎನ್ನೋದು ಕತೆಯ ವನ್ ಲೈನ್ ಸ್ಟೋರಿ. ಇಡೀ ಜಗತ್ತನ್ನು ಕ್ರೈಮ್ ಫ್ರೀ ಮಾಡಬೇಕು ಎನ್ನುವ ಕಲ್ಪನೆ ಇಟ್ಟುಕೊಂಡು ಹೈಸ್ಕೂಲ್ ಹುಡುಗ ನೋಟ್ ಬುಕ್ ತಯಾರಿಸಿದ್ದ. ಅದಕ್ಕಾಗಿ ಆ ನೋಟ್ ಬುಕ್ ಗೆ ಡೆತ್ ನೋಟ್ ಎನ್ನುವ ಹೆಸರಿಟ್ಟಿದ್ದ. ಜಪಾನಿ ಕತೆಗಾರ ಬರೆದ ಈ ಕಾಲ್ಪನಿಕ ಕಥೆಯನ್ನೇ ಇಟ್ಟುಕೊಂಡು 37 ಸಿರೀಸ್ ಗಳನ್ನು ಮಾಡಲಾಗಿತ್ತು. 2006-07ರಲ್ಲಿ ರಿಲೀಸ್ ಆಗಿದ್ದ ಈ ಡೆತ್ ನೋಟ್ ಸಿರೀಸ್ ಭಾರೀ ಪ್ರಸಿದ್ಧಿ ಪಡೆದಿತ್ತು.


ದೆಹಲಿಯಲ್ಲೂ 10 ವರ್ಷದ ಹುಡುಗ ಸಾವು
ರಾಜಧಾನಿ ದೆಹಲಿಯಲ್ಲೂ ಇದೇ ರೀತಿ ಮೊಬೈಲ್ ಗೀಳು ಹಚ್ಚಿಕೊಂಡಿದ್ದ ಹುಡುಗನೊಬ್ಬ ಆಗಸ್ಟ್ 3ರಂದು ಆತ್ಮಹತ್ಯೆ ಮಾಡಿಕೊಂಡಿದ್ದ. ದೆಹಲಿಯ ಅಂಬಿಕಾ ವಿಹಾರ್ ಕಾಲನಿಯಲ್ಲಿ ವಾಸವಿದ್ದ ಹತ್ತು ವರ್ಷದ ಹುಡುಗ ಮನೆಯಲ್ಲೇ ಕಬ್ಬಿಣದ ಪೈಪ್ ಗೆ ನೇಣು ಬಿಗಿದು ಸಾವಿಗೆ ಶರಣಾಗಿದ್ದ. ಪೊಲೀಸರು ತನಿಖೆ ನಡೆಸಿದಾಗ, ಹುಡುಗ ಮೊಬೈಲ್ ಗೇಮ್ ಚಟವನ್ನು ಅತಿಯಾಗಿ ಅಂಟಿಸಿಕೊಂಡಿದ್ದು ಕಂಡುಬಂದಿತ್ತು. ದಿನಕ್ಕೆ 10-11 ಗಂಟೆ ಮೊಬೈಲಿನಲ್ಲೇ ಕಳೆಯುತ್ತಿದ್ದ. ಏಳು ಗಂಟೆ ಹೊತ್ತು ಗೇಮ್ ಆಡುತ್ತಿದ್ದರೆ, ನಾಲ್ಕು ಗಂಟೆ ಯೂಟ್ಯೂಬ್, ಇತರೇ ವಿಡಿಯೋಗಳನ್ನು ನೋಡಿ ಕಾಲ ಕಳೆಯುತ್ತಿದ್ದ. ಅಂದು ಭಾರೀ ಮಳೆ ಇದ್ದುದರಿಂದ ಶಾಲೆ ರಜೆ ಇತ್ತು. ಹಾಗಾಗಿ ಮಗುವನ್ನು ಬಿಟ್ಟು ತಂದೆ-ತಾಯಿ ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ಸಂಜೆ ಮನೆಗೆ ಮರಳಿದಾಗ, ಶಾಲನ್ನು ಕಬ್ಬಿಣದ ಪೈಪ್ ಗೆ ಕಟ್ಟಿ ನೇಣಿಗೆ ಶರಣಾಗಿದ್ದ. ಆತನ ಸಾವಿಗೂ ಕ್ರೈಮ್ ವೆಬ್ ಸಿರೀಸ್ ಕಾರಣವಾ, ಪಬ್ ಜಿಯಂಥ ವಿಡಿಯೋ ಗೇಮ್ ಕಾರಣವೇ ಗೊತ್ತಾಗಿಲ್ಲ.
In a deeply shocking incident, a 14-year-old Class 7 student from CK Achukattu, Bengaluru, died by suicide, leaving behind a neatly handwritten “death note” that has baffled police and family members alike. The boy, Gandhar, hailed from a cultured musical family — his father, Ganesh Prasad, is a musician, and his mother, Savitha, is a folk singer currently in Australia for a performance. On the night of August 5, Gandhar was found hanging
18-12-25 12:37 pm
HK News Desk
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು ; ಸದನಕ್ಕ...
17-12-25 10:30 pm
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
18-12-25 10:52 am
Mangalore Correspondent
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm