ಬ್ರೇಕಿಂಗ್ ನ್ಯೂಸ್
10-08-25 06:27 pm Bangalore Correspondent ಕರ್ನಾಟಕ
ಬೆಂಗಳೂರು, ಆ.10 : ಬೆಂಗಳೂರು ಮೆಟ್ರೋ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ನಡೆಯುವ ಯೋಜನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ. 50 ಅನುದಾನ ಕೊಟ್ಟು ಮಾಡುವಂತದ್ದು. ಆದರೆ ಇಂದು ಉದ್ಘಾಟನೆಗೊಂಡ ಯೋಜನೆಗೆ ರಾಜ್ಯ ಸರ್ಕಾರವೇ ಹೆಚ್ಚು ಖರ್ಚು ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ಮೋದಿ ಸಮ್ಮುಖದಲ್ಲೇ ಮಾತಿನ ದಾಳ ಎಸೆದಿದ್ದಾರೆ.
ಮೆಟ್ರೋ ಹಳದಿ ಮಾರ್ಗದ ಯೋಜನೆಗೆ ಚಾಲನೆ ಕೊಟ್ಟ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರವೇ ಹಣಕಾಸು ಹೆಚ್ಚು ನೀಡಿದ್ದು ಎಂದು ಪ್ರಧಾನಿ ಮೋದಿಗೆ ತಿರುಗೇಟು ನೀಡುವಂತೆ ಮಾತನಾಡಿದರು. 2005ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಬೆಂಗಳೂರು ಮೆಟ್ರೋ ಯೋಜನೆ ಆರಂಭವಾಗಿದ್ದು ಎಂಬುದನ್ನೂ ನೆನಪಿಸಿದ ಸಿದ್ದರಾಮಯ್ಯ, ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರ ತಾಂತ್ರಿಕ ನೆರವು ಮತ್ತು ಹಣಕಾಸಿನ ನೆರವನ್ನು ನೀಡುತ್ತದೆ. ಹಾಗಾಗಿ ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಕಾರ್ಯಕ್ರಮ ಎಂದಾಗುತ್ತದೆ. ಇದಕ್ಕೆ ರಾಜ್ಯ ಸರ್ಕಾರ 25,387 ಕೋಟಿ ರೂಪಾಯಿ ಖರ್ಚು ಮಾಡಿದೆ. ಕೇಂದ್ರ ಸರ್ಕಾರ ಕೊಟ್ಟದ್ದು ಕೇವಲ 7,468 ಕೋಟಿ ರೂಪಾಯಿ ಮಾತ್ರ. ಕೇಂದ್ರ ಸರ್ಕಾರ ಸಾಲ ಕೊಡುತ್ತದೆ. ಆ ಸಾಲವನ್ನು ನಾವು ಈಗಾಗಲೇ ಬಡ್ಡಿ ಸಮೇತ 3,987 ಕೋಟಿ ರೂಪಾಯಿ ಸಾಲ ಮರು ಪಾವತಿ ಮಾಡಿದ್ದೇವೆ ಎಂದರು.



ಇವತ್ತು ಬೆಂಗಳೂರಿನಿಂದ ಬೆಳಗಾವಿಗೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಉದ್ಘಾಟನೆಗೊಂಡಿದೆ. ಅದೇ ರೀತಿ ಅಮೃತ್ ಸರ್ - ಮಾತಾ ವೈಷ್ಣೋ ದೇವಿ ಹಾಗೂ ಪುಣೆ - ನಾಗಪುರ್ ವಂದೇ ಭಾರತ್ ಕೂಡ ಉದ್ಘಾಟನೆ ಆಗಿದೆ. ನಾವು 4ನೇ ಹಂತದ ಮೆಟ್ರೋ ಯೋಜನೆಗೆ ಡಿಪಿಆರ್ ಸಿದ್ದಪಡಿಸಿ ಕೇಂದ್ರಕ್ಕೆ ಕೊಟ್ಟಿದ್ದೇವೆ. ಕೇಂದ್ರ ಸರ್ಕಾರ ಅದಕ್ಕೆ ಅನುಮೋದನೆ ಕೊಟ್ಟರೆ 2030ರೊಳಗೆ ಆ ಕೆಲಸ ಪೂರ್ಣಗೊಳಿಸಿ 30 ಲಕ್ಷ ಜನರಿಗೆ ನೆರವಾಗಲು ಸಾಧ್ಯವಿದೆ. ಕೇಂದ್ರ ಸರ್ಕಾರ ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಿಗೆ ನೀಡುವ ಆದ್ಯತೆಯನ್ನು ಸ್ವಲ್ಪ ಕರ್ನಾಟಕ ರಾಜ್ಯಕ್ಕೂ ನೀಡಿ ಯೋಜನೆಗೆ ಅನುಮೋದನೆ ನೀಡಬೇಕು ಎಂದು ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಸಮ್ಮುಖದಲ್ಲಿ ಮಾತಿನಲ್ಲೇ ತಿವಿದರು.
ಮೆಟ್ರೋ ರೈಲು ಯೋಜನೆಯನ್ನು ಕೇಂದ್ರದ್ದು ಎನ್ನುವ ರೀತಿ ಬಿಂಬಿಸುತ್ತಿರುವ ಪ್ರಯತ್ನಕ್ಕೆ ಕಾಂಗ್ರೆಸ್ ಸರ್ಕಾರದ ಸಿಎಂ ಸಿದ್ದರಾಮಯ್ಯ ಗಟ್ಟಿ ಸ್ವರದಲ್ಲಿಯೇ ಗುಟುರು ಹಾಕಿದ್ದಾರೆ.
In a rare on-stage political jibe, Karnataka Chief Minister Siddaramaiah reminded Prime Minister Narendra Modi that the state government has contributed more funds than the Centre for the newly inaugurated Bengaluru Metro Yellow Line, urging equal priority for Karnataka as given to Gujarat and Maharashtra.
18-12-25 12:37 pm
HK News Desk
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು ; ಸದನಕ್ಕ...
17-12-25 10:30 pm
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
18-12-25 10:52 am
Mangalore Correspondent
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm